ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ 37ನೇ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ 31ನೇ ವರ್ಧಂತಿ ಅಂಗವಾಗಿ ಶ್ರೀಮಠದ ಗುರುಭವನದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿತು.
ಶೋಭಕೃತ ಸಂವತ್ಸರದ ಪಂಚಮಿ ದಿನ ಜಗದ್ಗುರುಗಳ ವರ್ಧಂತಿಯಾಗಿದ್ದು, ಶ್ರೀಮುಖ ಸಂವತ್ಸರದಲ್ಲಿ ಶ್ರೀಗಳ ಜನನವಾಗಿತ್ತು. ವರ್ಧಂತಿ ಅಂಗವಾಗಿ ಗುರುಭವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಚಾತುರ್ಮಾಸ್ಯ ನಿರತರಾಗಿರುವ ಜಗದ್ಗುರುಗಳು ಬೆಳಗ್ಗೆಯೇ ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಚಂದ್ರಮೌಳೇಶ್ವರ ಸ್ವಾಮಿ, ಶ್ರೀಚಕ್ರಕ್ಕೆ ಪೂಜೆ ಸಲ್ಲಿಸಿ, ಜಗದ್ಗುರುಗಳ ಅ ಧಿಷ್ಠಾನ ಮಂದಿರಗಳಿಗೆ ಭೇಟಿ ನೀಡಿದರು.
ಜಗದ್ಗುರುಗಳ ವರ್ಧಂತಿ ಅಂಗವಾಗಿ ಗುರುಭವನದಲ್ಲಿ ಆಯುಷ್‌ಹೋಮ, ಮೃತ್ಯುಂಜಯ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ ಜಗದ್ಗುರುಗಳ ಆಹಿ°ಕ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದು, ಜಗದ್ಗುರುಗಳು ಭಕ್ತಾದಿಗಳಿಗೆ ದರ್ಶನ ನೀಡಿದರು.
ಶ್ರೀ ಮಠದ ಗುರುಭವನದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಿ, ನಿರಂತರ ಜಪದ ಪ್ರಕ್ರಿಯೆಯಿಂದ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ. ಧ್ಯಾನ ಮನಸ್ಸಿನ ವಿಕಾರಗಳನ್ನು ನಿಗ್ರ ಹಿಸುತ್ತದೆ. ಭಗವಂತ ಹಾಗೂ ಗುರುವಿನಲ್ಲಿ ಭಕ್ತಿ, ಶ್ರದ್ಧೆ ಮುಖ್ಯ ಎಂದರು.