Advertisement
Related Articles
Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆರೂಲ್ ಶ್ರೀ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಇವರು ಮಾತನಾಡಿ, ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ, ಅದರೊಂದಿಗೆ ಅವರ ವಿದ್ಯೆಗೂ ನೆರವಾಗುತ್ತಿರುವುದು ಅನುಕರಣೀಯ. ಜಯಂತ್ ಅಮೀನ್ ಅವರು ಈ ಮೇಳದೊಂದಿಗೆ ಕಾರ್ಯನಿರ್ವಹಿಸಿ ಒಂದು ಯಶಸ್ವಿ ಯಕ್ಷಗಾನ ಮೇಳವಾಗಿ ರೂಪಿಸಿರುವುದು ಅಭಿನಂದನೀಯ. ಅವರು ಕೆಲವೇ ವರ್ಷಗಳಲ್ಲಿ ಮಾಡಿದ ಈ ಸಾಧನೆಗೆ ಕಲಾದೇವತೆಯ ಅನುಗ್ರಹ ಹಾಗೂ ಎಲ್ಲರ ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
ವಿನಾಯಕ ಕಲಾತಂಡದ ವ್ಯವಸ್ಥಾಪಕರಾದ ಜಯಂತ್ ಅಮೀನ್ ಅವರು ಮಾತನಾಡಿ, 980 ಬಾರಿ ಪ್ರದರ್ಶನವನ್ನು ಇಲ್ಲಿಯವರೆಗೆ ನೀಡಲಾಗಿದೆ. ಇದು ಎಲ್ಲರ ಸಹಕಾರ, ಪ್ರೋತ್ಸಾಹದಿಂದಲೇ ಸಾಧ್ಯವವಾಯಿತು. ಕಳೆದ ಐದು ವರ್ಷಗಳಿಂದ ಮುಂಬಯಿಗರ ಪ್ರೋತ್ಸಾಹದಿಂದ ಯಶಸ್ವಿ ಪ್ರದರ್ಶನ ವನ್ನು ನೀಡಿದೆ. ಇನ್ನು ಮುಂದೆಯೂ ಎಲ್ಲರ ಪ್ರೋತ್ಸಾಹ ಬೆಂಬಲವು ಸದಾ ಸಿಗುತ್ತಿರಲಿ ಎಂದು ನುಡಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಹರಿದಾಸ್ ಗೋಪಾಲ್ ಶೆಟ್ಟಿ, ಮೇಳದ ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ, ಪ್ರಭಾಕರ ಹೆಗ್ಡೆ ಅವರು ಉಪಸ್ಥಿತರಿದ್ದರು. ಕಲಾ ಸಂಘಟಕ ಜಗದೀಶ್ ಶೆಟ್ಟಿ ಪನ್ವೇಲ್ ಕಾರ್ಯ ಕ್ರಮ ನಿರ್ವಹಿಸಿದರು. ಮೇಳದ ಮಕ್ಕಳಿಂದ ಶ್ರೀದೇವಿ ಲಲಿತಾಂಬಿಕೆ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿಮಾನಿ ಗಳು ಉಪಸ್ಥಿತರಿದ್ದರು.
ಐವತ್ತಕ್ಕಿಂತಲೂ ಅಧಿಕ ಮಕ್ಕಳನ್ನು ತರಬೇತಿ ಗೊಳಿಸಿ ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿ ಕೊಡುವುದು ಸುಲಭದ ಮಾತಲ್ಲ. ಶ್ರೀ ವಿನಾಯಕ ಯಕ್ಷಕಲಾ ತಂಡದ ಕಾರ್ಯ ನಿಜವಾಗಿಯೂ ಅಭಿನಂದ ನೀಯ. ಮೇಳಕ್ಕೆ ಇನ್ನಷ್ಟು ಯಶಸ್ಸು, ಪ್ರೋತ್ಸಾಹ ದೊರೆಯುತ್ತಿರಲಿ.– ತಾರಾನಾಥ ಶೆಟ್ಟಿ ಪುತ್ತೂರು,
ಅಧ್ಯಕ್ಷರು, ರಂಗಭೂಮಿ
ಫೈನ್‌ಆರ್ಟ್ಸ್, ನವಿಮುಂಬಯಿ ಮುಂಬಯಿಯಲ್ಲಿ ಕಲಾ ಸಂಘಟಗಳು ಹಣ ಸಂಪಾದಿಸುವ ಉದ್ದೇಶದಿಂದ ಕಲೆಯನ್ನು ವ್ಯಾಪಾರೀಕರಣ ಗೊಳಿಸುವುದಿಲ್ಲ. ಕಲೆಯ ಮೇಲಿನ ಪ್ರೀತಿಯಿಂದ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸು ತ್ತಿದ್ದಾರೆ. ಈ ಮಕ್ಕಳ ಮೇಳವನ್ನು ಎಲ್ಲರೂ ಸಹಕರಿಸಬೇಕು.
-ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ,
ಗೌರವ ಪ್ರಧಾನ ಕಾರ್ಯದರ್ಶಿ, ರಂಗಭೂಮಿ ಫೈನ್ ಆರ್ಟ್ಸ್, ನವಿಮುಂಬಯಿ ಯಕ್ಷಗಾನ ಇಂದು ಕೇವಲ ಗಂಡು ಕಲೆಯಾಗಿ ಉಳಿದಿಲ್ಲ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಯಕ್ಷಗಾನವು ಇಂದು ಜನಪ್ರಿಯ ಕಲಾಪ್ರಕಾರಗಳಲ್ಲಿ ಒಂದಾಗಿದ್ದು, ದೇಶ-ವಿದೇಶಗಳಲ್ಲೂ ಪ್ರಸಿದ್ಧಿಯನ್ನು ಪಡೆದಿದೆ.
-ನ್ಯಾಯವಾದಿ ಸುಭಾಶ್ ಶೆಟ್ಟಿ, ಅಧ್ಯಕ್ಷರು, ಬೋಂಬೆ ಬಂಟ್ಸ್ ಅಸೋಸಿಯೇಶನ್ ಚಿತ್ರ-ವರದಿ: ಸುಭಾಶ್ ಶಿರಿಯಾ