Advertisement

ಲಂಕಾ: ಉಗ್ರ ಹಿಂಸೆಗೆ 10 ಸಾವು

12:53 AM Apr 28, 2019 | Team Udayavani |

ಕೊಲಂಬೊ: ಶ್ರೀಲಂಕಾ ದಲ್ಲಿ 250ಕ್ಕೂ ಹೆಚ್ಚು ನಾಗರಿಕರನ್ನು ಬಲಿಪಡೆದ ಈಸ್ಟರ್‌ ರವಿವಾರದ ಉಗ್ರ ದಾಳಿ ಘಟನೆ ಮರೆಯಾಗುವ ಮುನ್ನವೇ ಶನಿವಾರ ಶೋಧ ಕಾರ್ಯದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿ 6 ಮಕ್ಕಳು ಹಾಗೂ ಮೂವರು ಮಹಿಳೆಯರ ಸಹಿತ 10 ಜನರನ್ನು ಬಲಿಪಡೆದಿದ್ದಾರೆ.

Advertisement

ಉಗ್ರರು ಕಲ್ಮುನೈ ನಗರದಲ್ಲಿರುವ ಮನೆಯಲ್ಲಿ ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶ್ರೀಲಂಕಾ ವಿಶೇಷ ಪಡೆ ಹಾಗೂ ಸೇನೆ ಶೋಧ ಕಾರ್ಯ ನಡೆಸಿದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಸೇನೆ ಹಾಗೂ ಉಗ್ರರ ಗುಂಡಿನ ದಾಳಿ ಮಧ್ಯೆ ನಾಗರಿಕರು ಸಿಲುಕಿಕೊಂಡರು. ಘಟನೆಯಲ್ಲಿ ಮೃತರಾಗಿರುವ ಮಹಿಳೆಯರು ಮತ್ತು ಮಕ್ಕಳು ಶೋಧ ಕ್ಕೊಳಗಾದ ಮನೆಯಲ್ಲಿಯೇ ವಾಸಿಸುತ್ತಿದ್ದರು ಎಂದು ಸಿಎನ್‌ಎನ್‌ ವೆಬ್‌ಸೈಟ್‌ ವರದಿ ಮಾಡಿದೆ.

ಈ ಮಧ್ಯೆ ಮೂವರು ಉಗ್ರರು ಸ್ವತಃ ಸ್ಫೋಟಿಸಿಕೊಂಡು ಸತ್ತಿದ್ದಾರೆ. ಮೂಲಗಳ ಪ್ರಕಾರ ಒಟ್ಟು ಆರು ಉಗ್ರರು ಹತ್ಯೆಯಾಗಿದ್ದಾರೆ ಮತ್ತು ಮೂವರು ಉಗ್ರರು ಗಾಯಗೊಂಡಿದ್ದಾರೆ. ಒಟ್ಟು 16 ಮೃತದೇಹಗಳನ್ನು ದಾಳಿ ಸ್ಥಳದಿಂದ ಹೊರತೆಗೆಯಲಾಗಿದೆ. ಈ ಭಾಗದಿಂದ ಭಾರೀ ಪ್ರಮಾಣದ ಸ್ಫೋಟಕಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಡಿಟೋ ನೇಟರುಗಳು, ಆತ್ಮಾಹುತಿ ದಾಳಿಯ ಸಂದರ್ಭ ಬಳಸುವ ಕಿಟ್‌ಗಳು, ಸೇನೆ ಸಮವಸ್ತ್ರ ಮತ್ತು ಐಸಿಸ್‌ ಧ್ವಜಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈವರೆಗೆ ದಾಳಿಗೆ ಸಂಬಂಧಿಸಿ 76 ಶಂಕಿತರನ್ನು ಬಂಧಿಸಲಾಗಿದೆ. ಇನ್ನೊಂದೆಡೆ ದಕ್ಷಿಣ ಕೊಲಂಬೊ ಹೊರವಲಯದಲ್ಲಿ ವೆಲ್ಲವಟ್ಟಾ ರೈಲು ನಿಲ್ದಾಣದಲ್ಲಿ ಒಂದು ಕಿಲೋ ಸ್ಫೋಟಕವನ್ನು ವಶಪಡಿಸಿಕೊಳ್ಳ ಲಾಗಿದೆ.

ಅಮೆರಿಕನ್ನರು ವಾಪಸ್‌
ಶ್ರೀಲಂಕಾಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಎರಡು ಬಾರಿ ಯೋಚಿಸುವಂತೆ ತನ್ನ ನಾಗರಿಕರಿಗೆ ಅಮೆರಿಕ ಸೂಚನೆ ನೀಡಿದೆ. ಅಲ್ಲದೆ ಇದರೊಂದಿಗೆ ಶಾಲೆಗೆ ತೆರಳುವ ಮಕ್ಕಳನ್ನು ಹೊಂದಿರುವ ಕುಟುಂಬವು ಅಮೆರಿಕಕ್ಕೆ ವಾಪಸಾಗಬೇಕು ಎಂದು ಸೂಚನೆ ನೀಡಿದೆ. ತುರ್ತು ಸೇವೆ ಹೊರತು ಪಡಿಸಿ ಇತರರು ಕೂಡಲೇ ಸ್ವದೇಶಕ್ಕೆ ಮರಳಬೇಕು ಎಂದು ಸೂಚಿಸಲಾಗಿದೆ.

Advertisement

ಐಸಿಸ್‌ ಪತ್ರಿಕೆಯಲ್ಲಿ ವಿಶೇಷ ವರದಿ!
ಶ್ರೀಲಂಕಾ ಸ್ಫೋಟಕ್ಕೆ ನಾವೇ ಹೊಣೆ ಎಂದು ಐಸಿಸ್‌ ಈಗಾಗಲೇ ಹೇಳಿಕೊಂಡಿದ್ದು, ಪ್ರತಿ ವಾರ ಪ್ರಕಟಿಸುವ ನಿಯತಕಾಲಿಕೆಯಲ್ಲಿ ಸ್ಫೋಟದ ಬಗ್ಗೆ ಇನ್ನಷ್ಟು ವಿವರಗಳನ್ನು ಐಸಿಸ್‌ ನೀಡಿದೆ. ನಮ್ಮ ಟಾರ್ಗೆಟ್‌ ಕ್ರಿಶ್ಚಿಯನ್ನರು ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನೊಂದೆಡೆ ಸೌದಿ ಅರೇಬಿಯಾದಲ್ಲೂ ಎ. 21ರಂದು ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ ಅದು ವಿಫ‌ಲವಾಗಿದೆ ಎಂಬ ಮಾಹಿತಿಯನ್ನೂ ನೀಡಲಾಗಿದೆ.

ಅಗತ್ಯವಿಲ್ಲದಿದ್ದರೆ ಲಂಕೆಗೆ ಹೋಗಬೇಡಿ
ಶ್ರೀಲಂಕಾಕ್ಕೆ ತುರ್ತು ಅಗತ್ಯವಿಲ್ಲದಿದ್ದರೆ ಪ್ರಯಾಣಿಸಬೇಡಿ ಎಂದು ಭಾರತವು ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ತುರ್ತು ಪ್ರಯಾಣ ಮಾಡುವ ಅಗತ್ಯವಿರುವವರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಇನ್ನು ಶ್ರೀಲಂಕಾದ ಭಾರತೀಯರು ಕೊಲಂಬೊ, ಹಂಬಂತೋಟ ಹಾಗೂ ಜಾಫಾ°ದಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next