Advertisement

ಮಾದಕ ಲೋಕಕ್ಕೆ ಲಂಕೆಯ ಲಿಂಕ್! ದಕ್ಷಿಣ ಭಾರತದ ರಾಜ್ಯಗಳಿಂದಲೇ ವಿದೇಶಗಳಿಗೆ ಗಾಂಜಾ?

11:50 AM Sep 14, 2020 | Suhan S |

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ತನಿಖೆ ವೇಳೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ ಶ್ರೀಲಂಕಾಕ್ಕೆ ಮಾದಕ ವಸ್ತುಗಳ ಸಾಗಾಟವಾಗುತ್ತಿರುವ ಸ್ಫೋಟಕ ಮಾಹಿತಿ ದೊರೆತಿದೆ.

Advertisement

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಗೃಹ ಇಲಾಖೆ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಅಂತಾ ರಾಷ್ಟ್ರೀಯ ಡ್ರಗ್‌ ಮಾಫಿಯಾ ಬಗ್ಗೆ ತನಿಖೆ ನಡೆಸುವಂತೆ ಸೂಚಿ ಸಿದೆ. ಜತೆಗೆ ಈಗಾಗಲೇ ದೇಶದ ನಾನಾ ಕಡೆಗಳಲ್ಲಿ ಕಾರ್ಯಾಚರಣೆಗಿಳಿದಿರುವ ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಅಧಿಕಾರಿಗಳ ಜತೆ ನಿರಂತರ ಸಂಪರ್ಕ ದಲ್ಲಿದ್ದುಕೊಂಡು ಈ ಕಾರ್ಯ ನಡೆಸಬೇಕು ಎಂದು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಮಾದಕ ವಸ್ತುಗಳು ನೈಜಿರಿಯಾ, ಆಫ್ರಿಕಾ ಸೇರಿ ಕೆಲ ನಿರ್ದಿಷ್ಟ ದೇಶಗಳಿಂದ ಭಾರತಕ್ಕೆ ಬರು ತ್ತ ವೆ ಎಂಬುದು ಈ ಹಿಂದಿನ ಬಹಳಷ್ಟು ಪ್ರಕರಣಗಳಲ್ಲಿ ಪತ್ತೆಯಾಗಿತ್ತು. ಆದರೆ, ಅಧಿಕಾರಿಗಳು ಹೇಳುವ ಪ್ರಕಾರ, ಹಿಂದಿ ನಿಂದಲೂ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಮಾದಕ ದ್ರವ್ಯಗಳು ಶ್ರೀಲಂಕಾ, ಇಂಡೋ  ನೇಷ್ಯಾ, ಫಿಲಿಫೈನ್ಸ್‌, ಮಲೇಷಿಯಾ ಮತ್ತು ಆಗ್ನೇಯ ಭಾಗದ ದೇಶಗಳಿಗೆ ಹೋಗು ತ್ತಿ ದ್ದವು. ಶ್ರೀಲಂಕಾಕ್ಕೆ ಗಾಂಜಾ ಸೇರಿದಂತೆ ಹಲವು ಮಾದಕ ವಸ್ತುಗಳು ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣಗಳಿಂದ ಹೋಗು ತ್ತಿ ವೆ. ಪ್ರಮುಖವಾಗಿ ತಮಿಳುನಾಡು ಮತ್ತು ಕೇರಳದ ಸಮುದ್ರ ಗಡಿಗಳಿಂದ ಶ್ರೀಲಂಕಾ ತಲುಪುತ್ತಿವೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ಈ ವಿಚಾರ ಪ್ರತಿಯೊಂದು ಹಂತದ ಅಧಿಕಾರಿಗಳಿಗೂ ಗೊತ್ತಿತ್ತು. ಆದರೆ, ರಾಜಕೀಯ ಒತ್ತಡ ಹಾಗೂ ಇನ್ನಿತರೆ ಕಾರಣಗಳಿಗೆ ಬಹಿರಂಗವಾಗದ್ದಂತೆ ಜಾಗ್ರತೆ ವಹಿಸಿದ್ದರು. ಮತ್ತೂಂದೆಡೆ ಕೆಲ ಪೊಲೀಸ್‌ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಈ ದಂಧೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಆದರೆ, ಸ್ಯಾಂಡಲ್‌ವುಡ್‌ ಪ್ರಕರಣ ಬಯಲಾಗುತ್ತಿದ್ದಂತೆ ಬೇರೆ ಬೇರೆ ದೃಷ್ಟಿಕೋನಗಳಿಂದ ತನಿಖೆ ನಡೆಯಲು ಆರಂಭವಾಗಿವೆ. ಬೆಂಗಳೂರು ಪೊಲೀಸರು ಮಾತ್ರವಲ್ಲದೆ ಜಾರಿ ನಿರ್ದೇಶನಾಲಯ, ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು, ಮಾದಕ ದ್ರವ್ಯ ನಿಯಂ ತ್ರಣ ಘಟಕ (ಎನ್‌ಸಿಬಿ) ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ಗಳು ಒಟ್ಟಾರೆ ತನಿಖೆಯಲ್ಲಿ ಪಾಲ್ಗೊಂಡಿವೆ.

ಮುಖ್ಯವಾಗಿ ಕರ್ನಾಟಕದಿಂದ ಯಾವ ಮಾರ್ಗದಲ್ಲಿ ಶ್ರೀಲಂಕಾ ಹಾಗೂ ಇತರೆ ದೇಶಗಳ ಪೆಡ್ಲರ್‌ಗಳ ಕೈ ಸೇರುತ್ತಿವೆ. ಇಲ್ಲಿನ ಡ್ರಗ್‌ಪೆಡ್ಲರ್‌ಗಳು ಮತ್ತು “ವಿಐಪಿ’ ಗಳಿಗೆ ಶ್ರೀಲಂಕಾ “ಲಿಂಕ್‌’ ಏನಿದೆ? ಮಾದಕ ವಸ್ತು ಸಾ ಗಾಟ, ಹವಾಲಾದಲ್ಲಿ ಯಾರು ಪಾಲ್ಗೊಂಡಿದ್ದಾರೆ ಎಂ ಬುದನ್ನು ಪತ್ತೆ ಹಚ್ಚಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Advertisement

ಕಳುಹಿಸುವುದು ಹೇಗೆ?: ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು,ತೆಲಂಗಾಣದಿಂದ ಗಾಂಜಾ ಹಾಗೂ ಇತರೆ ಐಷಾರಾಮಿ ಮಾದಕ ವಸ್ತುಗಳನ್ನು ಶ್ರೀಲಂಕಾ ಹಾಗೂ ಆಗ್ನೇಯ ರಾಷ್ಟ್ರಗಳಿಗೆ ವಿಮಾನ ಮತ್ತು ಹಡಗಿನ ಮೂಲಕ ರಫ್ತು ಮಾಡಲಾಗುತ್ತದೆ. ಈ ರಾಜ್ಯಗಳ ಅರಣ್ಯಗಳಲ್ಲಿ ಬೆಳೆಯುವ ಗಾಂಜಾವನ್ನು ಒಣಗಿಸಿ ಅವುಗಳನ್ನು ಹೊಗೆಸೊಪ್ಪಿನ ಒಳಭಾಗದಲ್ಲಿ ಪ್ರತ್ಯೇಕವಾಗಿ ಇಡುತ್ತಾರೆ. ಇನ್ನು ಹ್ಯಾಶಿಶ್‌ ಮತ್ತು ಇತರೆ ಮಾದಕ

ವಸ್ತುಗಳನ್ನು ಸಹ ರಹಸ್ಯ ಪ್ಯಾಕೆಟ್‌ಗಳ ಮೂಲಕ ಕಾರ್ಗೋ ಮತ್ತು ಹಡಗಿನ ಮೂಲಕ ತಮಿಳುನಾಡಿನ ಕನ್ಯಾಕುಮಾರಿ ಮತ್ತು ಕೇರಳದ ಕೊಚ್ಚಿಯಿಂದ ಶ್ರೀಲಂಕಾಕ್ಕೆ ಡ್ರಗ್ಸ್‌ ಸರಬರಾಜು ಮಾಡಲಾಗುತ್ತದೆ. ಎಂಡಿಎಂಎ, ಎಲ್‌ಎಸ್‌ಡಿ ಇತರೆ ಐಷಾರಾಮಿಮಾದಕ ವಸ್ತುಗಳನ್ನು ನೈಜಿರಿಯಾ, ಆಫ್ರಿಕಾ ಸೇರಿ ಕೆಲ ದೇಶಗಳಿಂದ ಖರೀದಿಸುವ ಈ ರಾಜ್ಯಗಳ ರಾಜಧಾನಿ  ಗಳಲ್ಲಿರುವ ಅಂತಾರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್‌ಗಳು ವಾಯು ಮತ್ತು ಜಲಮಾರ್ಗದ ಮೂಲಕ ಸರಕು- ಸರಂಜಾಮುಗಳಲ್ಲಿ ಗೌಪ್ಯವಾಗಿ ಮಾದಕ ವಸ್ತುಗಳು ಸರಬರಾಜು ಆಗುತ್ತವೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಹಂತಕ್ಕೂ ಕೈ ಬದಲಾವಣೆ!: ಡ್ರಗ್ಸ್‌ ಮಾಫಿಯಾ ಎಂಬುದು ಬಹುದೊಡ್ಡ ಜಾಲ. ಒಂದು ವ್ಯಕ್ತಿಯಿಂದ ಮತ್ತೂಬ್ಬ ವ್ಯಕ್ತಿಗೆ ಬದಲಾಗುತ್ತದೆ. ಆದರೆ, ಈ ವ್ಯಕ್ತಿಗಳ ಹಿಂದಿನ ಕಾಣದ ಕೈ ಯಾವುದು ಎಂದು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ಮೂಲಬೇರು ಪತ್ತೆ ಹಚ್ಚಲು ರಾಜ್ಯ ಪೊಲೀಸರು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಬಂಧಿತ ಆರೋಪಿಗಳು ಹೇಳಿದ ವ್ಯಕ್ತಿಯೇ ನಕಲಿ  ಯಾಗಿರುತ್ತಾನೆ. ಸಾಮಾನ್ಯವಾಗಿ ಬೆಂಗಳೂರಿನಿಂದ ತಮಿಳುನಾಡು ಅಥವಾ ಆಂಧ್ರಪ್ರದೇಶ, ಕೇರಳಕ್ಕೆ ಡ್ರಗ್ಸ್‌ ಸರಬರಾಜು ಮಾಡಲು ಕನಿಷ್ಠ 6-8 ತಂಡಗಳು ಕಾರ್ಯ ನಿರ್ವಹಿಸುತ್ತವೆ. ಪ್ರತಿ ತಂಡಕ್ಕೂ ತನಗೆ ಮಾಲು ಕೊಟ್ಟ ವ್ಯಕ್ತಿಯ ಹಿನ್ನೆಲೆ ತಿಳಿದಿರುವುದಿಲ್ಲ. ಹೀಗಾಗಿ ಈದಂಧೆ ಬೃಹದಾಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ತಪ್ಪೊಪ್ಪಿಕೊಂಡ ನಟಿಯರು! : ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಮತ್ತು ಸಂಜನಾ ತನಿಖಾಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಜೈಲೋ? ಬೇಲೋ? ಎಂಬ ನಿರ್ಧಾರ ಹಿನ್ನೆಲೆಯಲ್ಲಿ ತಪ್ಪೊಪ್ಪಿಕೊಳ್ಳದಿದ್ದರೆ ಮತ್ತೂಮ್ಮೆ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ನಟಿಯರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ವಿರೇನ್‌ ಖನ್ನಾ ಮತ್ತು ರವಿಶಂಕರ್‌ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಹೋಗುತ್ತಿದ್ದೇವು. ಸ್ನೇಹಿತರು ಹಾಗೂ ಕೆಲ ಪರಿಚಿತ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದೆವು. ಆದರೆ, ಡ್ರಗ್ಸ್‌ ಸೇವಿಸಿಲ್ಲ. ಅದರ ಬಗ್ಗೆ ಮಾಹಿತಿಯೂ ಇಲ್ಲ. ಈ ಪಾರ್ಟಿಗಳಲ್ಲಿಯೇ ಪ್ರಶಾಂತ್‌ ರಂಕಾ, ಆದಿತ್ಯ ಆಳ್ವಾ ಹಾಗೂ ಕೆಲ ವ್ಯಕ್ತಿಗಳು ಪರಿಚಯವಾದರು. ಅವರೊಂದಿಗೆ ಬೇರೆ ಯಾವುದೇ ರೀತಿಯ ಸಂಪರ್ಕ ಇಲ್ಲ. ನಟಿ ಸಂಜನಾ, ಒಮ್ಮೆ ಶ್ರೀಲಂಕಾದ ಕ್ಯಾಸಿನೋ ಪಾರ್ಟಿಗೆ ಹೋಗಿದ್ದೇನೆ. ಆದರೆ, ಅಲ್ಲಿ ಡ್ರಗ್ಸ್‌ ದಂಧೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.’ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಇಬ್ಬರ ಮೊಬೈಲ್‌ಗ‌ಳಲ್ಲಿ ಡಿಲೀಟ್‌ ಮಾಡಲಾಗಿದ್ದ ಮಾಹಿತಿಯನ್ನು ರಿಟ್ರೀವ್‌ ಮಾಡಲಾಗಿದ್ದು, ಅವುಗಳು ಮುಖ್ಯ ಸಾಕ್ಷ್ಯವಾಗಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈಗಾಗಲೇ ನಾಲ್ವರ ಸೆರೆ :  ಈಗಾಗಲೇ ಸ್ಯಾಂಡಲ್‌ವುಡ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್‌ ಪೆಡ್ಲರ್‌ಗಳ ಜತೆ ನೇರ ಸಂಪರ್ಕ ಹೊಂದಿರುವ ಆಫ್ರಿಕಾ ಪ್ರಜೆ ಸೇರಿದಂತೆ ನಾಲ್ಕು ಮಂದಿ ಆರೋಪಿಗಳ ಬಂಧಿ ಸಲಾಗಿದೆ. ಹಲವು ಆರೋಪಿಗಳು ಶ್ರೀಲಂಕಾದಲ್ಲಿ “ಕ್ಯಾಸಿನೋ’ ಪಾರ್ಟಿಗೆ ಕೆಲವು ಮಾಡೆಲ್‌ಗ‌ಳು, ಸಿನಿ ನಟಿಯರೊಂದಿಗೆ ತೆರಳುತ್ತಿರುವುದು ತನಿಖೆಯಿಂದ ಈಗಾಗಲೇ ಗೊತ್ತಾಗಿದೆ. ಈ ಜಾಡು ಹಿಡಿದು ಶ್ರೀಲಂಕಾಕ್ಕೆ ಹೇಗೆ ಸರಬರಾಜು ಆಗುತ್ತದೆ. ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next