ಮುಂಬಯಿ: ದಕ್ಷಿಣ ಮುಂಬಯಿ ಕೊಲಾಬಾ ಕಪ್ ಪರೇಡ್ ಪರಿಸರದಲ್ಲಿ ಕಳೆದ ಸುಮಾರು ಮೂವತ್ತು ವರ್ಷಗಳಿಂದ ಸಾಮಾ ಜಿಕ ಮತ್ತು ಧಾರ್ಮಿಕ ಸೇವೆಗಳೊಂದಿಗೆ ಸಕ್ರೀಯವಾಗಿರುವ “ಕೊಲಾಬಾ ಜಾತ್ರೆ’ ಎಂದೇ ಜನಜನಿತ ಶ್ರೀ ಸಾಯಿನಾಥ ಮಿತ್ರ ಮಂಡಳಿಯ ತ್ರಿದಶಕ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆಯು ಜ. 25ರಂದು ಸಂಜೆ ಕಪ್ ಪರೇಡ್‌ನಸಾಯಿ ಸದನ್‌ನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಾಯಿನಾಥ್ ಮಿತ್ರ ಮಂಡಳ್ ಕಪ್‌ಪರೇಡ್ ಮುಂಬಯಿ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ, ಮನಿಫೋಲ್ಡ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಷನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಎಸ್. ಭಂಡಾರಿ ಅವರ ಸಂಸ್ಥಾಪನೆಯ ಶ್ರೀ ಸಾಯಿನಾಥ ಮಿತ್ರ ಮಂಡಳಿ ಏರ್ಪಡಿಸಿದ್ದ ವಾರ್ಷಿಕ ಮಹಾಪೂಜೆಯನ್ನು ಭಾಂಡೂಪ್ ಪಶ್ಚಿಮದ ಶ್ರೀ ನಿತ್ಯಾನಂದ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಶ್ರೀ ಲಕ್ಷ್ಮೀ ನಾರಾಯಣ ಭಟ್ ಅವರು ವಿಧಿವತ್ತಾಗಿ ನೆರವೇರಿಸಿದರು.
ಶ್ರೀ ಸಾಯಿ ಅಭಿಷೇಕ ಮತ್ತು ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ ಇತ್ಯಾದಿ ಪೂಜಾದಿಗಳೊಂದಿಗೆ ನೆರವೇರಿ ತೀರ್ಥ ಪ್ರಸಾದ ವಿತರಿಸಿ ನೆರೆದ ಭಕ್ತಾಭಿಮಾನಿಗಳಿಗೆ ಅನುಗ್ರಹಿಸಲಾಯಿತು. ಕಡಂದಲೆ ಸುರೇಶ್ ಎಸ್. ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಮಾ| ಸೌರಭ್ ಎಸ್. ಭಂಡಾರಿ ಮತ್ತು ಮೇಘಾ ಎಸ್. ಭಂಡಾರಿ ಪೂಜಾದಿಗಳ ಯಜಮಾನತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಮಾಜಿ ಮಹಿಳಾ ವಿಭಾಗಾಧ್ಯಕ್ಷೆ ಲತಾ ಪಿ. ಶೆಟ್ಟಿ, ಭಂಡಾರಿ ಸೇವಾ ಸಮಿತಿಯ ಮುಂಬಯಿ ಇದರ ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ. ಭಂಡಾರಿ, ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಅತ್ತೂರು, ಗುಲಾಬಿ ಕೃಷ್ಣ ಭಂಡಾರಿ, ಭಂಡಾರಿ ಸೇವಾ ಸಮಿತಿಯ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಅನುಶ್ರೀ ಶಿವರಾಮ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಆಗಮಿಸಿದ ಸರ್ವ ಸಾಯಿ ಭಕ್ತರನ್ನು ಗೌರವಿಸಿದರು. ವಾರ್ಷಿಕ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಮಹಾದ್ವಾರ, ಆರ್ಕೇಸ್ಟ್ರಾ ಸದ್ಭಕ್ತರನ್ನು ಆಕರ್ಷಿಸಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್