Advertisement

50ನೆಯ ವರ್ಧಂತಿಯಲ್ಲೇ “ವಾರ್ನಿಂಗ್‌’ಕಂಡಿದ್ದ ಶ್ರೀಗಳು

08:25 PM Dec 29, 2019 | Lakshmi GovindaRaj |

ಬೆಂಗಳೂರಿನ ಚಾಮರಾಜಪೇಟೆ ಕೋಟೆ ಹೈಸ್ಕೂಲಿನ ಮೈದಾನದಲ್ಲಿ 1981ರ ಮೇ 16, 17ರಂದು ನಡೆದ ಪೇಜಾವರ ಶ್ರೀಗಳ 50ನೆಯ ವರ್ಧಂತಿಯಲ್ಲಿ ರಾಜ್ಯಪಾಲ ಗೋವಿಂದ ನಾರಾಯಣ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌, ಗುಂಡೂರಾಯರು ಕಲಬುರಗಿಯ ಬರಗಾಲದಲ್ಲಿ ನಡೆಸಿದ ಸೇವೆಯನ್ನು ಸ್ಮರಿಸಿಕೊಂಡರು.

Advertisement

“ಧ್ವಜ ಬಟ್ಟೆಯ ತುಂಡಾದರೂ ಅದು ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಧ್ವಜಕ್ಕೆ ಗೌರವ. ನಾವೂ ಪ್ರಾಚೀನ ಸಂಸ್ಕೃತಿಯನ್ನು ಪ್ರತಿನಿಧಿಸುವ ಧ್ವಜದಂತೆ. ನನ್ನ ಪರಿಚಯ ನಿಮಗೆಲ್ಲರಿಗಿಂತ ಚೆನ್ನಾಗಿ ನನಗಿದೆ. ನನ್ನ ನ್ಯೂನತೆ, ದೌರ್ಬಲ್ಯದ ಅರಿವು ಚೆನ್ನಾಗಿದೆ. ನಿಮ್ಮ ಪ್ರಶಂಸೆಗಳಿಂದ ನಾನೀಗ ಏನಾಗಿರುವೆ ಎನ್ನುವುದಕ್ಕಿಂತಲೂ ಏನಾಗಬೇಕಾಗಿದೆ ಎಂದು ಆಲೋಚಿಸುತ್ತೇನೆ.

ನಾವು ಮಾಡಬೇಕಾದ ಕರ್ತವ್ಯ ಬಹಳಷ್ಟಿವೆ. ಮಾಡಿರುವುದು ಸ್ವಲ್ಪ. ನಿಮಗೆ 50 ಆಗಿದೆ. ಬೇಗ ಬೇಗ ಕರ್ತವ್ಯ ಮಾಡಿ ಎಂದು ನೀವು ಕೊಟ್ಟ ವಾರ್ನಿಂಗ್‌ ಎಂದು ತಿಳಿಯುತ್ತೇನೆ” ಎಂದಿದ್ದರು.  ಇಂತಹ ವಾರ್ನಿಂಗ್‌ಗಳನ್ನು ಅವರು ಬೇರೆ ಬೇರೆ ಸಂದರ್ಭಗಳಲ್ಲಿ ತನ್ನನ್ನು ಅಭಿನಂದಿಸಿದಾಗಲೆಲ್ಲ ಹೇಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next