Advertisement

DK,Udupi ಜಿಲ್ಲಾಡಳಿತದಿಂದ ಶ್ರೀ ವಾಲ್ಮೀಕಿ ಜಯಂತಿ ಆಚರಣೆ: “ವಾಲ್ಮೀಕಿ ಆದರ್ಶ ಪಾಲನೆ ಅಗತ್ಯ’

11:03 PM Oct 28, 2023 | Team Udayavani |

ಮಂಗಳೂರು: ವಾಲ್ಮೀಕಿ ಮಹರ್ಷಿ ತನ್ನ ನಡೆ ನುಡಿ ಆಚಾರಗಳಿಂದ ಆದರ್ಶರಾದರು. ತಮ್ಮ ಚಿಂತನೆಯಿಂದ ಶ್ರೇಷ್ಠರಾಗಿ, ರಾಮಾಯಣದ ಮೂಲಕ ಜಗತ್ತಿಗೆ ಬೆಳಕು ನೀಡಿದ ಮಹಾನ್‌ ಸಂತ ಎನಿಸಿಕೊಂಡರು. ಇಂದಿನ ನಾಗರಿಕ ಸಮಾಜದಲ್ಲಿ ವಾಲ್ಮೀಕಿಯಂತಹ ಮಹಾನ್‌ ವ್ಯಕ್ತಿಗಳ ಆದರ್ಶ ಪಾಲನೆ ಅಗತ್ಯವಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿ.ಪಂ. ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶನಿವಾರ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ, ವಾಲ್ಮೀಕಿ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ದೇಶಕ್ಕೆ ರಾಮ ರಾಜ್ಯದ ಪರಿಕಲ್ಪನೆ ನೀಡಿದವರಾಗಿದ್ದಾರೆ. ಗ್ರಾಮೋತ್ಥಾನದ ಮೂಲಕ ರಾಮೋತ್ಥಾನ ಆಗುತ್ತದೆ. ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಬದುಕುವ ಹಕ್ಕಿದ್ದು, ಎಲ್ಲರೂ ಸಮಾನರು ಎಂಬುದನ್ನು ಸಮಾಜಕ್ಕೆ ಸಾರಿದವರು ವಾಲ್ಮೀಕಿ ಎಂದರು.

ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಮಾತನಾಡಿ, ಪ್ರತಿಯೊಂದು ಆತ್ಮವೂ ದೈವಿಕ ಶಕ್ತಿ ಒಳಗೊಂಡಿದೆ. ಭಗವಂತ ವಿಶೇಷ ಶಕ್ತಿ ನೀಡಿದ್ದಾನೆ. ಸಾಧಾರಣ ವ್ಯಕ್ತಿಯೂ ಕೂಡ ಸಾಧನೆ ಮಾಡಲು ಸಾಧ್ಯ ಎಂಬುದನ್ನು ವಾಲ್ಮೀಕಿ ತೋರಿ ಸಿಕೊಟ್ಟಿದ್ದಾರೆ. ಸಮಾಜಕ್ಕೆ ಯಾವುದು ಶಾಶ್ವತ ಎಂಬುದನ್ನು ವಾಲ್ಮೀಕಿ ರಾಮಾಯಣದಲ್ಲಿ ವಿವರಿಸಿ ದ್ದಾರೆ ಎಂದು ಹೇಳಿದರು.

ರಾಮಾಯಣ ನಮ್ಮ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಬದುಕಿನಲ್ಲಿ ಯಾವ ರೀತಿ ಸಾಗಬೇಕು ಎನ್ನುವುದು ರಾಮಾಯಣದಲ್ಲಿದೆ. ವಾಲ್ಮೀಕಿ ಆದರ್ಶಪಾಲನೆಯೊಂದಿಗೆ ಸಾಮಾಜಿಕ ಬದಲಾ ವಣೆ ಸಾಧ್ಯ ಎಂದರು.

Advertisement

ಮೀನುಗಾರಿಕೆ ಮಹಾ ವಿದ್ಯಾ ಲಯದ ಡೀನ್‌ ಡಾ| ಆಂಜನೇಯಪ್ಪ ಮಾತನಾಡಿ, ವಾಲ್ಮೀಕಿ ಆದಿಕವಿ ಯಾಗಿದ್ದು ಸತ್ಯ, ನ್ಯಾಯ, ನೀತಿ, ನಿಷ್ಠೆ ಏನೆಂಬುದನ್ನು ರಾಮಾಯಣದಲ್ಲಿ ವಿವರಿಸಿದ್ದಾರೆ. ಅವುಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕಗೊಳ್ಳುತ್ತದೆ. ಮಕ್ಕಳಿಗೆ ವಾಲ್ಮೀಕಿ ರಾಮಾಯಣದ ತಿರುಳು ಅರ್ಥೈಸುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಹೇಳಿದರು.

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌, ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ಧಾರ್ಥ್ ಗೋಯಲ್‌, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ಉಪಸ್ಥಿತರಿದ್ದರು. ಯೋಜನಾಧಿಕಾರಿ ಶಿವಕುಮಾರ್‌ ಸ್ವಾಗತಿಸಿದರು.

ಉಡುಪಿಯಲ್ಲಿ ಆಚರಣೆ
ಮಣಿಪಾಲ: ವಾಲ್ಮೀಕಿಯವರ ಆದರ್ಶ, ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪಾಲಿಸಿದಾಗ ವ್ಯಕ್ತಿತ್ವ ವಿಕಸನ ಆಗಲು ಸಾಧ್ಯವಿದೆ ಎಂದು ಶಾಸಕ ಯಶ್‌ಪಾಲ್‌ ಎ. ಸುವರ್ಣ ಹೇಳಿದರು.

ಉಡುಪಿ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಡಳಿತ, ಜಿ.ಪಂ., ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ಯಶ್‌ಪಾಲ್‌ ಎ. ಸುವರ್ಣ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾ ಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next