Advertisement
ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮರ್ಮು ಅವರು ಜುಲೈ 3 ರಂದು ಸೋಮವಾರ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸಂಜೆ ನಡೆಯಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಎರಡನೇ ವರ್ಷದ ಘಟಿಕೋತ್ಸವದಲ್ಲಿ ತಮ್ಮ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಆರು ಪ್ರಖ್ಯಾತ ಭಾರತೀಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದಾರೆ.
1. ಪ್ರೊ ಅಜಯ್ ಕೆ ಸೂದ್ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ವಿಜ್ಞಾನ ಮತ್ತು ತಂತ್ರಜ್ಞಾನ)
2. ಗಾನಕಲಾಭೂಷಣ ವಿದ್ವಾನ್ ಡಾ ಆರ್ ಕೆ ಪದ್ಮನಾಭ ಖ್ಯಾತ ಕರ್ನಾಟಕ ಸಂಗೀತ ಗಾಯಕ (ಸಂಗೀತ ಮತ್ತು ಕಲೆ)
3. ಶ್ರೀ ಪುಲ್ಲೆಲ ಗೋಪಿಚಂದ್ ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರ (ಕ್ರೀಡೆ ಮತ್ತು ದಾರ್ಢ್ಯತೆ)
4. ಡಾ ಪ್ರತಿಮಾ ಮೂರ್ತಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ನಿರ್ದೇಶಕಿ (ಆರೋಗ್ಯ)
5. ವೇದ ವಿದ್ವಾಂಸ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ ವಿಜಯ್ ಶಂಕರ್ ಶುಕ್ಲಾ ಅಧ್ಯಾಪಕರು, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಫಾರ್ ಎಜುಕೇಶನ್ (ಶಿಕ್ಷಣ)
6. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ ಭಾರತೀಯ ಪರಿಸರವಾದಿ (ಸಮಾಜ ಸೇವೆ ಮತ್ತು ಲೋಕೋಪಕಾರ).