Advertisement

“ಶ್ರೀ ವಿಬುಧೇಶರು ಸಮಾಜದಲ್ಲಿ ದೇವರನ್ನು ಕಂಡವರು’

07:00 AM Oct 05, 2018 | Team Udayavani |

ಪಡುಬಿದ್ರಿ: ತಮ್ಮ ಗುರುಗಳಾದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರು ಇಡಿಯ ಸಮಾಜದಲ್ಲಿಯೇ ದೇವರನ್ನು ಕಂಡಿದ್ದವರು. ನಾವು ಮೇಲ್ನೋಟಕ್ಕೆ ನೋಡುವ ರೀತಿಯಲ್ಲಿ ಅವರನ್ನು ಅಳೆಯುವಂತಿರಲಿಲ್ಲ. ಅಂತಹಾ ಸಾತ್ವಿಕ ಕೋಪಿಷ್ಟ ವ್ಯಕ್ತಿತ್ವದವರು ಅವರಾಗಿದ್ದರು. ಮುಂದೆ ಅವರನ್ನು ಕಾಪಾಡಿದ್ದೇ ಶ್ರೀಪಾದರಾಜ ಶ್ರೀ ವಿದ್ಯಾಮಾನ್ಯರಿಗೆ ಶ್ರೀ ಕೃಷ್ಣ ಪೂಜೆಯ ದೀಕ್ಷೆಯನ್ನು ಒದಗಿಸಿ ಕೊಟ್ಟಿದ್ದುದು ಅವರ ದಿಟ್ಟ ನಿರ್ಧಾರವಾಗಿತ್ತು ಎಂದು ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ಅ. 4ರಂದು ಅದಮಾರು ಮೂಲ ಮಠದಲ್ಲಿ ಶ್ರೀ ವಿಬುಧೇಶ ತೀರ್ಥ ಶ್ರೀಪಾದರ ದಶಮ ಆರಾಧನೋತ್ಸವದ ಸಂದರ್ಭದಲ್ಲಿ ವಿರಜಾ ಹೋಮ, ಪವಮಾನ ಹೋಮ, ವೃಂದಾವನಕ್ಕೆ ಚರ್ತುವಿಂಶತಿ ಕಲಶಾಭಿಷೇಕ, ವೃಂದಾವನ ಪೂಜೆಗಳ ಬಳಿಕ ನೆರೆದಿದ್ದವರನ್ನು ಆಶೀರ್ವಚಿಸಿದರು. 

ಊಟದ ಅಂತ್ಯವನ್ನು ಮಧುರೇಣ ದೇವರ ನಾಮದೊಂದಿಗೆ ಸಮಾಪಯೇತ್‌ ಎನ್ನುವ ರೀತಿಯಲ್ಲಿ ಅಂತ್ಯಕಾಲದಲ್ಲೂ ನಮ್ಮನ್ನು ರಕ್ಷಿಸುವ ಪರಮ ಪುಣ್ಯ ಭಗವಂತನ ನಾಮ ಸ್ಮರಣೆಯನ್ನು ಎಲ್ಲರೂ ಮಾಡುತ್ತಿರಬೇಕು. ತಮ್ಮ ಗುರುಗಳಾದ ಶ್ರೀ ವಿಬುಧೇಶರು ಶ್ರೀ ಕೃಷ್ಣಾನುಗ್ರಹದಿಂದಲೇ ಪ್ರಖರವಾದ ವಾಕ್ಚಾತುರ್ಯವನ್ನು ಹೊಂದಿದ್ದರು ಎಂದೂ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಆರಾಧನೋತ್ಸವದ ಧಾರ್ಮಿಕ ವಿಧಿಗಳು ವೇ| ಮೂ| ಶಿಬರೂರು ವಾಸುದೇವ ಆಚಾರ್ಯ, ಹೆಜಮಾಡಿ ವೇ| ಮೂ| ಲಕ್ಷ್ಮೀಶಾಚಾರ್ಯರ ನೇತೃತ್ವ ದಲ್ಲಿ ಜರಗಿದ್ದವು. ಮಠದ ದಿವಾನರಾದ ವೆಂಕಟರಮಣ ಮುಚ್ಚಿಂತಾಯ, ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next