Advertisement

ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು: ಮಕ್ಕಳಿಂದ ಯಕ್ಷಗಾನ

06:02 PM Oct 18, 2019 | Team Udayavani |

ನವಿ ಮುಂಬಯಿ, ಅ. 17: ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು ಮೂಲ್ಕಿ ಇದರ ಸದಸ್ಯರು ಹಾಗೂ ಮಕ್ಕಳು ಸಂಸ್ಥೆಯ ಅಧ್ಯಕ್ಷರಾದ ಜಯಂತ್‌ ಅಮೀನ್‌ ನೇತೃತ್ವದಲ್ಲಿ ಮುಂಬಯಿ ಹಾಗೂ ನವಿ ಮುಂಬಯಿಯಲ್ಲಿ ಯಕ್ಷಗಾನ ಸಪ್ತಾಹದ 5ನೇ ಕಾರ್ಯಕ್ರಮದ ಅಂಗವಾಗಿ ಸಿದ್ಧಿವಿನಾಯಕ್‌ ಎಂಟಪ್ರೈಸಸ್‌ ನೆರೂಲ್‌ ಇವರ ಪ್ರಾಯೋಜಕತ್ವದಲ್ಲಿ ಹಾಗೂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರದೊಂದಿಗೆ ಅ. 16ರಂದು ಅಪರಾಹ್ನ ಐರೋಲಿಯ ಹೆಗ್ಗಡೆ ಭವನದಲ್ಲಿ ಗರುಡೋದ್ಭವ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

Advertisement

ಕಾರ್ಯಕ್ರಮದಲ್ಲಿ ಹೆಗ್ಗಡೆ ಸಮಾಜದ ಯುವ ಉದ್ಯಮಿ, ಸಮಾಜ ಸೇವಕ, ಕಲಾವಿದ ಬೆಂಗಳೂರಿನ ಎನ್ವಿಗ್ರೀನ್‌ ಬಯೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಕಾರ್ಯ ನಿರ್ವಾಹಕ, ಸ್ವಚ್ಛತಾ ಅಭಿಯಾನದ ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆಯ ನಿಷೇಧಕ್ಕೆ ಪರ್ಯಾಯವನ್ನು ಕಂಡು ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವ ಅಶ್ವತ್‌ ಹೆಗ್ಡೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಯಂಗ್‌ ಎಚಿವರ್‌ ಅವಾರ್ಡ್‌-2019ನ್ನು ಪ್ರಧಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶನೀಶ್ವರ ಮಂದಿರ ನೆರೂಲ್‌ ಇದರ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಪಡುಬಿದ್ರಿ ವಹಿಸಿ ಶುಭಹಾರೈಸಿದರು.

ನೆರೂಲ್‌ನ ಪ್ರಸಿದ್ಧ ಪುರೋಹಿತರಾದ ದಿನೇಶ್‌ ಚಡಗ ಅವರು ಆಶೀರ್ವಚನ ನೀಡಿದರು. ಮುಖ್ಯ ಅಥಿತಿಯಾಗಿ ಶ್ರೀ ಶನೀಶ್ವರ ದೇವಸ್ಥಾನ ನೆರೂಲ್‌ ಇದರ ಅಧ್ಯಕ್ಷರಾದ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ಗೌರವ ಅತಿಥಿಗಳಾಗಿ ಹೆಗ್ಗಡೆ ಸೇವಾ ಸಂಘ ಇದರ ಅಧ್ಯಕ್ಷರಾದ ಶಂಕರ್‌ ಆರ್‌. ಹೆಗ್ಡೆ, ತುಳುಕೂಟ ಐರೋಲಿ ಇದರ ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಇದರ ಅಧ್ಯಕ್ಷರಾದ ಹರೀಶ್‌ ಶೆಟ್ಟಿ ಪಡುಬಿದ್ರಿ, ಕರ್ನಾಟಕ ಜಾನಪದ ಪರಿಷತ್ತು ಇದರ ಅಧ್ಯಕ್ಷರಾದ ಸುರೇಶ ಶೆಟ್ಟಿ ಯೆಯ್ನಾಡಿ, ನವಿ ಮುಂಬಯಿ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಕುಲಾಲ ಸಂಘ ಮುಂಬಯಿ ಇದರ ಉಪಾಧ್ಯಕ್ಷ ರಘು ಮೂಲ್ಯ, ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿ ಇದರ ಮಹಿಳಾ ಅಧ್ಯಕ್ಷೆ ರೂಪಾ ಡಿ. ಶೆಟ್ಟಿ ಮತ್ತು ಸ್ತ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ ಅಧ್ಯಕ್ಷೆ ಉಷಾ ಪಿ. ಹೆಗ್ಡೆ ಉಪಸ್ಥಿತರಿದ್ದರು.

ಐರೋಲಿಯ ಹಿರಿಯ ಸಮಾಜ ಸೇವಕ ಲಕ್ಷ್ಮಣ್‌ ಶೆಟ್ಟಿ ದಂಪತಿಯಿಂದ ಶ್ರೀ ವಿನಾಯಕ ಯಕ್ಷಕಲಾ ತಂಡದ ಎಲ್ಲಾ ಮಕ್ಕಳಿಗೆ ವಿಶೇಷ ಸಹಾಯ ಧನವನ್ನು ವಿತರಿಸಲಾಯಿತು. ಮೇಳದ ಅಧ್ಯಕ್ಷ ಜಯಂತ್‌ ಅಮೀನ್‌, ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ ಪಡುಬಿದ್ರಿ ಮತ್ತು ಪ್ರಭಾಕರ್‌ ಎಸ್‌. ಹೆಗ್ಡೆ ನೆರೂಲ್‌ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾರಸಿಕರು, ಯಕ್ಷಗಾನ ಪ್ರೇಮಿಗಳು ಉಪಸ್ಥಿತರಿದ್ದರು.

 

Advertisement

ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next