Advertisement

ಅಭಿಮಾನಿಗಳ ಜೊತೆ ಶ್ರೀಮುರಳಿ ಬರ್ತ್‌ಡೇ

11:27 AM Dec 18, 2018 | |

ನಟ ಶ್ರೀಮುರಳಿ ನಿನ್ನೆ (ಡಿ.17)ರಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಮಾದರಿಯ ಕೇಕ್‌ಗಳನ್ನು ಕತ್ತರಿಸಿ ಸಂಭ್ರಮಿಸಿದರು.

Advertisement

ಇನ್ನು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೊದಲು ಜಯನಗರದ ನಾಲ್ಕನೇ ಹಂತದಲ್ಲಿರುವ ಗಣೇಶ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಶ್ರೀಮುರಳಿ, ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಭಿಮಾನಿಗಳ ಜೊತೆ ರೋಡ್‌ ಶೋ ಮೂಲಕ ಶಾಲಿನಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರೋರಿಂಗ್‌ ಉತ್ಸವದಲ್ಲಿ ಪಾಲ್ಗೊಂಡರು. 

ರೋರಿಂಗ್‌ ಉತ್ಸವದಲ್ಲಿ ಅಭಿಮಾನಿಗಳು ಶ್ರೀಮುರಳಿ ಬರ್ತ್‌ಡೇ ಪ್ರಯುಕ್ತ ರಕ್ತದಾನ, ವೈದ್ಯಕೀಯ ಶಿಬಿರ, ಅನ್ನದಾನ ಮತ್ತು ಆಟೋ ರಿಕ್ಷಾ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಇನ್ನು ಅಭಿಮಾನಿಗಳ ಆಸೆಯಂತೆ ಶ್ರೀ ಮುರಳಿ ಕೂಡ ಆಟೋ ಓಡಿಸಿ ಸಂಭ್ರಮಿಸಿದರು.

ಶ್ರೀ ಮುರಳಿ ಬರ್ತ್‌ಡೇ ಪ್ರಯುಕ್ತ “ಭರಾಟೆ’ ಚಿತ್ರತಂಡ ಚಿತ್ರದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು “ಮದಗಜ’ ಚಿತ್ರತಂಡ ಕೂಡ ಹಾಜರಿದ್ದು ಚಿತ್ರದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next