ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ ಶನೀಶ್ವರ ಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 6ರಿಂದ ಕ್ಷೇತ್ರ ಶುದ್ಧೀಕರಣ, ಕ್ಷೇತ್ರದ ಎಲ್ಲ ದೇವರಿಗೆ ಪಂಚಾಮೃತ ಅಭಿಷೇಕ, ಆರತಿ, ಪ್ರಸಾದ ವಿತರಣೆ ನಡೆಯಿತು.
ಅಪರಾಹ್ನ 4ರಿಂದ ಹನುಮಾನ್ ಚಾಲೀಸ್ ಮತ್ತು ಶ್ರೀ ಶನೀಶ್ವರ ಜಪ ಪಠಣೆ, ಮಂದಿರದ ಶ್ರೀ ಶನೀಶ್ವರ ಭಜನ ಸಮಿತಿ ಹಾಗೂ ಇನ್ನಿತರ ಭಜನ ಮಂಡಳಿಗಳ ಸದಸ್ಯರಿಂದ ಭಜನೆ, ಸಂಜೆ 6.30ರಿಂದ ಮೀರಾರೋಡ್‌ನ ಹಲವಾರು ಧಾರ್ಮಿಕ ಸಂಸ್ಥೆಯ ಸದಸ್ಯರಿಂದ ಕುಣಿತ ಭಜನೆ, ದೀಪಾರಾಧನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಜರಗಿತು.
ಅನ್ನಸಂತರ್ಪಣೆಯ ಸೇವಾಕರ್ತರಾಗಿ ಆಶಾ ಪದ್ಮನಾಭ ಶೆಟ್ಟಿ ಮತ್ತು ಅಲಂಕಾರದ ಸೇವಾಕರ್ತರಾಗಿ ಮಾಲಾ ಜೈನ್ ಸಹಕರಿಸಿದರು. ಸೇವಾದಾರರು ಹಾಗೂ ಪ್ರಿಯಾ ವಿ. ಗುಪ್ತ ಅವರನ್ನು ಮಂದಿರದ ಪರವಾಗಿ ಗೌರವಿಸಲಾಯಿತು. ಈ ಸಂದರ್ಭ ದಲ್ಲಿ ಮಂದಿರದ ಗೌರವಾಧ್ಯಕ್ಷ ವಿನೋದ್ ವಾಘಸಿಯಾ, ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಉಪಾಧ್ಯಕ್ಷ ಗುಣಕಾಂತ್ ಶೆಟ್ಟಿ, ಕೋಶಾಧಿಕಾರಿ ಅಚ್ಯುತ ಕೋಟ್ಯಾನ್, ಜತೆ ಕಾರ್ಯದರ್ಶಿ ಸುಜಾತಾ ಜಿ. ಶೆಟ್ಟಿ ಕಾಪು, ಉಪಾ ಡಿ. ಶೆಟ್ಟಿಗಾರ್, ಜತೆ ಕೋಶಾಧಿಕಾರಿ ಜಯಕರ ಮುದ್ರಾಡಿ ಉಪಸ್ಥಿತರಿದ್ದರು.
ಭಾರತಿ ಅಂಚನ್, ಪೂಜಾ ಸಮಿತಿಯ ಅಧ್ಯಕ್ಷೆ ಆಶಾ ಪಿ. ಶೆಟ್ಟಿ, ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ, ವಿಜಯಲಕ್ಷ್ಮೀ ಶೆಟ್ಟಿಗಾರ್, ಭುವಾಜಿ ನಾರಾಯಣ ಶೆಟ್ಟಿ, ಮಹಿಳಾ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಉಪಾಧ್ಯಕ್ಷೆ ಮಾಲಾ ಜೈನ್, ಕಾರ್ಯದರ್ಶಿ ವಸಂತಿ ಶೆಟ್ಟಿ ಮತ್ತು ಹೇಮಾ ಶೆಟ್ಟಿ , ಸುಂದರಿ ಕೋಟ್ಯಾನ್, ಯಶೋದಾ ಪೂಜಾರಿ, ಮೋಹಿತಾ ಸಿ. ಅಮೀನ್, ಆರತಿ ರಾವ್, ಪ್ರೇಮಾ ಶೇಖರ್ ಪೂಜಾರಿ, ರೇಖಾ ಕುಮಾರ್, ರಿಷಿಕಾ ಮೂಲ್ಯ, ಶಶಿಕಲಾ ಶೆಟ್ಟಿ , ಸಾರಿಕಾ ಪೂಜಾರಿ, ಸಂಧ್ಯಾ ನಾಯಕ್, ಪ್ರಿಯಾ ವಿ. ಗುಪ್ತ, ಯಕ್ಷಗಾನ ಸಮಿತಿಯ ರಾಜೇಶ್ ಶೆಟ್ಟಿ ಕಾಪು ಮತ್ತು ದಿನೇಶ್ ಶೆಟ್ಟಿಗಾರ್, ಚೇತನ್ ಶೆಟ್ಟಿ, ಸುಭಾಷ್ ಶೆಟ್ಟಿ , ಚಂದ್ರ ಪೂಜಾರಿ, ಆರ್. ಕೆ. ಕರ್ಕೇರ, ಜಗದೀಶ್ ಶೆಟ್ಟಿ ಪಂಜಿನಡ್ಕ, ಹರೀಶ್ ರೈ ಕುಂಬ್ಳೆ, ಯುವ ಸಮಿತಿಯ ರಿಚೀನ್ ಅಮೀನ್, ಜಯೇಶ್ ಸುವರ್ಣ, ಹಿಮಾಂಶ್ ಅಮೀನ್ ಭಾಗವಹಿಸಿದ್ದರು.
ಶ್ರೇಯಶ್ ಶೆಟ್ಟಿ , ಆಶಾ ಮೂಲ್ಯ, ಜಾಗ್ರತಿ ಸುವರ್ಣ, ವಿಜೇತಾ ಪೂಜಾರಿ, ರಿಷೀತ್ ಮೂಲ್ಯ, ಕಾವ್ಯಾ ಶೆಟ್ಟಿಗಾರ್, ಭಾವನಾ ಪೂಜಾರಿ, ಪ್ರಜ್ಞಾ ಶೆಟ್ಟಿಗಾರ್, ಕಾರ್ತಿಕ್ ಮಚೂರು, ಅರ್ಚಕರಾದ ನಿರಾವ್ ಭಟ್ ಮತ್ತು ಸುಶಿಲ್ ಮಿಶ್ರ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗುಣಕಾಂತ್ ಶೆಟ್ಟಿ ಕರ್ಜೆ ಅವರು ಸಹಕರಿಸಿರುವ ಎಲ್ಲರನ್ನು ಅಭಿನಂದಿಸಿ ಶುಭ ಹಾರೈಸಿದರು.