Advertisement

ನಾಮಾಷ್ಟಕದಿಂದ ಶಿವಾರಾಧನೆ: ಶೃಂಗೇರಿ ಸ್ವಾಮೀಜಿ ಕರೆ

12:50 AM Mar 05, 2023 | Team Udayavani |

ಮಣಿಪಾಲ: ಶಿವನನ್ನು ಎಂಟು ಹೆಸರುಗಳಿಂದ ಶಾಸ್ತ್ರಗಳು ಬಣ್ಣಿಸಿವೆ. ಎಲ್ಲರ ಶ್ರೇಯೋಭಿ ವೃದ್ಧಿಗಾಗಿ ಈ ನಾಮಾಷ್ಟಕದಿಂದ ಶ್ರದ್ಧಾಭಕ್ತಿ ಯಿಂದ ಶಿವನ ಆರಾಧನೆ ಮಾಡಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

Advertisement

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಶನಿವಾರ ದೇವಸ್ಥಾನಕ್ಕೆ ಆಗಮಿಸಿದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಮನುಷ್ಯನು ಭೋಗವನ್ನು ಅನುಭವಿಸುವುದು ತಪ್ಪಲ್ಲವಾದರೂ ಅದರಲ್ಲಿಯೇ ಮುಳುಗಿರಬಾರದು. ಆದ್ದರಿಂದ ಈ ಶರೀರ ಶಾಶ್ವತವಲ್ಲ ಎಂಬ ಅರಿವಿನೊಂದಿಗೆ ಇರುವ ಸಮಯ ದಲ್ಲಿ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಕೆಲಸಗಳನ್ನು ಮಾಡ ಬೇಕು. ಈ ಚಿಂತನೆಯ ಹಿನ್ನೆಲೆ ಯಲ್ಲಿಯೇ ಭಗವಂತ ಸರ್ವವ್ಯಾಪಿ ಯಾದರೂ ವಿಶೇಷವಾಗಿ ಶ್ಮಶಾನವಾಸಿ ಎಂದು ಹೇಳಲಾಗಿದೆ. ಭಗವಂತ ತನ್ನ ಅಧೀನದಲ್ಲಿ ಮಾಯೆಯೆಂಬ ಪ್ರಕೃತಿಯನ್ನು ಇರಿಸಿಕೊಂಡಿರುವುದ ರಿಂದ ಮಹೇಶ್ವರ ಎಂಬ ಹೆಸರು ಇದೆ ಎಂದರು.

ರುದ್ರ ಅಂದರೆ ದುಃಖ ಹೋಗಲಾಡಿ ಸುವವ ಎಂದರ್ಥ. ಶಿವನನ್ನು “ವಿಷ್ಣವೇ ನಮಃ’ ಎಂದೂ ಶಾಸ್ತ್ರದಲ್ಲಿ ಹೇಳಲಾಗಿದೆ. “ವಿಷ್ಣು’ ಎಂದರೆ ವ್ಯಾಪಕ ಎಂದರ್ಥ. ಒಬ್ಬನೇ ಭಗವಂತ ನನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆ ಯುತ್ತೇವೆ. ಭಗವಂತ ಒಬ್ಬನೇ ಎಂಬುದನ್ನು ಶಂಕರಾಚಾರ್ಯರು ಪ್ರತಿಪಾದಿಸಿ ಏಕತೆಯನ್ನು ಸಾಧಿಸಿದರು ಎಂದರು.

ಈ ಕ್ಷೇತ್ರದಲ್ಲಿ ಅತಿರುದ್ರ ಮಹಾ ಯಾಗ ವಿಶಿಷ್ಟವಾಗಿ ನಡೆದಿದೆ. ಇದೊಂದು ಅದ್ಭುತ ಭಗವತ್ಕಾರ್ಯ ಎಂದು ಸ್ವಾಮೀಜಿ ಹರ್ಷ ವ್ಯಕ್ತ ಪಡಿಸಿದರು.

ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್‌, ಶಿಲ್ಪಾ ಭಟ್‌ ಹಾಗೂ ದೇಗುಲ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌, ಅಶ್ವಿ‌ನಿ ಠಾಕೂರ್‌ ದಂಪತಿ ಸ್ವಾಮೀಜಿಯವರನ್ನು ಗೌರವಿಸಿದರು.

Advertisement

ಉದ್ಯಮಿ ಮುನಿಯಾಲು ಉದಯ ಕುಮಾರ ಶೆಟ್ಟಿ, ಆರೆಸ್ಸೆಸ್‌ ಜಿಲ್ಲಾ ಸಂಘ ಚಾಲಕ ಡಾ| ನಾರಾಯಣ ಶೆಣೈ, ನಾಸಿಕ್‌ ಉದ್ಯಮಿ ಎಂ.ಪಿ. ಪ್ರಭು, ಮಣಿಪಾಲ ಮಾಹೆ ವಿ.ವಿ. ಕುಲಪತಿ ಲೆ|ಕ| ಡಾ| ಎಂ.ಡಿ. ವೆಂಕಟೇಶ್‌, ಆರೆಸ್ಸೆಸ್‌ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಜಯ ಪ್ರಕಾಶ್‌, ಮಹಾರಾಷ್ಟ್ರದ ಅನಿತಾ ಪ್ರಭು, ವಿಧಾನಪರಿಷತ್‌ ಮಾಜಿ ಸದಸ್ಯ ದಯಾನಂದ ರೆಡ್ಡಿ, ಉದ್ಯಮಿಗಳಾದ ಯು. ಸತೀಶ್‌ ಶೇಟ್‌ ಉಡುಪಿ, ಕಾರ್ತಿಕ್‌ ಆರ್‌. ನಾಯಕ್‌ ಕುಂದಾಪುರ, ಚಂದ್ರಾ ಪ್ರಭು, ಮುಕುಂದ ಗಣಪತಿ ಪ್ರಭು, ಆತ್ಮಾರಾಮ್‌ ನಾಯಕ್‌ ಮಣಿಪಾಲ, ದೇಗುಲದ ಟ್ರಸ್ಟಿಗಳಾದ ಶುಭಕರ ಸಾಮಂತ್‌, ಸಂಜಯ್‌ ಪ್ರಭು, ಎಸ್‌. ದಿನೇಶ್‌ ಪ್ರಭು, ಶ್ರೀಧರ ಸಾಮಂತ್‌, ಅತಿರುದ್ರ ಮಹಾಯಾಗ ಸಮಿತಿ ಕೋಶಾಧಿಕಾರಿ ಸತೀಶ್‌ ಪಾಟೀಲ…, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಆಡಳಿತೆ ಮೊಕ್ತೇಸರರಾದ ಸುಭಾಕರ ಸಾಮಂತ, ಎಸ್‌. ದಿನೇಶ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ ಉಪಸ್ಥಿತರಿದ್ದರು.

ಪರ್ಕಳ ಗಣೇಶ್‌ ಪಾಟೀಲ್‌ ಸ್ವಾಗತಿಸಿ ಡಾ| ಜಯಶಂಕರ್‌ ನಿರೂ ಪಿಸಿ ದರು. ಶಾಸಕ ರಘುಪತಿ ಭಟ್‌ ಪ್ರಾಸ್ತಾವಿಕ ಮಾತನ್ನಾಡಿದರು. ಶ್ರೀಮಠದ ಉಡುಪಿ ಧರ್ಮಾಧಿಕಾರಿ ವಾಗೀಶ್‌ ಶಾಸಿŒಯವರು ಅಭಿ ನಂದನ ಪತ್ರವನ್ನು ವಾಚಿಸಿದರು. ಶೃಂಗೇರಿ ಸ್ವಾಮೀಜಿಯವರನ್ನು ಮಣಿಪಾಲದ ಸಿಂಡಿಕೇಟ್‌ ವೃತ್ತದಿಂದ ವೈಭವದ ಶೋಭಾಯಾತ್ರೆಯಲ್ಲಿ ಸ್ವಾಗತಿಸ ಲಾಯಿತು. ಆಂಧ್ರಪ್ರದೇಶದಿಂದ ತರಿಸಿದ ಪುಂಗನೂರು ಗೋಪೂಜೆ ಯನ್ನು ಸ್ವಾಮೀಜಿ ನಡೆಸಿದರು.

ಇಂದು ಅತಿರುದ್ರ ಮಹಾಯಾಗದ ಪೂರ್ಣಾಹುತಿ
ದೇವಸ್ಥಾನದಲ್ಲಿ ಫೆ. 22ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪೂರ್ಣಾಹುತಿಯು ಶೃಂಗೇರಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾ. 5ರಂದು ಬೆಳಗ್ಗೆ ನಡೆಯಲಿದೆ.

ಹಿಂದೂ ಧರ್ಮ ಶ್ರೇಷ್ಠ ಧರ್ಮ, ಮತಾಂತರ ಬೇಡ
ಹಿಂದೂ ಧರ್ಮದ ಮೇಲೆ ಮಾತ್ರ ಕೆಲವರು ಆಕ್ಷೇಪಣೆ, ವಿಮರ್ಶೆ ಮಾಡುತ್ತಿರುತ್ತಾರೆ. ಅಂಥವರ ಮಾತಿಗೆ ಬೆಲೆ ಕೊಡಬಾರದು. ವಿಮರ್ಶೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ನಮ್ಮ ಧರ್ಮ ಲೋಕದ ಉದ್ಧಾರಕ್ಕಾಗಿ ಬಂದದ್ದು. ಇದು ಶ್ರೇಷ್ಠವಾದ ಕಾರಣದಿಂದಲೇ ಅಸ್ತಿತ್ವದಲ್ಲಿದೆ. ಶಂಕರಾಚಾರ್ಯರ ಸಹಿತ ವಿವಿಧ ಮಹಾತ್ಮರು ಉಪದೇಶ ಮಾಡಿದ್ದಾರೆ. ಧರ್ಮದ ತಣ್ತೀವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಹಿಂದೂ ಧರ್ಮವನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಯಾರೂ ಇಂತಹ ತಪ್ಪು ಮಾಡಬೇಡಿ, ಯಾರು ಇಂತಹ ತಪ್ಪನ್ನು ಮಾಡಿದ್ದಾರೋ ಅವರು ಮರಳಿ ಬರಲು ಅವಕಾಶವಿದೆ. ಹಿಂದೂ ಧರ್ಮವನ್ನು ಆಕ್ಷೇಪಿಸುವವರಿಗೆ ಉತ್ತರವನ್ನೂ ಕೊಡಬೇಕು. ಇಷ್ಟೆಲ್ಲ ಸಂಪ್ರದಾಯಗಳಿದ್ದರೂ ಏಕತೆಯನ್ನು ಜಗತ್ತಿಗೆ ತೋರಿಸಿದ್ದೂ ಹಿಂದೂ ಧರ್ಮ ಎಂದು ಶೃಂಗೇರಿ ಪೀಠಾಧೀಶರಾದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next