Advertisement

ಅಂದಗೆಟ್ಟ ಮಿನಿ ವಿಧಾನಸೌಧ

02:32 PM Nov 01, 2021 | Suhan S |

ಶೃಂಗೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳಲ್ಲಿರುವ ಮಿನಿ ವಿಧಾನ ಸೌಧ ದುಸ್ಥಿತಿಗೆ ತಲುಪಿದ್ದು ಅವ್ಯವಸ್ಥೆಯ ಆಗರವಾಗಿದೆ.

Advertisement

ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ವಿಧಾನ ಸೌಧದಲ್ಲಿ ಪ್ರತಿನಿತ್ಯ ಓಡಾಡುತ್ತಿರುತ್ತಾರೆ. ಕಚೇರಿಯ ಕಲಾಪಗಳು ನಿಗದಿತ ವೇಳೆಗೆ ಆಗದೆ ಬವಣೆ ಪಡುವಂತಾಗಿದೆ. ಸರಕಾರಿ ಕಚೇರಿಗಳು ಎಲ್ಲಾ ಒಂದೇ ಕಡೆ ಇದ್ದು ಸಾರ್ವಜನಿಕರಿಗೆ ಸುಗಮವಾಗಿ ಕೆಲಸ ಕಾರ್ಯಗಳು ಆಗುವಂತೆ ನಿರ್ಮಿಸಿದ್ದ ಮಿನಿ ವಿಧಾನ ಸೌಧದಲ್ಲಿ ಈಗ ಕೆಲವೇ ಸರಕಾರಿ ಕಚೇರಿಗಳಿವೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಸುಣ್ಣ, ಬಣ್ಣ ಕಾಣದೆ ಹಲವು ವರ್ಷಗಳೇ ಕಳೆದಿವೆ. ಒಟ್ಟಾರೆ ವ್ಯವಸ್ಥಿತವಾಗಿಲ್ಲದೆ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ದೊರಕುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಶೃಂಗೇರಿ ವಿಧಾನ ಸೌಧದ ಕಥೆ- ವ್ಯಥೆ: ಇಲ್ಲಿನ ಮಿನಿ ವಿಧಾನ ಸೌಧ 1984 ರಲ್ಲಿ ನಿರ್ಮಾಣವಾಗಿದ್ದು ಇದೀಗ ಶಿಥಿಲಾವಸ್ಥೆಗೆ ತಲುಪಿ ಕಚೇರಿ ಕೆಲಸಗಳಿಗೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ವಿಧಾನ ಸೌಧದ ಗೋಡೆಗೆ ತಾಗಿಕೊಂಡಿ‌ುವ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿದ್ದು ಕಟ್ಟಡದ ಮೇಲ್ಚಾವಣಿಯವರೆಗೂ ಬೆಳೆದಿವೆ. ಇಡೀ ಕಟ್ಟಡವೇ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು ನೀರೆಲ್ಲಾ ಕಟ್ಟಡದ ಒಳಗೆ ಬೀಳುತ್ತಿದೆ. ಕೆಲವು ವರ್ಷಗಳ ಹಿಂದೆ ಸೋರಿಕೆ ತಡೆಗಟ್ಟಲು ಕಟ್ಟಡದ ಮೇಲೆ ಶೀಟುಗಳನ್ನು ಅಳವಡಿಸಲಾಗಿತ್ತು. ಆದರೂ ವ್ಯವಸ್ಥಿತವಾಗಿಲ್ಲದೆ ಕಚೇರಿ ಹಾಳು ಬಂಗಲೆಯಂತೆ ಕಾಣುತ್ತಿದ್ದು ಮಳೆಗಾಲದ ನೀರು ಮಾತ್ರ ಕಟ್ಟಡದ ಗೋಡೆಯ ಬಿರುಕಿನ ಸ್ಥಳದಿಂದ ನೀರು ಸೋರುತ್ತಿದೆ.

ಇದು ಯಾವುದೇ ರಾಜ, ಮಹಾರಾಜರುಗಳ ಕಾಲದಲ್ಲಿ ಕಟ್ಟಿಸಿದ ಪ್ರಾಚೀನ ಕಟ್ಟಡ ಅಥವಾ ಸ್ಮಾರಕವಾಗಲಿ ಅಲ್ಲ. 1984 ರಲ್ಲಿ ರಾಜ್ಯ ಸರ್ಕಾರದ ಅಂದಿನ ನೀರಾವರಿ ಹಾಗೂ ಲೋಕೋಪಯೋಗಿ ಸಚಿವ ಎಚ್‌. ಡಿ. ದೇವೇಗೌಡರಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟಿದ್ದುತ್ವರಿತಗತಿಯಲ್ಲಿ ಕಾಮಗಾರಿ ನಡೆದು 1990 ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದರಪಾಟೀಲ್‌ರಿಂದ ಉದ್ಘಾಟನೆಗೊಂಡಿತ್ತು. ಅಂದಿನಿಂದ ಇದಿನವರೆಗೂ ಕಚೇರಿಯ ಕಲಾಪಗಳು ಸುಗಮವಾಗಿ ನಡೆಯುತ್ತಿವೆ.ಆದರೆ ಇದೀಗ ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿ ಅವ್ಯವಸ್ಥೆಯ ತಾಣವಾಗಿದೆ.

ತಾಲೂಕಿನ ಆಡಳಿತದ ಪ್ರಮುಖ ಕೇಂದ್ರ ಬಿಂದು ತಾಲೂಕು ಕಚೇರಿಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಕಚೇರಿಯಗೋಡೆಗಳೆಲ್ಲ ಪಾಚಿಗಟ್ಟಿದ್ದು ಅಲ್ಲಲ್ಲಿ ಕಿತ್ತು ಹೋಗಿ ಪಾಳು ಬಿದ್ದ ಬಂಗಲೆಯಂತೆ ಗೋಚರಿಸುತ್ತಿದೆ. ವಿದ್ಯುತ್‌ ಸಂಪರ್ಕಕ್ಕೆ ಅಳವಡಿಸಿಕೊಂಡಿರುವ ಕೆಲ ವಿದ್ಯುತ್‌ ಉಪಕರಣಗಳು ಅಸ್ತವ್ಯಸ್ಥಗೊಡಿದ್ದು ನೀರು ಸೋರಿಕೆಯಿಂದಾಗಿ ವೈರುಗಳು ಹಾಳಾಗಿ ಕರೆಂಟ್‌ ಶಾಕ್‌ ಹೊಡೆಯುತ್ತಿರುವುದು ಮಾಮೂಲಿ ಸಂಗತಿಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ತಗುಲಿ ಬ್ಯಾಟರಿ, ಕಂಪ್ಯೂಟರ್‌ ಗಳು, ಮೀಟರ್‌ ಬೋರ್ಡ್‌ಗಳು ಸುಟ್ಟು ಹೋಗಿತ್ತು. ಅದೃಷ್ಟವಶಾತ್‌ ಕಚೇರಿಯ ಕಡತ ಹಾಗೂ ದಾಖಲೆಗಳು ನಾಶವಾಗದಿರುವುದು ಸಮಾಧಾನದ ಸಂಗತಿಯಾಗಿದೆ. ಅಂದು ವಿದ್ಯುತ್‌ ಅವಘಡ ಉಂಟಾಗಿ ಕಚೇರಿಯ 2-3 ದಿನದ ಕಲಾಪಗಳು ಸ್ಥಗಿತಗೊಂಡಿತ್ತು.

Advertisement

ಇನ್ನು ಕಚೇರಿ ಸುತ್ತಮುತ್ತ ತ್ಯಾಜ್ಯ ವಸ್ತುಗಳು, ಕಸದ ರಾಶಿಗಳು ಬಿದ್ದಿದ್ದು ಸ್ವತ್ಛತೆ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುತ್ತಿದ್ದರೂ ತಾಲೂಕುಕಚೇರಿಯಲ್ಲಿ ಮಾತ್ರ ತ್ಯಾಜ್ಯ ವಸ್ತುಗಳಆಗರವಾಗಿದೆ. ಕಚೇರಿಯ ಶೌಚಾಲಯ ದುರವಸ್ಥೆಯಿಂದ ಕೂಡಿದ್ದು ಕಿತ್ತು ಹೋಗಿರುವ ನಲ್ಲಿ, ಬೇಸಿನ್‌ ಸ್ವಚ್ಛತೆ ಕಾಣದಿರುವ ಶೌಚಾಲಯಕ್ಕೆ ಪ್ರವೇಶಿಸುವುದೆಂದರೆ ನರಕ ಯಾತನೆಯೇ ಸರಿ.

ಕೊಪ್ಪ, ನರಸಿಂಹರಾಜಪುರ ವಿಧಾನಸೌಧದ ದುರವಸ್ಥೆ: ಕೊಪ್ಪ, ನರಸಿಂಹರಾಜಪುರ ತಾಲೂಕಿನ ವಿಧಾನಸೌಧ ಕಟ್ಟಡವೂ ಶೃಂಗೇರಿಗಿಂತ ಭಿನ್ನವಾಗಿಲ್ಲ. ಕೊಪ್ಪದ ಮಿನಿವಿಧಾನ ಸೌಧ ಕಟ್ಟಡವು ಇತ್ತೀಚಿನ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು ಅವ್ಯವಸ್ಥೆಯಆಗರವಾಗಿದೆ. ಕಟ್ಟಡ ಕಾಮಗಾರಿಯುಅರ್ಧಂಬರ್ಧ ನಡೆದು ಕಾಮಗಾರಿಪೂರ್ಣವಾಗದೆ ಕಚೇರಿಯ ಕಲಾಪಗಳಿಗೆ ಅಡಚಣೆಯಾಗಿದೆ.

ನರಸಿಂಹರಾಜಪುರದ ವಿಧಾನ ಸೌಧವು ದಶಕಗಳ ಹಿಂದೆ ನಿರ್ಮಾಣವಾಗಿದ್ದು ಇದೀಗ ದುಸ್ಥಿತಿಗೆ ತಲುಪಿದ್ದು ಅವ್ಯವಸ್ಥೆಯತಾಣವಾಗಿದೆ. ಮೂಲ ಸೌಕರ್ಯದಿಂದ ದೂರವಾಗುತ್ತಿರುವ ಕಚೇರಿಯುಉಪಯೋಗಕ್ಕೆ ಬಾರದಾಗಿದೆ. ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಲು ಲಕ್ಷಾಂತರರೂಪಾಯಿ ಸುರಿಯುವ ಸರ್ಕಾರ ತಾಲೂಕಿನ ಪ್ರಮುಖ ಆಡಳಿತ ಕೇಂದ್ರಬಿಂದುವಾಗಿರುವತಾಲೂಕು ಕಚೇರಿಯನ್ನು ಸುಸ್ಥಿತಿಯಲ್ಲಿಟ್ಟು ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕು ಎಂಬುದು ನಾಗರೀಕರ ಒತ್ತಾಯವಾಗಿದೆ.

ಶೃಂಗೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೃಂಗೇರಿಯಲ್ಲಿ 36539, ಕೊಪ್ಪದಲ್ಲಿ 84882, ಹಾಗೂ ನರಸಿಂಹರಾಜಪುರದಲ್ಲಿ 66090 ಜನಸಂಖ್ಯೆ ಹೊಂದಿದ್ದು ಒಟ್ಟು187511 ಜನಸಂಖ್ಯೆ ಹೊಂದಿದೆ. ಕ್ಷೇತ್ರದಲ್ಲಿ ಶೃಂಗೇರಿಯಲ್ಲಿ 9, ಕೊಪ್ಪದಲ್ಲಿ 22 ಹಾಗೂನರಸಿಂಹರಾಜಪುರದಲ್ಲಿ 14 ಪಂಚಾಯ್ತಿಗಳುಸೇರಿದಂತೆ ಮೂರು ಪಪಂ ವ್ಯಾಪ್ತಿ ಹೊಂದಿದೆ. ದಿನಂಪ್ರತಿ ತಾಲೂಕು ಕಚೇರಿಗೆ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರ ಪರದಾಟ ಹೇಳತೀರದಾಗಿದೆ.

ಶೃಂಗೇರಿಯಲ್ಲಿ ಕಚೇರಿಗೆ ತೆರಳಿ ನಂತರ ದಾಖಲೆಗಳ ಜೆರಾಕ್ಸ್‌ ಬೇಕಾದಲ್ಲಿ ಮತ್ತೆಪಟ್ಟಣಕ್ಕೆ ಬರಬೇಕಿದೆ. ನೆಮ್ಮದಿ ಕೇಂದ್ರದ ಮೂಲಕ ಅರ್ಜಿ ನೀಡಲು ತೆರಳಿದಾಗಸರ್ವರ್‌ ಸಮಸ್ಯೆಯಿಂದ ಗಂಟಗಟ್ಟಲೆಕಾಯಬೇಕಿದೆ. ಪಹಣಿ ವಿಭಾಗದಲ್ಲೂ ಸಾಕಷ್ಟು ಸಮಸ್ಯೆ ಇದ್ದು ಪಹಣಿಯಲ್ಲಿ ಬೆಳೆಕಾಲಂ ಬಾರದಿರುವುದರಿಂದ ರೈತರಿಗೆ ತೀವ್ರತೊಂದರೆಯಾಗಿದೆ. ಕ್ಷೇತ್ರದಲ್ಲಿರುವ ಮಿನಿವಿಧಾನಸೌಧದ ಹಲವಾರು ಸಮಸ್ಯೆ ಬಗ್ಗೆಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿನ ಮೂರು ವಿಧಾನ ಸೌಧ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಕೊಪ್ಪ, ನರಸಿಂಹರಾಜಪುರದಲ್ಲಿ ಕಚೇರಿಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಶೃಂಗೇರಿಯಲ್ಲಿಯೂ ಮಳೆಗಾಲದ ಸಮಯದಲ್ಲಿ ಕಟ್ಟಡದ ಒಳಗೆ ಮಳೆಯ ನೀರು ಬೀಳುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ. ಸದ್ಯದಲ್ಲೇ ಕಾಮಗಾರಿ ನಡೆಯಲಿದೆ.– ಟಿ. ಡಿ. ರಾಜೇಗೌಡ, ಶೃಂಗೇರಿ ಶಾಸಕ

ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂರು ತಾಲೂಕುಗಳ ಮಿನಿ ವಿಧಾನ ಸೌಧ ಕಟ್ಟಡಗಳು ದುಸ್ಥಿತಿಯಲ್ಲಿರಲು ಜನಪ್ರತಿನಿ ಧಿಗಳೇ,ನಾಗರಿಕರೇ ಅಥವಾ ಸಂಬಂಧಪಟ್ಟ ಅ ಧಿಕಾರಿಗಳು ಕಾರಣವೋ ತಿಳಿಯುತ್ತಿಲ್ಲ. ಎಲ್ಲಾ ಕಟ್ಟಡಗಳು ಅರ್ಧಂಬರ್ಧ ಮಾತ್ರ ಕೆಲಸಗಳು ನಡೆದಿದ್ದು ಸಂಪೂರ್ಣವಾಗಿ ಕಾಮಗಾರಿ ನಡೆದಿಲ್ಲ. ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ನೋಡಿದರೆ ಬೇಸರವಾಗುತ್ತದೆ.-ಕೆ ಎಂ ಮಲ್ಲಪ್ಪ ಹೆಗ್ಡೆ, ವನದುರ್ಗಿ ಎಸ್ಟೇಟ್‌, ನೆಮ್ಮಾರ್‌, ಶೃಂಗೇರಿ

ಕಟ್ಟಡದ ದುರಸ್ತಿ ಬಗ್ಗೆ ಈಗಾಗಲೇ ಜಿಲ್ಲಾ ಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಳೆಗಾಲದಲ್ಲಿಅಲ್ಲಲ್ಲಿ ಸೋರಿಕೆಯಾಗಿ ವಿದ್ಯುತ್‌ ಅವಘಡ ಸಂಭವಿಸುತ್ತಿದೆ. ಸರ್ಕಾರ ಕಟ್ಟಡ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಲಿದೆ. -ಅಂಬುಜಾ, ಶೃಂಗೇರಿ ತಹಶೀಲ್ದಾರ್‌

 

Advertisement

Udayavani is now on Telegram. Click here to join our channel and stay updated with the latest news.

Next