ಮಲ್ಪೆ: ದೇವಸ್ಥಾನದಲ್ಲಿ ನಿಯಮ, ನಿಷ್ಠೆ, ಸಂಪ್ರದಾಯಗಳು ಕ್ರಮಬದ್ಧವಾಗಿ ನಡೆದರೆ ಮಾತ್ರ ಆ ಕ್ಷೇತ್ರವು ವೃದ್ಧಿಯಾಗಲು ಸಾಧ್ಯ. ದೇವಸ್ಥಾನದಲ್ಲಿ ಆಗಾಗ ನಡೆಯುವ ಉತ್ಸವಗಳಿಂದ ಪರಮಾತ್ಮನ ಸನ್ನಿಧಾನದ ಮಹತ್ವ ಹೆಚ್ಚಾಗುತ್ತದೆ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ನುಡಿದರು.
ಅವರು ಮಂಗಳವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಎಲ್ಲೂರಿನ ಧಾರ್ಮಿಕ ಮುಂದಾಳು ವಿಷ್ಣುಮೂರ್ತಿ ಭಟ್, ಧಾರ್ಮಿಕ ಚಿಂತಕ ಡಾ| ಉದಯ ಸರಳತ್ತಾಯ, ಉದ್ಯಮಿ ಗಿರೀಶ್ ಭಟ್ ಹೈದರಾಬಾದ್, ವಡಭಾಂಡೇಶ್ವರ ಶ್ರೀ ಬೊಬ್ಬರ್ಯ ದೈವಸ್ಥಾನದ ಅಧ್ಯಕ್ಷ ಅಶೋಕ್ ಮೆಂಡನ್ ಬಲರಾಮನಗರ, ತೆಂಕನಿಡಿಯೂರು ಧಾರ್ಮಿಕ ಮುಂದಾಳು ಬಾಲಕೃಷ್ಣ ಬಾದ್ಯ, ಉದ್ಯಮಿಗಳಾದ ಶಶಿಧರ್ ಕುಂದರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ, ನಗರಸಭಾ ಸದಸ್ಯ ಸುಂದರ್ ಜೆ. ಕಲ್ಮಾಡಿ, ತೆಂಕನಿಡಿಯೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಜತ್ತನ್, ಹಿರಿಯ ಮುಂದಾಳು ಕಿಟ್ಟ ಅಮೀನ್ ನೆರ್ಗಿ, ನಿವೃತ್ತ ಪ್ರಾಧ್ಯಾಪಕ ಸೋಮಯ್ಯ ಶೇರಿಗಾರ, ನಗರಸಭೆ ಮಾಜಿ ಸದಸ್ಯ ಪ್ರಶಾಂತ್ ಅಮೀನ್, ಮಲ್ಪೆ ಎಸ್‌ಕೆಡಿಆರ್‌ಡಿಪಿ ಮೇಲ್ವಿಚಾರಕಿ ಸುಜಾತಾ ಎಸ್., ಆನುವಂಶಿಕ ಮೊಕ್ತೇಸರ ಟಿ. ಶ್ರೀನಿವಾಸ ತಂತ್ರಿ, ದೇಗುಲದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು, ಅಧ್ಯಕ್ಷ ನಾಗರಾಜ ಮೂಲಿಗಾರ್, ಗೌರವ ಸಲಹೆಗಾರ ಡಾ| ವಿಜಯೇಂದ್ರ ರಾವ್, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್ ಮುಖ್ಯ ಅತಿಥಿಗಳಾಗಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾಯದರ್ಶಿ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ವಿಕ್ರಮ್ ಟಿ. ಶ್ರೀಯಾನ್ ವಂದಿಸಿದರು. ಸತೀಶ್ ಕೊಡವೂರು ನಿರ್ವಹಿಸಿದರು.
ಇಂದು ರಥೋತ್ಸವ, ಮಹಾಅನ್ನಸಂತರ್ಪಣೆ
ದೇವಸ್ಥಾನದಲ್ಲಿ ಮಾ. 27ರಂದು ಮಧ್ಯಾಹ್ನ ಮಹಾಅನ್ನಸಂತರ್ಪಣೆ, ರಾತ್ರಿ ಮಹಾರಥೋತ್ಸವ ನಡೆಯಲಿದೆ. ವಾದ್ಯ ಘೋಷ, ವೇಷ ಭೂಷಣಗಳು ಉತ್ಸವಕ್ಕೆ ಮೆರಗನ್ನು ನೀಡಲಿವೆ. ಬಳಿಕ ತೆಪ್ಪೋತ್ಸವ, ಪಲ್ಲಕ್ಕೆ ಉತ್ಸವ, ಓಲಗ ಮಂಟಪ ಪೂಜೆ, ರಾತ್ರಿ ಭೂತ ಬಲಿಸೇವೆ ನಡೆಯಲಿದೆ.