Advertisement

ಹನುಮಮಾಲಾ ವಿಸರ್ಜನೆಗೆ ನಿಯಮ ಸಡಿಸಲು ಸಡಿಲಿಸಲು ಶ್ರೀನಾಥ್ ಜಿಲ್ಲಾಡಳಿತಕ್ಕೆ ಮನವಿ 

11:51 AM Dec 15, 2021 | Team Udayavani |

ಗಂಗಾವತಿ: ಪ್ರತಿ ವರ್ಷದಂತೆ ಹನುಮ ಮಾಲಾಧಾರಿಗಳು ಡಿಸೆಂಬರ್ ಹದಿನಾರರಂದು ಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲಾ ವಿಸರ್ಜನೆಗೆ ಆಗಮಿಸುತ್ತಿದ್ದು ಕೊರೋನಾ ನೆಪದಲ್ಲಿ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಿ ಆಗಮಿಸುವ ಭಕ್ತರಿಗೆ ಮೂಲಸೌಕರ್ಯಗಳನ್ನು ಊಟ ವಸತಿ ವ್ಯವಸ್ಥೆಯನ್ನು ಮಾಡುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್ .ಶ್ರೀನಾಥ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ .

Advertisement

ಪ್ರತಿವರ್ಷ ಹನುಮ ಮಾಲೆ ಧರಿಸಿ ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಕಳೆದ 2ವರ್ಷಗಳಿಂದ ಕೊರೋನಾ ನೆಪದಲ್ಲಿ ಹಲವಾರು ನಿಯಮಗಳನ್ನು ವಿಧಿಸಲಾಗಿದ್ದು ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಆದ್ದರಿಂದ ಈ ಈ ವರ್ಷ ಕೊರೋನಾ ಪ್ರಮಾಣ ಕಡಿಮೆ ಇರುವುದರಿಂದ ಬರುವ ಭಕ್ತರಿಗೆ ದೇವರ ದರ್ಶನ ಮಾಡಲು ಊಟದ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಅವಕಾಶ ಕೊಡಬೇಕು .

ಈಗಾಗಲೇ ಜಿಲ್ಲಾಧಿಕಾರಿಗಳು ಹನುಮಮಾಲಾ ವಿಸರ್ಜನೆಗೆ ಯಾರೂ ಆಗಮಿಸಬಾರದು ತಮ್ಮ ಊರುಗಳಲ್ಲೇ ಮಾಲೆಯನ್ನು ವಿಸರ್ಜನೆ ಮಾಡದಂತೆ ಆದೇಶ ಮಾಡಿದ್ದು, ಕೂಡಲೇ ಅದನ್ನು ವಾಪಸ್ ಪಡೆದು ಇಲ್ಲಿಗೆ ಆಗಮಿಸುವ ಎಲ್ಲ ಭಕ್ತರಿಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಶ್ರೀನಾಥ್ ಮನವಿ ಮಾಡಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next