Advertisement

ಶ್ರೀಕೃಷ್ಣಮಠ ಸುವರ್ಣಗೋಪುರ ಸಮರ್ಪಣೆ: ಸಂಭ್ರಮ, ಸಡಗರ

12:19 PM Jun 11, 2019 | Team Udayavani |

ಉಡುಪಿ: ಶ್ರೀಕೃಷ್ಣಮಠಕ್ಕೆ ಸುವರ್ಣಗೋಪುರ ಸಮರ್ಪಣೆಯ ಅಂಗವಾಗಿ ರವಿವಾರ ಶ್ರೀಕೃಷ್ಣ ದೇವರಿಗೆ 108 ಕಲಶಗಳ ಅಭಿಷೇಕ ನಡೆಯುವುದರ ಮೂಲಕ ಸಮರ್ಪಣೆಯ ಪ್ರಮುಖ ಘಟ್ಟ ಮುಕ್ತಾಯಗೊಂಡಿತು. ಇದನ್ನು ವೀಕ್ಷಿಸಲು ವಿವಿಧ ಕಡೆಗಳಿಂದ ಭಕ್ತರು ಆಗಮಿಸಿದ್ದರು. ಶ್ರೀಕೃಷ್ಣಮಠದ ಗರ್ಭಗುಡಿಯ ಹೊರಭಾಗ ಕಲಶಗಳ ಪೂಜೆ ನಡೆಯಿತು. ಸ್ಥಳಾಭಾವದಿಂದಾಗಿ ಭಕ್ತರಿಗೆ ನೋಡಲು ವಿವಿಧ ಕಡೆ ಪರದೆಗಳ ಮೂಲಕ ಘಟನೆಗಳನ್ನು ಬಿತ್ತರಿಸಲಾಯಿತು. ಕಿಕ್ಕಿರಿದ ಜನಸಂದಣಿ ಸೇರಿತ್ತು.

Advertisement

ಪರ್ಯಾಯ ಪಲಿಮಾರು, ಪೇಜಾವರ, ಅದಮಾರು ಹಿರಿಯ ಕಿರಿಯ, ಕೃಷ್ಣಾಪುರ, ಸೋದೆ, ಕಾಣಿಯೂರು ಶ್ರೀಪಾದರು ಕಲಶಾಭಿಷೇಕಗಳನ್ನು ನಡೆಸಿದರು. ಇದಕ್ಕೂ ಮುನ್ನ ಬೆಳಗ್ಗಿನ ಪೂಜೆಗಳನ್ನು ಮತ್ತು ಅನಂತರ ಮಹಾಪೂಜೆ ನಡೆಸಲಾಯಿತು.

ರಾಜಾಂಗಣ, ಭೋಜನ ಶಾಲೆಯಲ್ಲಿ ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಇದಕ್ಕೂ ಮುನ್ನ ಅದಮಾರು ಕಿರಿಯ ಶ್ರೀಗಳು ಪಲ್ಲ ಪೂಜೆ ನಡೆಸಿದರು. ರಾಜಾಂಗಣದಲ್ಲಿ ಶ್ರೀರಂಗಂನ ನಾಮಸಂಕೀರ್ತನ ಸಂಘ ಮತ್ತು ಇತರ ಭಜನ ಮಂಡಳಿಗಳಿಂದ ಭಜನೆ ನಡೆಯಿತು. ಸಂಸದೆ ಶೋಭಾ ಕರಂದ್ಲಾಜೆಯವರು ಸುವರ್ಣ ಗೋಪುರವನ್ನು ವೀಕ್ಷಿಸಿದರು. ಸಂಜೆ ಧಾರ್ಮಿಕ ಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next