ವರ್ಷದ ದೇಶದ 100 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದು, ಪ್ರಧಾನಿಗಳ ಬಳಿ ಕುಳಿತು ಜ.26 ರ ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿ ಬಾಕ್ಸ್‌ನಲ್ಲಿ ಕುಳಿತು ಪರೇಡ್ ವೀಕ್ಷಣೆಗೆ ಆಗಮಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪತ್ರ ಕಳುಹಿಸಿದೆ.
Advertisement
ಪ್ರತಿ ವರ್ಷ ದೇಶದ ಎಲ್ಲಾ ಅಧಿಕೃತ ಸಿಬಿಎಸ್ಸಿ, ಐಸಿಎಸ್ಸಿ ಹಾಗೂ ವಿಶ್ವವಿದ್ಯಾಲಯಗಳಿಂದ ಆಯಾ ವರ್ಷದ ಒಟ್ಟಾರೆ 100ಮಂದಿ ಟಾಪರ್ಅನ್ನು ಪ್ರಧಾನ ಮಂತ್ರಿಗಳ ಬಾಕ್ಸ್‌ನಿಂದಲೇ ಗಣರಾಜ್ಯೋತ್ಸವ ವೀಕ್ಷಣೆಗೆ ಆಹ್ವಾನಿಸಲಾಗುತ್ತಿದ್ದು, ಈ ಬಾರಿ ಕೋಲಾರದ ಸಿ.ಎಸ್.ಶ್ರೀಲತಾರಿಗೆ ಈ ಸುಯೋಗ ಲಭಿಸಿದೆ. ಕಳೆದೆರಡು ವರ್ಷಗಳ ಹಿಂದೆ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿಯಲ್ಲಿ ಬೆಂಗಳೂರು ವಿವಿ ಪ್ರಥಮ ರ್‍ಯಾಂಕ್‌ಗೆ ಭಾಜನರಾಗಿ 50ನೇ ಘಟಿಕೋತ್ಸವದಲ್ಲಿ
ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದರು. 2017ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್ಸಿ ಗಣಿತ
ಶಾಸOಉದಲ್ಲೂ ಪ್ರಥಮ ರ್‍ಯಾಂಕ್ ಪಡೆದಿದ್ದರು