Advertisement
ಪೂಜಾ ಕಾರ್ಯ ವೇ| ಮೂ| ಕೆ. ಗೋವಿಂದ ಮೂರ್ತಿ ಭಟ್ ಮಾರ್ಗದರ್ಶನದಲ್ಲಿ ಮಂದಿರದ ಅರ್ಚಕ ಸುಧಾಕರ ಎಂ. ಶೆಟ್ಟಿ ಹಾಗೂ ಭುವಾಜಿ ಎಸ್. ಯು. ಬಂಗೇರ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ 8ರಿಂದ ಗಣಪತಿಹೋಮ, ಬಳಿಕ ಮಂದಿರದ ಅಶ್ವತ್ಥಕಟ್ಟೆ ಪೂಜೆ ನಡೆಯಿತು.
Related Articles
Advertisement
ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಗೌರವ ಕಾರ್ಯದರ್ಶಿ ಎಂ. ಎನ್. ಸುವರ್ಣ, ಗೌರವ ಕೋಶಾಧಿಕಾರಿಗಳಾದ ಕೆ. ಎನ್. ಸಾಲ್ಯಾನ್, ಅತುಲ್ ಎಂ. ಓಜಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್. ಯು. ಸುವರ್ಣ, ಎಂ. ಎನ್. ಕೋಟ್ಯಾನ್, ಜಯ ಎಂ. ಬಂಗೇರ, ಕೆ. ಎನ್. ಸಿ. ಸಾಲ್ಯಾನ್, ಪಿ. ಆರ್. ಅಮೀನ್, ತನೋಜಾ ಕಪ್ಪನ್‌ಕಲ್, ಎಸ್. ಎ. ಸಾಲ್ಯಾನ್, ಬಿ. ಎಚ್. ಹೆಜಮಾಡಿ, ಯು. ವಿ. ರಾವ್ ಉಪಸ್ಥಿತರಿದ್ದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಸಾರ್ವಜನಿಕ ಸೇವೆ ಮಾಡಿದ ಆತ್ಮತೃಪ್ತಿ ನಮಗಿದೆ. ಆಧ್ಯಾತ್ಮಿಕ ಚಿಂತನೆಯ ಕ್ಷೇತ್ರವಾದ ಇಲ್ಲಿ ಕಳೆದ ಒಂದು ವರ್ಷದಿಂದ ಭಜನೆ ಕಾರ್ಯಕ್ರಮಗಳು ಜರಗುತ್ತಿದ್ದು, ಇದಕ್ಕೆ ಸ್ಥಳೀಯ ಪೊಲೀಸ್ ಇಲಾಖೆಯವರು ಸಹಕರಿಸುತ್ತಿದ್ದಾರೆ. ಇಂದು ಮತ್ತೆ ವಾರ್ಷಿಕ ಮಹಾಪೂಜೆ ಯಥಾಸ್ಥಿತಿಯಲ್ಲಿ ಜರಗುವುದರ ಮೂಲಕ ಮತ್ತೆ ಈ ಆಧ್ಯಾತ್ಮಿಕ ಕ್ಷೇತ್ರ ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. -ಎಚ್. ಎಸ್. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್
ಸಾಂಕ್ರಾಮಿಕ ಕಾಲದಲ್ಲಿ ದೇವಸ್ಥಾನದಲ್ಲಿ ವಾರದ ಪೂಜೆ ಹೊರತು ಇತರ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಆದರೂ ತೊಂದರೆಯಲ್ಲಿದ್ದವರಿಗೆ ತಥಾಸ್ತು ಫೌಂಡೇಶನ್‌ನ ಸಹಕಾರದೊಂದಿಗೆ ಆಹಾರ ಧಾನ್ಯಗಳನ್ನು ಒದಗಿಸಿ, ಆರ್ಥಿಕವಾಗಿ ಸಹಕರಿಸಿದ್ದೇವೆ. ಕಳೆದ ಒಂದು ವರ್ಷದಿಂದ ಭಜನೆ ಪ್ರಾರಂಭಗೊಂಡು ಇಂದು ಸಂಪೂರ್ಣವಾಗಿ 67ನೇ ವಾರ್ಷಿಕ ಮಹಾಪೂಜೆ ನಡೆಯುತ್ತಿರುವುದು ಶ್ರೀ ಶನಿದೇವರ ಅನುಗ್ರಹದಿಂದ ಎನ್ನಬಹುದು. ಶನಿಶಿಂಗ್ನಾಪುರ ಪದ್ಧತಿಯಲ್ಲೇ ಎಣ್ಣೆ ಸೇವೆಗಾಗಿ ಊರಿನಿಂದ ಅಭಿಷೇಕ ಮೂರ್ತಿಯನ್ನು ಇಂದು ಪ್ರತಿಷ್ಠಾಪಿಸಿದ್ದೇವೆ. ಇದರಿಂದ ಭಕ್ತರ ಬೇಡಿಕೆಯನ್ನು ಸಮಿತಿಯು ಪೂರೈಸಿದಂತಾಗಿದೆ.-ಮೋಹನ್ ಜಿ. ಬಂಗೇರ ಅಧ್ಯಕ್ಷರು, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಮಲಾಡ್
-ಚಿತ್ರ-ವರದಿ : ರಮೇಶ್ ಉದ್ಯಾವರ್