Advertisement

ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ: ಆಟಿಡೊಂಜಿ ಕೂಟ

12:36 PM Aug 02, 2018 | Team Udayavani |

ಡೊಂಬಿವಲಿ: ತುಳುನಾಡ ಜನತೆ ಕೃಷಿಯನ್ನೇ ನಂಬಿಕೊಂಡಿದ್ದ ಆ ಕಾಲದಲ್ಲಿ ಆಷಾಢ ಮಾಸದುದ್ದಕ್ಕೂ ಆಹಾರ ಸಮಸ್ಯೆ ಎದುರಾಗುತ್ತಿತ್ತು. ಗುಡ್ಡಗಾಡುಗಳಲ್ಲಿ ಸಿಗುತ್ತಿದ್ದ ಸೊಪ್ಪು, ಗೆಡ್ಡೆಗೆಣಸು ಆಗಿನ ಆಹಾರವಾಗಿತ್ತು. ಇಂದು ಕಾಲ ಬದಲಾಗಿದೆ. ಇಂದಿನ ಪೀಳಿಗೆಗೆ ಇದರ ಪರಿಚಯ ಇಲ್ಲ.  ಇಂತಹ ಸಂದರ್ಭದಲ್ಲಿ ಆಟಿ ತಿಂಗಳ ಮಹತ್ವ ಹಾಗೂ ತಿಂಡಿ-ತಿನಸುಗಳ ಅರಿವು ಮೂಡಿಸುವ ಉದ್ದೇಶದಿಂದ ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅನಿವಾರ್ಯವಾಗಿದೆ. ಮಕ್ಕಳನ್ನು ಪಾಲಕರು ಇಂತಹ ಕಾರ್ಯಕ್ರಮಗಳಿಗೆ ಕರೆತಂದು ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ-ಬೆಳೆಸಲು ಮುಂದಾಗಬೇಕು ಎಂದು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಅಧ್ಯಕ್ಷ ಆರ್‌. ಕೆ. ಸುವರ್ಣ ನುಡಿದರು.

Advertisement

ಜು. 29ರಂದು ಡೊಂಬಿವಲಿಯ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ವತಿಯಿಂದ ಸ್ಥಳೀಯ ಕ್ಷಿತಿಜ ಸಭಾಗೃಹದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಸೋಸಿಯೇಶನ್‌ ಕಳೆದ ಹಲವಾರು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದೆ. ನಮ್ಮ ಇಂತಹ ಕಾರ್ಯಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.

ಶ್ರೀ ಜಗದಂಬಾ ಮಂದಿರ ಡೊಂಬಿವಲಿ ಇದರ ಗೌರವಾಧ್ಯಕ್ಷ ದಿವಾಕರ ರೈ ಇವರು ಮಾತನಾಡಿ, ಸಂಘದ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಹಾರೈಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ ಇವರು ಮಾತನಾಡಿ, ಆಷಾಢ ಮಾಸದಲ್ಲಿ ಹೆಣ್ಣು ತವರಿಗೆ ಹೋಗುವ ಸಂಪ್ರದಾಯವಿತ್ತು. ಆದರೆ ಈಗಿನ ಪರಿವಾರ ವ್ಯಾಪ್ತಿಯು ಗಂಡ-ಹೆಂಡತಿ-ಮಗು ಎಂಬಲ್ಲಿಗೆ ಬಂದು ನಿಂತಿದೆ. ಹಾಗಿರುವಾಗ ಹೆಂಡತಿ ತವರಿಗೆ ಹೋಗುವ ಅವಕಾಶವಿಲ್ಲದಂತಾಗಿದೆ ಎಂದರು.

ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಅಜೆಕಾರು  ಜಯ ಶೆಟ್ಟಿ ಸ್ವಾಗತಿಸಿದರು. ಸಂಘದ ಪದಾಧಿಕಾರಿಗಳು ಅತಿಥಿಗಳನ್ನು ಫಲ ಪುಷ್ಪವನ್ನಿತ್ತು ಗೌರವಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್‌ ಕರ್ಕೇರ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಯುವ ವಿಭಾಗದ ಸದಸ್ಯ ರೂಪೇಶ್‌ ಅಂಚನ್‌ ಅವರು ಆಟಿ ಕಲೆಂಜನ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. 
ಅಸೋಸಿಯೇಶನ್‌ ನಾಡು-ನುಡಿಯನ್ನು ಬಿಂಬಿಸುವ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿ ಸುವಲ್ಲಿ ಮುಂಚೂಣಿಯಲ್ಲಿದೆ. ಸಾಮಾಜಿಕ, ಶಿಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತುಳುನಾಡ ಶ್ರೇಷ್ಠತೆಯನ್ನು ಬಿಂಬಿಸುವ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅಭಿನಂದನೀಯ. ಯುವತಿ ಯರು ಶಿಕ್ಷಣ-ಉದ್ಯೋಗಕ್ಕೆ ಸೀಮಿತವಾಗಿರದೆ ಅಡುಗೆ ಕೋಣೆಯತ್ತ ಆಕರ್ಷಿಸುವಂತಾಗಬೇಕು ಎಂದು ಜಗಜ್ಯೋತಿ ಕಲಾವೃಂದ ಡೊಂಬಿವಲಿ ಮಾಜಿ ಅಧ್ಯಕ್ಷ ವಸಂತ ಎನ್‌. ಸುವರ್ಣ ಹೇಳಿದರು.

Advertisement

ದಿವ್ಯಾ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ಇವರು ಪಾಡªನ ಹಾಡಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶೋಭಾ ಟಿ. ಪೂಜಾರಿ ಆಟಿ ಕಳಂಜ ಪ್ರಾತ್ಯಕ್ಷಿಕೆಯ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸುಜಾತಾ ಶೆಟ್ಟಿ, ಆಶ್ಲೇಷಾ ಶೆಟ್ಟಿ ಇವರಿಂದ ಪ್ರಹಸನ, ಉದಯಾ ಶೆಟ್ಟಿ, ಚಿತ್ರಾ ಸಾಲ್ಯಾನ್‌, ದಿವ್ಯಾ ಶೆಟ್ಟಿ, ಕಮಲಾಕ್ಷೀ ಸಾಲ್ಯಾನ್‌, ಶಕುಂತಳಾ ಸಾಲ್ಯಾನ್‌, ಭಾರತಿ ಶೆಟ್ಟಿ, ಶಕುಂತಳಾ ಅಮೀನ್‌ ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಯುವ ವಿಭಾಗದ ವಿನೋದ್‌ ಕರ್ಕೇರ ಇವರು ಒಗಟು ಬಿಡಿಸುವ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸಂಘದ ಸದಸ್ಯರಿಂದ ತೆಂಗಿನಕಾಯಿ ಕಟ್ಟುವ ಸ್ಪರ್ಧೆ ನಡೆಯಿತು.

ಮಹಿಳಾ ವಿಭಾಗದ ಸದಸ್ಯೆಯರು ಆಟಿ ತಿಂಗಳ ಖಾದ್ಯ-ಪದಾರ್ಥಗಳನ್ನು ತಯಾರಿಸಿ ತಂದು ಪ್ರದರ್ಶಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಸಮಾಜ ಸೇವಕ ಜೈಸಿಂಗ್‌ ಪಾಟೀಲ್‌, ಸುರೇಶ್‌ ಶೆಟ್ಟಿ, ಕಾರ್ಯದರ್ಶಿ ದಾಮೋದರ ಸುವರ್ಣ, ಕೋಶಾಧಿಕಾರಿ ಸದಾಶಿವ ಸಾಲ್ಯಾನ್‌, ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್‌ ಕರ್ಕೇರ ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದಾಮೋದರ ಸುವರ್ಣ ವಂದಿಸಿದರು.

ತುಳುನಾಡಿನಲ್ಲಿ ಪ್ರಚಲಿತವಿರುವ ಆಟಿ ಕಳಂಜದ ಪ್ರಾತ್ಯಕ್ಷಿಕೆ, ತೆಂಗಿನಕಾಯಿ ಕಟ್ಟುವುದು, ಖಾದ್ಯ ಪದಾರ್ಥಗಳ ಪ್ರದರ್ಶನ, ಚೆನ್ನೆಮಣೆಯಾಟ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರುಕಳಿಸಲು ಪ್ರಯತ್ನಿಸಿದಂತಾಗುತ್ತದೆ. ಯುವ ಪೀಳಿಗೆಯು ಇಂತಹ ಕಾರ್ಯಕ್ರಮಗಳತ್ತ ಆಕರ್ಷಿತರಾಗಬೇಕು. ಸಂಘದ ಯುವ ವಿಭಾಗವು ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಹಕರಿಸುತ್ತಿದ್ದು, ಮಹಿಳಾ ವಿಭಾಗವು ಇಂಥ‌ಹ ಕಾರ್ಯಕ್ರಮಗಳ ಮುತುವರ್ಜಿ ವಹಿಸಬೇಕು.

-ಇಂದ್ರಾಳಿ ದಿವಾಕರ ಶೆಟ್ಟಿ, ಸಲಹೆಗಾರರು, ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ

Advertisement

Udayavani is now on Telegram. Click here to join our channel and stay updated with the latest news.

Next