Advertisement
ಶ್ರೀಕೃಷ್ಣಮಠದಲ್ಲಿ ಆ. 30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸು ವರು. ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿ ಮಹಾಪೂಜೆಯನ್ನೂ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿ ಯವರು ಇತರ ಸ್ವಾಮೀಜಿಯವರ ಜತೆಗೂಡಿ ಕೃಷ್ಣನಿಗೆ ಅಘÂìಪ್ರದಾನ ಮಾಡಲಿದ್ದಾರೆ. ಆ ಬಳಿಕ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅಘÂìವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ಪ್ರಸಕ್ತ ಸನ್ನಿವೇಶದಲ್ಲಿ ಕೃಷ್ಣ ನೀತಿ ಮಾರ್ಗದ ಅಗತ್ಯ :
ರಾಮ ಮತ್ತು ಕೃಷ್ಣ ಭಗವಂತನ ಅವತಾರವಾದರೂ ಕಾಲ ಬೇರೆ ಬೇರೆ. ಹೀಗಾಗಿ ಅವರಿಬ್ಬರ ನಡವಳಿಕೆಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ರಾಮಚಂದ್ರನ ನಡೆ ನೇರ ನೇರ ಇತ್ತು. ಅಲ್ಲಿ ತಪ್ಪುಗಳನ್ನು ರಾಮಚಂದ್ರ ಮಾಡುವುದಿಲ್ಲ ಅಥವಾ ತಪ್ಪು ಮಾಡದೆ ಬದುಕುವುದು ಹೇಗೆ ಎಂಬ ಸಂದೇಶ ಸಿಗುತ್ತದೆ. ಕೃಷ್ಣಾವತಾರ ಕಾಲದಲ್ಲಿ ಅದಲು ಬದಲು ಕಾಣುತ್ತದೆ. ಕಾರಣ ಸಾಮಾಜಿಕ ಸ್ಥಿತಿಗತಿಯೂ ಬದಲಾಗಿತ್ತು. ಶ್ರೀಕೃಷ್ಣ ತಪ್ಪು ಮಾಡಿದಂತೆ ಕಾಣುತ್ತದೆ. ಕಲಿಯುಗದಲ್ಲಿ ಈ ತರಹದಲ್ಲಿಯೇ ಇರಬೇಕೆಂದು ಕೃಷ್ಣ ತೋರಿಸಿಕೊಟ್ಟಿದ್ದಾನೆ.
ಶ್ರೀಕೃಷ್ಣ ಎಂದೂ ರಾಜನಾಗಲಿಲ್ಲ. ಆತ ರಾಜರು ಹೇಗಿರಬೇಕೆಂದು ತೋರಿಸಿಕೊಟ್ಟ. ಸುಮಾರು 5,000 ವರ್ಷಗಳ ಹಿಂದೆ ಮಹಿಳೆಯರು, ಗೋಪಾಲಕರಾದಿ ಕಂಸ, ಜರಾಸಂಧನಂತಹ ಉಗ್ರರಿಂದ ತತ್ತರಿಸುವಾಗ ಭಗವಂತ ಕೃಷ್ಣನಾಗಿ ಅವತರಿಸಿ ರಕ್ಷಿಸಿದ. “ಕರ್ಷತೀತಿ’ ಎಂಬಂತೆ ತನ್ನೆಡೆಗೆ ಆಕರ್ಷಿಸುವವನು ಅವನಾದ.
ಶ್ರೀಕೃಷ್ಣ ಮಾಡಿದ ಉಪಕಾರವನ್ನು ಸ್ಮರಿಸಲೋಸುಗ ಪ್ರತೀ ವರ್ಷ ಆತನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆತ ಎಲ್ಲೆಡೆ ಹಬ್ಬಿಕೊಂಡಿದ್ದ ದುರ್ಜನರನ್ನು ಮುಗಿಸಿದ್ದು ಲೋಕಕ್ಕೆ ಮಾಡಿದ ಉಪಕಾರ. ಈಗಲೂ ಎಲ್ಲರನ್ನು ಸದೆ ಬಡಿಯುವ ದುಷ್ಟರಿದ್ದಾರೆ. ಎಲ್ಲರನ್ನೂ ಬದುಕಲು ಬಿಡಬೇಕೆಂಬ ಕಲ್ಪನೆ ಭಾರತೀಯರದು. ಹೀಗಾಗಿಯೇ ಎಲ್ಲ ಧರ್ಮದವರಿಗೆ ಭಾರತದಲ್ಲಿ ಅವಕಾಶ ಸಿಕ್ಕಿದ್ದು. ಆದರೆ ಲೋಕಕ್ಕೆಲ್ಲ ಭಯ ಉಂಟು ಮಾಡುವ ಲೋಕ ಕಂಟಕರೂ ಮೂಡಿದರು. ಬೇರೆ ಬೇರೆ ಹೆಸರುಗಳಲ್ಲಿ ದೇಶ, ಸಮಾಜವನ್ನು ಹಾಳುಗೆಡಹುವವರು ಇದ್ದಾರೆ. ದೇಶ ಕಟ್ಟುವವರು ಕೃಷ್ಣನ ನೀತಿ ಪಾಠವನ್ನು ಅನುಸರಿಸಬೇಕು.
ಇಂದಿನ ಜಾಗತಿಕ ಪರಿಸ್ಥಿತಿ ನೋಡಿದರೆ ಕೃಷ್ಣ ಸಂದೇಶ, ಕೃಷ್ಣ ಜಯಂತಿ ಆಚರಣೆ, ಕೃಷ್ಣಮಾರ್ಗದ ನಡೆಯ ಅಗತ್ಯ ಕಂಡುಬರುತ್ತದೆ. ಮಾನವರಾಗಿ ಜನಿಸಿದ ಮೇಲೆ ಭಗವಂತನ ಕುರಿತಾದ ಜ್ಞಾನ ಸಂಪಾದಿಸಬೇಕು. ಜ್ಞಾನದ ಜತೆ ಕರ್ಮವನ್ನೂ ಮೇಳೈಸಿಕೊಂಡು ಕರ್ತವ್ಯದಲ್ಲಿ ರಾಜಕೀಯಪ್ರಜ್ಞೆಯನ್ನು ತೋರಬೇಕಾಗಿದೆ. ಶ್ರೀಕೃಷ್ಣಾಷ್ಟಮಿಯು ಕರ್ತವ್ಯಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸಲಿ. – ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.