Advertisement

ಮಂಗಳೂರು ರಥಬೀದಿಯಲ್ಲಿ ಬಣ್ಣಗಳ ಓಕುಳಿ ಸಂಭ್ರಮ

01:31 AM Feb 03, 2020 | Sriram |

ಮಹಾನಗರ: ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ “ಕೊಡಿಯಾಲ್‌ ತೇರು’ ಪ್ರಯುಕ್ತ ರವಿವಾರ ಶ್ರೀ ದೇವರ ಅವಭೃಥ (ಓಕುಳಿ) ಮಹೋತ್ಸವ ಸಮಾಜದ ಸಾವಿರಾರು ಆಬಾಲ ವೃದ್ಧ ಭಜಕರ ಹಾಗೂ ಕಾಶೀಮಠಾಧೀಶರಾದ ಶ್ರೀಮದ್‌ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.

Advertisement

ಪ್ರಾರಂಭದಲ್ಲಿ ಸರ್ವಾಭರಣ ಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಸಂತ ಮಂಟಪಕ್ಕೆ ತರಲಾಯಿತು. ಬಳಿಕ ವಸಂತ ಮಂಟಪದಲ್ಲಿ ವಿಶೇಷ ಪೂಜೆ, ಅಷ್ಟಾವಧಾನ ಸೇವೆ, ಸೇರಿದ ಸಮಾಜ ಬಾಂಧವರಿಂದ ಮಡೆಸ್ನಾನ ಸೇವೆ ಅನಂತರ ಶ್ರೀಗಳವರಿಂದ ಪ್ರವಚನ ನಡೆಯಿತು.

ಶ್ರೀ ದೇವರ ಪೇಟೆ ಉತ್ಸವ ರಥಬೀದಿ, ನಂದಾದೀಪ, ಉಮಾ ಮಹೇಶ್ವರ ದೇವಸ್ಥಾನ ರಸ್ತೆ, ಕೆಳಗಿನ ರಥಬೀದಿ, ಡೊಂಗರಕೇರಿ, ಚಾಮರಗಲ್ಲಿ ಮೂಲಕ ವಿ.ಟಿ. ರಸ್ತೆಯಲ್ಲಿ ಸಾಗಿಬಂದು ಟ್ಯಾಂಕ್‌ ಕಾಲನಿಯಲ್ಲಿರುವ ಶ್ರೀ ಶ್ರೀನಿವಾಸ ನಿಗಮ ಪಾಠಶಾಲೆ ಯಲ್ಲಿರುವ ಪುಷ್ಕರಣಿಯಲ್ಲಿ ಶ್ರೀ ದೇವರ ಅವಭೃಥ ಸ್ನಾನ ನಡೆಯಿತು. ಶ್ರೀ ದೇಗುಲಕ್ಕೆ ಉತ್ಸವ ಮರಳಿದ ಬಳಿಕ ಧ್ವಜಾಅವರೋಹಣ ಬಳಿಕ ಮಹೋತ್ಸವ ಸಮಾಪನಗೊಂಡಿತು.

ರಥೋತ್ಸವ ಸಮಾಪನ
ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮ ರಥೋತ್ಸವ ಪ್ರಯುಕ್ತ ಶನಿವಾರ ಶ್ರೀ ದೇವರಿಗೆ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶ ಶ್ರೀಮದ್‌ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶತ ಕಲಶಾಭಿಷೇಕ, ಗಂಗಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕಗಳು ನೆರವೇರಿದವು.

ಬ್ರಹ್ಮ ರಥೋತ್ಸವ ಪ್ರಯುಕ್ತ ಪ್ರಾತಃ ಕಾಲದಲ್ಲಿ ವಿಶೇಷ ಮಹಾ ಪ್ರಾರ್ಥನೆ ನಡೆದು ಬಳಿಕ ಶ್ರೀ ದೇವಳದ ಅರ್ಚಕರಿಂದ ಶ್ರೀದೇವರಿಗೆ ಪಂಚಾಮೃತ ಅಭಿಷೇಕ ನಡೆಯಿತು. ಬಳಿಕ ಶ್ರೀದೇವರು ಯಜ್ಞಕ್ಕೆ ಚಿತ್ತೈಸಿ, ಯಜ್ಞ ಮಂಟಪದಲ್ಲಿ ಶ್ರೀಗಳವರ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಮಹಾಪೂರ್ಣ ಆಹುತಿ ನೆರವೇರಿತು.

Advertisement

ಸಂಜೆ ಕಾಶಿ ಮಠಾಧೀಶರ ಉಪಸ್ಥಿತಿ ಯಲ್ಲಿ ಬ್ರಹ್ಮರಥೋತ್ಸವ ಜರಗಿತು. ದೇಶ ವಿದೇಶಗಳಿಂದ ಭಜ ಕರು ಪಾಲ್ಗೊಂಡಿ ದ್ದರು. ಮೊಕ್ತೇಸರ ರಾದ ಸಿ.ಎಲ್‌. ಶೆಣೈ, ಪ್ರಶಾಂತ್‌ ರಾವ್‌, ರಾಮಚಂದ್ರ ಕಾಮತ್‌, ಶಾಸಕ ಡಿ. ವೇದ ವ್ಯಾಸ್‌ ಕಾಮತ್‌, ಹೈದರಾಬಾದ್‌ನ ಉದ್ಯಮಿ ಅನಂತ್‌ ಪೈ, ಮುಂಡ್ಕೂರು ರಾಮದಾಸ್‌ ಕಾಮತ್‌, ಮಾಜಿ ಮೊಕ್ತೇಸರ ಪದ್ಮನಾಭ ಪೈ ಉಪಸ್ಥಿತರಿದ್ದರು.

ಭಕ್ತರ ಭುಜ ಸೇವೆ
ಶ್ರೀ ದೇವರನ್ನು ಸ್ವರ್ಣ ಪಲ್ಲಕಿ ಯಲ್ಲಿರಿಸಿ ಐದು ಪೇಟೆ ಉತ್ಸವ ಭಾವುಕ ಭಗವತ್‌ ಭಕ್ತರ ಭುಜ ಸೇವೆಯೊಂದಿಗೆ ಜರಗಿತು. ಸಮಾಜದ ಪುರುಷರು ಮತ್ತು ಮಕ್ಕಳು ಅವಭೃಥ ಮಹೋ ತ್ಸವದಲ್ಲಿ ಗುಲಾಬಿ, ಅರಸಿನ ಬಣ್ಣದ ನೀರಿನೊಂದಿನಿಗೆ ಆಟವಾಡುತ್ತಿರುವ ದೃಶ್ಯ ರಥಬೀದಿಯಲ್ಲಿ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next