Advertisement

ಶ್ರೀನಗರ : ಉಗ್ರರ ಗ್ರೆನೇಡ್ ದಾಳಿ ಇಬ್ಬರು ಸೈನಿಕರು ಸೇರಿದಂತೆ, ನಾಲ್ವರು ನಾಗರಿಕರಿಗೆ ಗಾಯ

09:55 AM Feb 03, 2020 | Suhan S |

ಶ್ರೀನಗರ : ಉಗ್ರರ ಗ್ರೆನೇಡ್ ದಾಳಿಯಿಂದ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿಗಳು ಸೇರಿದಂತೆ,ನಾಲ್ವರು ನಾಗರಿಕರು ಗಾಯಗೊಂಡ ಘಟನೆ ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ರವಿವಾರ ನಡೆದಿದೆ.

Advertisement

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು ನಗರದ ಪ್ರತಾಪ್ ಪಾರ್ಕ್ ಪ್ರದೇಶದ ಬಳಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ ಎಂದು ಹೇಳಿದ್ದಾರೆ. ಸಿಆರ್‌ಪಿಎಫ್ ಪಡೆಯ ವಕ್ತಾರ ಪಂಕಜ್ ಸಿಂಗ್, ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡವರನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರೆನೇಡ್ ದಾಳಿ ನಾಗರಿಕರಲ್ಲಿ ಭೀತಿ ಉಂಟುಮಾಡಿದೆ.ಅದರಲ್ಲೂ ಭಾನುವಾರದ ಮಾರುಕಟ್ಟೆಯಲ್ಲಿ ಈ ದಾಳಿ ಭಯವನ್ನು ಸೃಷ್ಟಿಸಿದ್ದು ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next