Advertisement

Yediyuru ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆದ ಲಕ್ಷ ದೀಪೋತ್ಸವ

08:02 PM Dec 12, 2023 | Team Udayavani |

ಕುಣಿಗಲ್: ಕಾರ್ತಿಕ ಅಮವಾಸ್ಯೆ ಅಂಗವಾಗಿ ತಾಲೂಕಿನ ಎಡಿಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರದಲ್ಲಿ ಮಂಗಳವಾರ ಸಂಜೆ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿ ದೀಪ ಹಚ್ಚಿ ಭಕ್ತಿ ಪರಾಕ್ರಮೆ ಮೆರೆದರು.

Advertisement

ರಾಜ್ಯದ ವಿವಿಧ ಜಿಲ್ಲಾ, ತಾಲ್ಲೂಕುಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾಧಿಗಳು ದೀಪಕ್ಕೆ ಎಣ್ಣೆ, ಬತ್ತಿ ಹಾಕಿ ದೀಪ ಹಚ್ಚುವ ಮೂಲಕ ಧನ್ಯತೆ ಮೆರೆದು ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮೊರೆ ಇಟ್ಟರು. ತುಮಕೂರು ಸಿದ್ದಗಂಗಾ ಮಠ ಸಿದ್ದಲಿಂಗಸ್ವಾಮೀಜಿ, ಬಾಳೇಹೊನ್ನೂರು ಶಾಖಾ ಖಾಸಾ ಮಠಾಧ್ಯಕ್ಷ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹಂಗರಹಳ್ಳಿ ಮಠ ಬಾಲ ಮಂಜುನಾಥಸ್ವಾಮೀಜಿ, ಶ್ರೀ ಕ್ಷೇತ್ರದ ಕಾರ್ಯನಿರ್ವಾಣಾಧಿಕಾರಿ ಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

ದೇವಾಲಯದ ಆಡಳಿತ ಮಂಡಲಿಯಿಂದ ಭಕ್ತರಿಗಾಗಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದರು.

ಸಿದ್ದಲಿಂಗೇಶ್ವರರು ಮಹಾನ್ ದಾರ್ಶನಿಕರು : ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಮಾತನಾಡಿ 16ನೇ ಶತಮಾನದ ಮಹಾನ್ ತಪಸ್ವಿ ಸಿದ್ದಲಿಂಗೇಶ್ವರರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಒಳತಿಗಾಗಿ ಶ್ರಮಿಸಿದರು. ಅವರೊಬ್ಬ ಮಹಾನ್ ದಾರ್ಶನಿಕ ಮಾತ್ರವಲ್ಲ; ಇತಿಹಾಸ ಪುರುಷರೂ ಆಗಿದ್ದಾರೆ ಎಂದು ಹೇಳಿದರು. ಶ್ರೀ ಸಿದ್ದಲಿಂಗೇಶ್ವರರು ಚಾಮರಾಜ ನಗರದ ಹರದನಹಳ್ಳಿಯಲ್ಲಿ ಹುಟ್ಟಿ ದೇಶಸಂಚಾರ ಮಾಡಿ, ಕಗ್ಗೆರೆಯಲ್ಲಿ ತಪಸ್ಸು ಮಾಡಿ ಎಡೆಯೂರಿನಲ್ಲಿ ಜೀವಂತಸಮಾಧಿಯಾದರು ಎಂದರು.

ದೀಪವು ಮಾನವನ ಅಂದಾಕಾರವನ್ನು ತೊಡೆದು ಹಾಕಿ, ಬೆಳಕಿನಡೆಗೆ ಕೊಂಡ್ಯೋವುದೇ ದಿಪೋತ್ಸವ ಕಾರ್ಯಕ್ರಮದ ಮಹತ್ವದಾಗಿದೆ. ಇದರ ಅರ್ಥವನ್ನು ಮನುಷ್ಯನ್ನು ಅರ್ಥಯಿಸಿಕೊಂಡು, ಸಿದ್ದಲಿಂಗೇಶ್ವರನ್ನು ಆರಾಧಿಸಿದರೇ ಆಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

Advertisement

ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದ ಎಸ್.ಜಾನಕಿ : ದೀಪೋತ್ಸವಕ್ಕೂ ಮುನ್ನ ಪ್ರಖ್ಯಾತ ಗಾಯಕಿ ಎಸ್.ಜಾನಕಿ ಅವರು ಶ್ರೀ ಕ್ಷೇತ್ರ ಎಡಿಯೂರು, ತಪೋ ಕ್ಷೇತ್ರ ಕಗ್ಗೆರೆಗೆ ಬೇಟಿ ನೀಡಿ ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿದ್ದಲಿಂಗೇಶ್ವರರು 12 ವರ್ಷಗಳ ಕಾಲ ತಪ್ಪಸ್ಸು ಮಾಡಿದ ಶ್ರೀ ಕ್ಷೇತ್ರ ಕಗ್ಗೆರೆ ಹಾಗೂ ಜೀವಂತ ಸಮಾಧಿಯಾದ ಎಡಿಯೂರು ಶ್ರೀ ಕ್ಷೇತ್ರಕ್ಕೆ ಮಂಗಳವಾರ ಎಸ್.ಜಾನಕಿ ಅವರು ತಮ್ಮ ಕುಟುಂಬದೊಂದಿಗೆ ಬೇಟಿ ನೀಡಿ ಸಿದ್ದಲಿಂಗೇಶ್ವರ ಸ್ವಾಮೀಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಎಸ್. ಜಾನಕಿ ಅವರು ಮಾನವನ, ಶಾಂತಿ ನೆಮ್ಮದಿಗೆ ಧಾರ್ಮಿಕ ಕೇಂದ್ರಗಳು ಪೂರಕವಾಗಿವೆ, ಶ್ರೀ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕೈಕಾರ್ಯಗಳು, ದಾಸೋಹ, ದೂರದ ಊರುಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಿದೆ ರಾಜ್ಯದ ಪ್ರಸಿದ್ದ ಧಾರ್ಮಿಕ ಕ್ಷೇತ್ರದಲ್ಲಿ ಎಡಿಯೂರು ಹಾಗೂ ಕಗ್ಗೆರೆ ಒಂದಾಗಿರುವುದು ಸಂತಸದ ವಿಚಾರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next