Advertisement

ಲಿಂಗಾಯತ, ವೀರಶೈವ ಎರಡೂ ಒಂದೇ: ಸಿದ್ದಗಂಗಾಶ್ರೀ ಸ್ಪಷ್ಟನೆ

02:40 PM Sep 12, 2017 | Team Udayavani |

ತುಮಕೂರು/ಬೆಂಗಳೂರು:ವೀರಶೈವ-ಲಿಂಗಾಯತ ಎರಡೂ ಪದದ ಅರ್ಥ ಒಂದೇ. ಗ್ರಾಮೀಣ ಭಾಗಗಳಲ್ಲಿ ಲಿಂಗಾಯ ಪದ ಬಳಸುತ್ತಾರೆ, ನಗರ ಪ್ರದೇಶದ ವಿದ್ಯಾವಂತರು ವೀರಶೈವ ಪದ ಬಳಸುತ್ತಾರೆ ಎಂದು ಸಿದ್ದಗಂಗಾ ಮಠದ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

Advertisement

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಂತೆ ತುಮಕೂರಿನ ಸಿದ್ದಗಂಗಾಶ್ರೀಗಳು ಸಹಮತ ಸೂಚಿಸಿದ್ದಾರೆ ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆ ಸಾಕಷ್ಟು ವಿವಾದಕ್ಕೆ ಗ್ರಾಸವಾದ ಹಿನ್ನೆಲೆಯಲ್ಲಿ ಸ್ವತಃ ಸಿದ್ದಗಂಗಾಶ್ರೀಗಳೇ ಮಾಧ್ಯಮ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಲಿಂಗಾಯತ, ವೀರಶೈವ ಎರಡೂ ಪದದ ಅರ್ಥ ಒಂದೇ.  ಸ್ವತಂತ್ರ ಲಿಂಗಾಯತ ಧರ್ಮದ ಬಗ್ಗೆ ಸಚಿವ ಎಂಬಿ ಪಾಟೀಲ್ ಅವರು ಚರ್ಚಿಸಿದ್ದಾರೆ. ಆದರೆ ಒಂದು ಸಮಾಜವನ್ನು ಇಬ್ಬಾಗ ಮಾಡುವುದು ಒಳ್ಳೆಯದಲ್ಲ. ಈ ರೀತಿಯ ಪ್ರಯತ್ನ ಯಾರೇ ಮಾಡಿದರೂ ಅದು ಒಳ್ಳೆಯದಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನನ್ನ ಹೇಳಿಕೆಯನ್ನು ಎಂಬಿ ಪಾಟೀಲ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಲಿಂಗಾಯತ, ವೀರಶೈವ ಎರಡೂ ಒಂದೇ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next