Advertisement

Udupi: ಆ.16 ರಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ, ಪೂಜೆ

06:40 PM Aug 14, 2024 | Team Udayavani |

ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಆ.16ರ ಶ್ರಾವಣ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತದ ಪೂಜೆ ನಡೆಯಲಿದೆ.

Advertisement

ಕ್ಷೇತ್ರದ ಧರ್ಮದರ್ಶಿ, ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವ್ರತ ಸಂಪನ್ನಗೊಳ್ಳಲಿದೆ.

ಈ ಪೂಜೆಯು ಸಂಜೆ 5 ಗಂಟೆಗೆ ಆರಂಭಗೊಳ್ಳಲಿದ್ದು, ಸಂಜೆ 7.30ಕ್ಕೆ ಪ್ರಸನ್ನ ಪೂಜೆ ಮಹಾ ಮಂಗಳಾರತಿ ನೆರವೇರಲಿದೆ.

ಸಾಮೂಹಿಕವಾಗಿ ನೆರವೇರಲಿರುವ ಈ ಪೂಜೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಅವಕಾಶ ಇದೆ ಎಂದು ಕ್ಷೇತ್ರ ಉಸ್ತುವಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next