Advertisement

ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು: ಜುಲೈ 31 ರಂದು ನೃತ್ಯ ಶಂಕರ ಸರಣಿ 4

11:07 PM Jul 28, 2023 | Team Udayavani |

ಉಡುಪಿ: ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಇಲ್ಲಿನ ವಸಂತಮಂಟಪ ದಲ್ಲಿ ನೃತ್ಯ ಶಂಕರ ಸರಣಿ 4 ರ ಕಾರ್ಯಕ್ರಮ ಅದಿತಿ ಲಕ್ಷ್ಮಿ ಭಟ್ ಮಂಗಳೂರು ಇವರಿಂದ ಜುಲೈ 31 ಸೋಮವಾರ ಸಂಜೆ 6-25 ರಿಂದ ನಡೆಯಲಿದೆ.

Advertisement

ಡಾ|ಕಿರಣ್ ಕುಮಾರ್ ಹಾಗೂ ಡಾ|ಚೈತ್ರ ಲಕ್ಷ್ಮಿ ಬಿ ಇವರ ಮಗಳಾಗಿರುವ ಅದಿತಿಲಕ್ಷ್ಮೀ ಭಟ್ ತನ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸಿ ಕರ್ನಾಟಕ, ಕೇರಳ, ತಮಿಳುನಾಡು.. ಹೀಗೆ ವಿವಿದೆಡೆ ಭರತನಾಟ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿದ್ದಾಳೆ. ರಾಧಿಕಾ ಶೆಟ್ಟಿ, ನೃತ್ಯಾಂಗನ್ ಮಂಗಳೂರು ಇವರ ಶಿಷ್ಯೆ.

ವಿವಿಧ ಕಲಾ ಪ್ರಕಾರಗಳ ಬಗ್ಗೆಯೂ ಅಪಾರ ಒಲವು ಹೊಂದಿದ್ದು, ಅದಕ್ಕಾಗಿ ಬಹಳಷ್ಟು ಶ್ರಮವಹಿಸಿ ಅಭ್ಯಸಿಸುತ್ತಿದ್ದಾಳೆ. ಭರತನಾಟ್ಯದ ಜೊತೆಗೆ ಬೆಂಗಳೂರಿನ ಅನುಪಮಾ ಮಂಜುನಾಥ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ.ನೃತ್ಯಾಂಗನ್ ನ ಸಮೂಹ ಪ್ರಸ್ತುತಿಯ ಭಾಗವಾಗಿ ಅನೇಕ ಕಡೆ ಪ್ರದರ್ಶನ ನೀಡಿರುತ್ತಾಳೆ.

ಹಲವಾರು ಆನ್ಲೈನ್ ಮತ್ತು ಆಫ್ಲೆನ್ ಕಾರ್ಯಕ್ರಮಗಳಲ್ಲಿ ನೃತ್ಯಾಂಗನ್ ಸಂಸ್ಥೆಯ ಮುಖೇನ ಜಿಲ್ಲೆ,ರಾಜ್ಯ,ಹಾಗೂ ಅಂತಾರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಸ್ತುತಿಯನ್ನು ಪ್ರದರ್ಶಿಸಿದ್ದಾಳೆ. ಈಕೆ ಈಸ್ಟರ್ನ್ ವಿಭಾಗದಲ್ಲಿ ಗಾಯನ, ಕಥೆ ಹೇಳುವುದು,ಒಲಿಂಪಿಯಾಡ್, ಏಕವ್ಯಕ್ತಿ ನೃತ್ಯಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆದಿದ್ದಾಳೆ.ಅದಿತಿ ಹಲವಾರು ವಿಜ್ಞಾನ ಪ್ರದರ್ಶನ, ಚಿತ್ರ, ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾಳೆ,ಮಹಾಕಾವ್ಯ,ಪುರಾಣಗಳನ್ನು ಓದುವ ಹವ್ಯಾಸವನ್ನೂ ಹೊಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next