Advertisement

ಶೃಂಗೇರಿಯಲ್ಲೂ ಅದ್ಧೂರಿ ಶೋಭಾಯಾತ್ರೆ

04:15 PM Dec 12, 2019 | Naveen |

ಶೃಂಗೇರಿ: ದತ್ತ ಜಯಂತಿ ಅಂಗವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತಮಾಲಾಧಾರಿಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬುಧವಾರ ಶೋಭಾಯಾತ್ರೆ ನಡೆಸಿದರು. ಭಕ್ತರು ದತ್ತಾತ್ರೇಯರ ಮೂರ್ತಿಯೊಂದಿಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

Advertisement

ಪಟ್ಟಣದ ಶ್ರೀ ಶಂಕರಾಚಾರ್ಯ ವೃತ್ತದ ಬಳಿ ದತ್ತಾತ್ರೇಯ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ದತ್ತಜಯಂತಿ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲೆಡೆ ಕೇಸರಿ ಬಾವುಟ, ಕೇಸರಿ ಧ್ವಜ ರಾರಾಜಿಸುತ್ತಿತ್ತು. ನಾಸಿಕ್‌ ವಾದ್ಯಮೇಳ ಶೋಭಾಯಾತ್ರೆಯ ಮೆರಗು ಹೆಚ್ಚಿಸಿತ್ತು. ಶೋಭಾಯಾತ್ರೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಬಸ್‌ ನಿಲ್ದಾಣದ ಮೂಲಕ ಸಂತೆ ಮಾರುಕಟ್ಟೆ ಬಳಿ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ಬಿ.ಶಿವಶಂಕರ್‌, ಹಿಂದೂಗಳ ಶ್ರದ್ಧಾ ಕೇಂದ್ರವಾದ ದತ್ತಪೀಠದಲ್ಲಿ ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಜಯಂತಿ ಅಂಗವಾಗಿ ಮಾಲಾಧಾರಣೆ ಮಾಡಿ, ವ್ರತಾಚರಣೆ ಕೈಗೊಂಡು ದತ್ತಪೀಠದಲ್ಲಿ ಸ್ವಾಮಿಯ ಪಾದುಕೆ ದರ್ಶನ ಮಾಡಲಾಗುತ್ತದೆ ಎಂದರು. ಸಂಘ ಪರಿವಾರದ ಮುಖಂಡ ಎ.ಎಸ್‌.ನಯನ ಮಾತನಾಡಿ, ದತ್ತ ಪೀಠವು ಅಯೋಧ್ಯೆ ತೀರ್ಪಿನಂತೆ ಹಿಂದೂಗಳ ಪರವಾಗುತ್ತದೆ ಎಂಬ ವಿಶ್ವಾಸವಿದೆ. ದತ್ತ ಭಕ್ತರಿಗೆ ಪೂಜೆ ಸಲ್ಲಿಸಲು ಮುಕ್ತ ಅವಕಾಶ ನೀಡಬೇಕು ಎಂದರು. ಶೋಭಾಯಾತ್ರೆಯಲ್ಲಿ ಬಿಜೆಪಿ ಮುಖಂಡರಾದ ಶ್ರೀಕಾಂತ್‌, ರಾಮಕೃಷ್ಣ, ಟಿ.ಎಸ್‌. ಉಮೇಶ್‌, ರಂಗನಾಥ್‌, ನಟೇಶ್‌, ಅಶೋಕ್‌, ನಾಗೇಂದ್ರ, ಹರೀಶ್‌ ಶೆಟ್ಟಿ, ವೇಣುಗೋಪಾಲ್‌, ಪ್ರವೀಣ, ವಿದ್ಯಾ, ರಾ ಕಾ, ಜ್ಯೋತಿರಾಘವೇಂದ್ರ, ಭಾಗ್ಯನಾಗೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next