Advertisement

ಭಕ್ತರ ಸಲಹುವ ದೈವ 

11:37 AM Mar 03, 2018 | |

ಶಿವಗಣಗಳಲ್ಲಿಯೇ ಅತಿ ವಿಶಿಷ್ಟ ಶಕ್ತಿಯುಳ್ಳ ದೇವರು ಅಂದರೆ ಶ್ರೀ ವೀರಭದ್ರೇಶ್ವರ.  ಈ ದೇವರು, ನಂಬಿದ ಭಕ್ತರನ್ನು  ಸಂರಕ್ಷಿಸಿ ಬದುಕಿಗೆ ಭದ್ರತೆ ಒದಗಿಸುತ್ತಾನೆಂಬ ಪ್ರತೀತಿ ಇದೆ.   ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ  ಯಡೇಹಳ್ಳಿ ಸನಿಹದ  ಕೆಂಜಗಾಪುರದ ಶ್ರೀವೀರಭದ್ರೇಶ್ವರ ಸ್ವಾಮಿ, ಭಕ್ತರನ್ನು ಕಾಪಾಡುವ ದೇವರೆಂದೇ ಹೆಸರಾಗಿದ್ದಾನೆ.

Advertisement

ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಶಿಥಿಲಾವಸ್ಥೆಯಲ್ಲಿತ್ತು. ಈಗ ಭಕ್ತರ ಪರಿಶ್ರಮದ ಫ‌ಲವಾಗಿ ಕೇವಲ ಒಂದೂವರೆ  ವರ್ಷದಲ್ಲಿಯೇ ಹೊಸ ರೂಪ ಪಡೆದು ನಿಂತಿದೆ. 

ವಿಜಯನಗರದ ಅರಸರಿಂದ ಪೂಜೆ
 ಸದಾ ಹರಿಯುವ ಜಲ ರಾಶಿಯ ಎತ್ತರದ ದಿಬ್ಬದ ಮೇಲೆ ನಿರ್ಮಾಣವಾಗಿರುವ ಈ ದೇಗುಲವನ್ನು ಕ್ರಿ.ಶ.1419ರಲ್ಲಿ ವಿಜಯನಗರದ ಅರಸ ಪ್ರತಾಪ ಪ್ರೌಢ ದೇವರಾಯ ಪ್ರತಿಷ್ಠಾಪಿಸದ ಎಂದು ಶಾಸನದಿಂದ ತಿಳಿದು ಬರುತ್ತದೆ. ವಿಜಯನಗರ ಶೈಲಿಯಲ್ಲಿರುವ ನಿರ್ಮಾಣವಾಗಿರುವ ಈ ದೇಗುಲವನ್ನು ಮಲೆನಾಡಿನ ಪ್ರದೇಶಕ್ಕೆ ಹೊಂದಿಕೆಯಾಗುವಂತ ರಚಿಸಲಾಗಿದೆ. 

  ದೇವಾಲಯವು ಮುಖಮಂಟಪ, ಗರ್ಭಗೃಹ ಹಾಗೂ ಪ್ರದಕ್ಷಿಣಾ ಪಥವನ್ನು ಹೊಂದಿದೆ. ಮುಖ ಮಂಟಪದಲ್ಲಿ ನಾಲ್ಕು ಆಕರ್ಷಕವಾದ ಚಿತ್ರಗಳ ಕೆತ್ತನೆಯುಳ್ಳ ಶಿಲಾ ಕಂಬಗಳಿವೆ. ಸುತ್ತಲೂ ಭಕ್ತರು ಕುಳಿತುಕೊಳ್ಳಲು ಅನುಕೂಲವಾಗುವಂತೆ ರûಾಸನವಿದೆ. ಮುಖ ಮಂಟಪದಲ್ಲಿರುವ ಭುವನೇಶ್ವರಿಯಲ್ಲಿ ಅಷ್ಟದಿಕಾ³ಲಕರ ಉಬ್ಬು ಶಿಲ್ಪಗಳು ಆಕರ್ಷಕವಾಗಿವೆ. ದೇವಾಲಯದ ಪ್ರವೇಶ ದ್ವಾರದ ಇಕ್ಕೆಲದಲ್ಲಿ 4 ಕಂಬಗಳಲ್ಲಿ ಸಿಂಹದ ಶಿಲ್ಪವಿದೆ. ದೇಗುಲದ ಸುತ್ತಲಿನ ಹೊರ ಮೈಯಲ್ಲಿ ಬಗೆ ಬಗೆಯ ಶಿಲಾ ಮೂರ್ತಿಗಳಿದ್ದು ರಾಮಾಯಣ, ಮಹಾಭಾರತ ಮತ್ತು ಪುರಾಣದ ಕಥಾನಕದ ಚಿತ್ರಗಳಿವೆ. 

ಕಣ್ಣುಗಳನ್ನು ಕಾಪಾಡುವ ದೇವರು
   ದೇವಾಲಯದ ಸುತ್ತಲೂ ಪರಿವಾರ ದೇವತೆಗಳಿದ್ದು ಈಶಾನ್ಯದಲ್ಲಿ ಚೌಡಮ್ಮ, ಪಶ್ಚಿಮದಲ್ಲಿ ಕಂಗಳ ವೀರಪ್ಪಸ್ವಾಮಿ, ಮುಂಭಾಗದಲ್ಲಿ ಈಶ್ವರ ದೇವಾಲಯಗಳಿವೆ. ಕಣ್ಣಿನ ಬೇನೆ ಮತ್ತು ದೃಷ್ಟಿದೋಷಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಂಗಳ ವೀರಪ್ಪ ಸ್ವಾಮಿಗೆ ಹರಕೆ ಹೊರುವ ಪದ್ಧತಿ ಇದೆ.   ದೇವಾಲಯಕ್ಕೆ ವಿಜಯನಗರದ ಅರಸರು ಮತ್ತು ಕೆಳದಿರಾಣಿ ಚೆನ್ನಮ್ಮಾಜಿ ಉಂಬಳಿ ನೀಡಿದ ದಾಖಲೆ ಇದೆ.  ಬಹು ಹಿಂದಿನಿಂದ ರಾಜಾಶ್ರಯ ಪಡೆದು  ಉಛಾÅಯ ಸ್ಥಿತಿ ಹೊಂದಿದ ಬಗ್ಗೆ ಪುರಾವೆಗಳಿವೆ. ಈ ದೇಗುಲಕ್ಕೆ ಎಲ್ಲಾ ಮತಧರ್ಮ ಹಾಗೂ ಜಾತಿಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮದಲ್ಲಿ, ದೇವಾಲಯವು ಸುಮಾರು 2,500 ವರ್ಷಗಳಷ್ಟು ಹಿಂದೆ ಮೃಚ್ಛೇಂದ್ರನಾಥ ಯೋಗಿಗಳ ನೆಲೆಯಾಗಿತ್ತೆಂದು ತಿಳಿದು ಬಂದಿದೆ

Advertisement

ನಿತ್ಯ ಪೂಜೆ ವರ್ಷವಿಡೀ ಉತ್ಸವ
ಈ ದೇವರಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ನೈವೇದ್ಯ ನಡೆಯುತ್ತದೆ. ಯುಗಾದಿ ಹಬ್ಬದಂದು ವಿಶೇಷ ಬಲಿ ಮತ್ತು ಪೂಜೆ, ಶ್ರಾವಣ ಮಾಸದಂದು ನಿತ್ಯ ರುದ್ರಾಭಿಷೇಕ, ಪ್ರತಿ ಶ್ರಾವಣ ಸೋಮವಾರ ವಿಶೇಷ ಪೂಜೆ, ಸಾಮೂಹಿಕ ಅನ್ನ ಸಂತರ್ಪಣೆ, ರುದ್ರ ಹೋಮ  ,ವಿವಿಧ ಮಠಾಧೀಶರಿಂದ ಧಾರ್ಮಿಕ ಸಭೆ ನಡೆಯುತ್ತದೆ.ಆಶ್ವಯುಜ ಮಾಸದಲ್ಲಿ ನವರಾತ್ರಿ ಉತ್ಸವ, ವಿಜಯದಶಮಿಯಂದು ಪಲ್ಲಕ್ಕಿ ಸೇವೆ, ದೀಪಾವಳಿಯಂದು ಗ್ರಾಮ ಪೂಜೆ, ಶಿವರಾತ್ರಿಯಂದು ದಿನವಿಡೀ ಅಭಿಷೇಕ, ಅರ್ಚನೆ ನಡೆಯುತ್ತದೆ. 

ಜೀರ್ಣೋದ್ಧಾರ
ಸುಮಾರು 5-6 ವರ್ಷಗಳ ಹಿಂದಿನವರೆಗೂ ದೇವಾಲಯದ ಮುಂಭಾಗ, ಎಡಭಾಗದ ಪ್ರದೇಶ ಕಲ್ಲು, ಪೊದೆಗಳಿಂದ ಕೂಡಿತ್ತು. ಈ ಸ್ಥಳವನ್ನು ಸಮತಟ್ಟುಗೊಳಿಸಿ ಮುಂಭಾಗದಲ್ಲಿ ಆಕರ್ಷಕ ಉದ್ಯಾನ, ಶೌಚಾಲಯ, ವಾಹನ ನಿಲುಗಡೆ ಮೈದಾನ, ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಅಡುಗೆ ಮನೆ, ಸಭಾಂಗಣ ನಿರ್ಮಿಸಲಾಗಿದೆ. 

 ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಇಲ್ಲಿ ಮಹಾರಥೋತ್ಸವ ನಡೆಯುತ್ತದೆ. 

ಎನ್‌.ಡಿ,ಹೆಗಡೆ ಆನಂದಪುರಂ     

Advertisement

Udayavani is now on Telegram. Click here to join our channel and stay updated with the latest news.

Next