Advertisement
ಫೆ. 7 ರಂದು ನಲಸೋಪರ ಪಶ್ಚಿಮದ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಫೋರ್ಟ್ ಇದರ ಶ್ರೀ ಗಣಪತಿ, ಶ್ರೀ ದುರ್ಗಾದೇವಿ, ನವಗ್ರಹ ಶ್ರೀ ಶನೈಶ್ಚರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಜಾತ್ರಾ ಮಹೋತ್ಸವ ಮತ್ತು 75 ನೇ ವಾರ್ಷಿಕ ಶನಿಮಹಾಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮನಸ್ಸಿನಲ್ಲಿರುವ ಭೇದಭಾವ, ಕಶ್ಮಲಗಳನ್ನು ಹೋಗಲಾಡಿಸಿ ನಾವೆಲ್ಲಾ ಒಂದಾಗಿ ಒಗ್ಗಟ್ಟಾಗಿ ದೇವಸ್ಥಾನದ ನಿರ್ಮಾಣಕ್ಕೆ ಕೈಜೋಡಿಸಿದ್ಧೇವೆ. ಸಹಬಾಳ್ವೆ, ಪ್ರೀತಿ ಮತ್ತು ವಿಶ್ವಾಸದಿಂದ ಬದುಕಲು ನಮ್ಮ ಪೂರ್ವಜರು ದೇವಾಲಯಗಳ ಪರಿಕಲ್ಪನೆಯನ್ನು ಬೋದಿಸಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ನುಡಿದು ಸಹಕ ರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Related Articles
ಸಮಾರಂಭದಲ್ಲಿ ದಾನಿಗಳನ್ನು, ಹಿರಿಯ ಪದಾಧಿಕಾರಿಗಳನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು. ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಪ್ರಾಯೋಜಕತ್ವದಲ್ಲಿ ಪೊಪ್ಪ ತುಳು ನಾಟಕ ಪ್ರದರ್ಶನಗೊಂಡಿತು.
Advertisement
ಬ್ರಹ್ಮಶ್ರೀ ವಿದ್ವಾನ್ ಕೊಯ್ಯೂರು ನಂದಕುಮಾರ್ ತಂತ್ರಿಯವರ ಪೌರೋಹಿತ್ಯದಲ್ಲಿ ಬೆಳಗ್ಗೆ ದೀಪ ಬಲಿ, ತೈಲಾದಿ ಸ್ನಾನ, ಶ್ರೀ ಶನೈಶ್ಚರ ದೇವರಿಗೆ ಬ್ರಹ್ಮಕಲಾಭಿಷೇಕ, ಶ್ರೀ ಗಣಪತಿ, ಶ್ರೀ ದುರ್ಗಾದೇವಿಯ ಸನ್ನಿಧಾನದಲ್ಲಿ ಕಲಶಾಭಿಷೇಕ, ಪ್ರಸನ್ನ ಪೂಜೆ, ದೇವರ ಉತ್ಸವ, ಪಲ್ಲಪೂಜೆ ಜರಗಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಗ್ರಿ ಗೋಪಾಲ್‌ಕೃಷ್ಣ ಸಾಮಗರ ನೇತೃತ್ವ ದಲ್ಲಿ ನಾಗ ಸನ್ನಿಧಿಯಲ್ಲಿ ದೇವರ ಉತ್ಸವ, ರಂಗ ಪೂಜೆ, ಕವಾಟ ಬಂಧನ ನೆರವೇರಿತು.
ಉತ್ಸವ ಸಮಿತಿ, ಉಪಸಮಿತಿಗಳ ಸದಸ್ಯರು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘ- ಸಂಸ್ಥೆಗಳ ಪ್ರತಿನಿಧಿಗಳು, ಸಚಿವರು, ಶಾಸಕರು,ಸಂಸದರರು ಮಠಾಧೀಪತಿಗಳು, ಧರ್ಮಗುರುಗಳು ಹೆಚ್ಚಿನ ಸಂಖ್ಯೆ ಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿ ಶನಿದೇವರ ಅನುಗ್ರಹಕ್ಕೆ ಪಾತ್ರರಾದರು.
75 ವರ್ಷಗಳ ಹಿಂದೆ ಬೆರಳೆಣಿಕೆಯ ಸಾಮಾನ್ಯ ಉದ್ಯೋಗಸ್ಥರು ಸೇರಿ ಸ್ಥಾಪಿಸಿದ ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಫೋರ್ಟ್ ಪ್ರಸ್ತುತ ನಲಸೋಪರದ ಶ್ರೀಪ್ರಸ್ಥ ಸನ್ನಿಧಿಯಲ್ಲಿ ನಿರ್ಮಿಸಿರುವ ಶ್ರೀ ಶನಿಮಂದಿರವು ಲಕ್ಷಾಂತರ ಮಂದಿ ಸದ್ಭಕ್ತರು ಸೇರುವ ಪವಿತ್ರ ಸ್ಥಳವಾಗಿ ಕಂಗೊಳಿಸುತ್ತಿದೆ. ಶ್ರೀ ಶನೀಶ್ವರ ದೇವರ ಶಿಲಾಮಯ ದೇವಸ್ಥಾನ, ಶ್ರೀ ನಾಗ ಸನ್ನಿಧಿ, ಆಕರ್ಷಕ ಧ್ವಜಸ್ತಂಭ, ಧ್ವಜಾರೋಹಣ, ಬಲಿ ಉತ್ಸವ ಜಾತ್ರೆ ಇತ್ಯಾದಿಗಳು ಮಹಾರಾಷ್ಟ್ರ ರಾಜ್ಯದ ಮಣ್ಣಿನಲ್ಲಿ ಶಾಶ್ವತವಾಗಿ ನೆಲೆವೂರಿತು. ಎಂಟು ದಿನಗಳ ಕಾಲ ನಿರಂತರವಾಗಿ ಪೂಜೆ, ಹವನ, ಯಜ್ಞ, ಹೋಮ, ಭಜನೆ, ಸಾಂಸ್ಕೃತಿಕ ವೈಭವ ನಡೆಯಿತು. ಭಕ್ತರಿಗೆ ಆಹೋರಾತ್ರಿ ಲಘು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆದು ಭಕ್ತಾದಿಗಳ ಪ್ರಶಂಸೆಗೆ ಪಾತ್ರವಾಯಿತು.
ಚಿತ್ರ-ವರದಿ : ರಮೇಶ್ ಅಮೀನ್