ಕೊಲೊಂಬೋ: ಶೀಘ್ರದಲ್ಲಿಯೇ ದೇಶದ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದು ಶ್ರೀಲಂಕಾ ಸರಕಾರಕ್ಕೆ ಅಲ್ಲಿನ ವಿಪಕ್ಷಗಳು ಎಚ್ಚರಿಕೆ ನೀಡಿವೆ. ಇಲ್ಲವಾದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತದೆ ಎಂದು ಶುಕ್ರವಾರ ಎಚ್ಚರಿಕೆ ನೀಡಿವೆ.
ಗುರುವಾರದ ವರೆಗಿನ ಬೆಳವಣಿಗೆಯಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ನೇತೃತ್ವದ ಸರಕಾರದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದವು. ಶುಕ್ರವಾರ ಮಾತನಾಡಿದ ವಿಪಕ್ಷ ನಾಯಕ ಸಜಿತ್ ಪ್ರೇಮದಾಸ, ಸದ್ಯ ದೇಶವನ್ನು ಸಂಕಷ್ಟದಿಂದ ಪಾರು ಮಾಡುವ ಹೊಣೆ ಸರಕಾರದ್ದು. ಅದನ್ನು ನಡೆಸದೇ ಇದ್ದರೆ, ಅವಿಶ್ವಾಸಗೊತ್ತುವಳಿ ಮಂಡಿಸಲಾಗುತ್ತದೆ.
ಜತೆಗೆ ಅಧ್ಯಕ್ಷೀಯ ನೇತೃತ್ವದ ಸರಕಾರ ವ್ಯವಸ್ಥೆ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ. ಗೋಟ ಬಯ ರಾಜಪಕ್ಸ ನೇತೃತ್ವದ ಮಧ್ಯಾಂತರ ಸರಕಾರದ ಬಗ್ಗೆ ಯಾವುದೇ ವಿಶ್ವಾಸ ಇಲ್ಲ ಎಂದಿದ್ದಾರೆ.
ಹುದ್ದೆಗೆ ಮರಳಿದ ಅಲಿ ಸಬ್ರಿ: ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಲಿ ಸಬ್ರಿ ಶುಕ್ರವಾರ ಕೊನೆಗೂ ಹೊಸ ಹೊದ್ದೆ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಮಾಸಾಂತ್ಯಕ್ಕೆ ಬರಿದು?: ದ್ವೀಪ ರಾಷ್ಟ್ರಕ್ಕೆ ಭಾರತ ದಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯ ಹೊರ ತಾಗಿಯೂ ಕೂಡ ಅಲ್ಲಿ ಮಾಸಾಂತ್ಯಕ್ಕೆ ಪೆಟ್ರೋಲ್ ಬಂಕ್‌ಗಳು ಬರಿದಾಗುವ ಆತಂಕ ಎದುರಾಗಿದೆ.