Advertisement

 ತುಳುನಾಡು ಯಕ್ಷಗಾನ ಮೇಳದ ಉದ್ಘಾಟನೆ

11:37 AM Dec 06, 2017 | Team Udayavani |

ಉಡುಪಿ: ಶ್ರೀ ಸುಬ್ರಹ್ಮಣ್ಯ ನಾಗಬ್ರಹ್ಮ ದಶಾವತಾರ ಯಕ್ಷಗಾನ ನಾಟಕ ಸಭಾ – ತುಳುನಾಡು ಮೇಳದ ಉದ್ಘಾಟನೆ ಸಮಾರಂಭವು ಮುಚ್ಚಿಲ್‌ಕೋಡು ಶ್ರೀ ಸುಬ್ರಹ್ಮಣ್ಯ ದೇಗುಲದ ವಠಾರದಲ್ಲಿ ನಡೆಯಿತು.

Advertisement

ವೇ|ಮೂ| ವಿದ್ವಾನ್‌ ರಾಮಕೃಷ್ಣ ತಂತ್ರಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕುತ್ಯಾರು ಸಾಯಿನಾಥ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. 

ಉಡುಪಿಯ ಪಂಚರತ್ನ ಪ್ಯಾರಡೈಸ್‌ನ ಮಾಲಕ ಸಂತೋಷ್‌ ಶೆಟ್ಟಿ, ಶಿರ್ವದ ಸಿವಿಲ್‌ ಕಂಟ್ರಾಕ್ಟರ್‌ ಪೀಟರ್‌ ಕೋಡ್ಕ ಬೆಳ್ಮಣ್ಣು ಸ.ಹಿ.ಪ್ರಾ. ಶಾಲೆಯ ಚಿತ್ರಕಲಾ ಶಿಕ್ಷಕ ರಮೇಶ್‌ ಆಚಾರ್ಯ ಬಂಟಕಲ್ಲು, ಉಡುಪಿಯ ಅಬೂಬಕರ್‌ ಮದಿಪು, ಮೇಳದ ಕಾರ್ಯಾಧ್ಯಕ್ಷ ವಿಶ್ವನಾಥ ಪಾಲಮೆ, ಸಂಚಾಲಕ ಹರೀಶ್‌ ಬಂಗೇರ, ಕ್ಯಾಂಪ್‌ ಮ್ಯಾನೇಜರ್‌ ಶ್ರೀಧರ ಉಡುಪಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಭಾಗವತ ನಾಗರಾಜ ಉಪಾಧ್ಯ, ಮೇಳದ ಕಲಾವಿದ ರಾಜು ಅಮೀನ್‌ಗಾಡ್‌ ಅವರನ್ನು ಮೇಳದ ವ್ಯವಸ್ಥಾಪಕ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ಸಮ್ಮಾನಿಸಿದರು. ನಗರಸಭೆ ಸದಸ್ಯ ಶಾಂತಾರಾಮ ಸಾಲ್ವಂಕರ್‌ ಕಾರ್ಯಕ್ರಮ ನಿರೂಪಿಸಿದರು. ದೇವರ ಸೇವೆಯಾಟವಾಗಿ “ಶ್ರೀ ನಾಗಬೆರೆ¾ರ್‌’ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next