Advertisement

ಶ್ರೀರಂಗಪಟ್ಟಣ: ಶ್ರೀರಂಗನಿಗೆ ಬೀದಿಯಲ್ಲೇ ಪೂಜೆ; ಭಕ್ತರಿಗೆ ಅನ್ನಸಂತರ್ಪಣೆ

05:53 PM Jan 13, 2022 | Team Udayavani |

ಶ್ರೀರಂಗಪಟ್ಟಣ: ಕೊರೊನಾ ಹೆಚ್ಚಳದ ಕಾರಣದಿಂದ ವೈಕುಂಠ ಏಕಾದಶಿಗೆ ಸರ್ಕಾರ ಬ್ರೇಕ್ ಹಾಕಿದ ಹಿನ್ನಲೆಯಲ್ಲಿಂದು ಶ್ರೀರಂಗಪಟ್ಟಣದಲ್ಲಿ ಆದಿ ರಂಗ ಎನಿಸಿರುವ ಶ್ರೀ ರಂಗನಾಥ ದೇವಾಲಯ ಇಂದು ಬಂದ್ ಆಗಿತ್ತು.

Advertisement

ವೈಕುಂಠ ಏಕಾದಶಿಯಂದು ದೇವರ ದರ್ಶನ ಇಲ್ಲದೆ ಭಕ್ತರು ಕಂಗಾಲಾದ್ರೆ, ಪಟ್ಟಣದ ಖಾಸಗಿ ಬಸ್ ಬಸ್ ನಿಲ್ದಾಣದ ಬಳಿ ಪಟ್ಟಣದ ಸಮಾನ ಮನಸ್ಕರರ ವೇದಿಕೆಯ ಭಕ್ತರು ಬೀದಿ ಬದಿಯ ಮರದ ಕೆಳಗೆ ಶ್ರೀರಂಗನಾಥನ ಫೋಟೋ ಇಟ್ಟು  ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಿಸಿ ಕೊರೊನಾ ಮೂರನೇ ಅಲೆಯಿಂದ ರಕ್ಷಣೆ ನೀಡುವಂತೆ ಶ್ರೀರಂಗನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.

ಕೊರೊನಾ ಮೂರನೆ ಅಲೆ ತಡೆಗಾಗಿ ಸರ್ಕಾರ ಈ ಬಾರಿ‌ ವೈಕುಂಠ ಏಕಾದಶಿ ಸೇರಿದಂತೆ ಸಂಕ್ರಾಂತಿ ಹಬ್ಬ ಆಚರಣೆಗೆ  ನಿರ್ಬಂಧ ಹೇರಿದೆ.ಈ ಹಿನ್ನಲೆಯಲ್ಲಿಂದು ಪ್ರತಿ ವರ್ಷದ ವೈಕುಂಠ ಏಕಾದಶಿಯಂದು ಹೆಚ್ಚಿನ ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದ  ಆದಿರಂಗನೆಂದೆ ಪ್ರಸಿದ್ದಯಾದ ಶ್ರೀರಂಗಪಟ್ಟಣದ ಶ್ರೀ ರಂಗನಾಥ ದೇವಾಲಯವನ್ನು ಬಂದ್ ಮಾಡಲಾಗಿತ್ತು.ಇದ್ರಿಂದ ಭಕ್ತರಿಗೆ ದೇವರ ದರ್ಶನ ಸಿಗದೆ ಪರದಾಡುವಂತಾದ್ರೆ,ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪಟ್ಟಣದ ಸಮಾನ ಮನಸ್ಕರ ವೇದಿಕೆ ತಂಡದ ಸದಸ್ಯರು ರಸ್ತೆ ಬದಿಯ ಮರದ ಕೆಳಗೆ ಶ್ರೀರಂಗನಾಥನ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ರು.

ಶ್ರೀರಂಗನಾಥನಿಗೆ ಬೀದಿ ಬದಿಯೇ ಪೂಜೆ ಸಲ್ಲಿಸಿ ಸ್ಥಳದಲ್ಲೆ ಅನ್ನ-ಸಾರು,ಪಾಯಸ ಮೊಸರನ್ನದ ಪ್ರಸಾದ ತಯಾರಿಸಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿದರು.ನೂರಾರು ಭಕ್ತರು ಸೇರಿದಂತೆ ಕಾರಿನಲ್ಲಿ  ಬಂದಿದ್ದ ಪ್ರವಾಸಿಗರು ಕೂಡ ಬೀದಿ ಬದಿಯ ವೆಂಕಟೇಶ್ವರ ದರ್ಶನ ಪಡೆದು ಅನ್ನ ಸಂತರ್ಪಣೆ ಯಲ್ಲಿ ದೇವರ ಪ್ರಸಾದ ಸೇವಿಸಿಪುನೀತರಾದರು.

Advertisement

ಇನ್ನು ಈ ಪೂಜೆ ಕಾರ್ಯ  ಕೈಗೊಂಡ ಪಟ್ಟಣದ ಸಮಾನ ಮನಸ್ಕರ ವೇದಿಕೆ ತಂಡದ ಸದಸ್ಯ‌ ಮಾದೇಶ್ ಮಾತನಾಡಿ ಈ ಬಾರಿ ಕೊರೊನಾದಿಂದ ವೈಕುಂಠ ಏಕಾದಶಿಯಂದು‌ ನಮ್ಮ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ಬಂದ್ ಆಗಿದೆ.ಇದ್ರಿಂದ ಭಕ್ತರಿಗೆ ನಿರಾಶೆಯಾಗಿದೆ.ಆ ಕಾರಣಕ್ಕೆ ನಾವು ಈ ಸ್ಥಳದಲ್ಲಿ ದೇವರ ಪೋಟೋ ಇಟ್ಟು ಪೂಜೆ ಸಲ್ಲಿಸಿ ಭಕ್ತರಿಗೆ‌ ಅನ್ನ ಸಂತರ್ಪಣೆ ಕಾರ್ಯ ನಡೆಸ್ತಿದ್ದು, ಕೊರೊನಾ ಮೂರನೇ ಅಲೆಯಿಂದ ಶ್ರೀರಂಗನಾಥ ಎಲ್ಲರ ರಕ್ಷಣೆ ಮಾಡಿಲಿ ಎಂದು ಪ್ರಾರ್ಥನೆ ಮಾಡಿಕೊಂಡಿರುವುದಾಗಿ ಮಾದೇಶ್ ತಿಳಿಸಿದರು.

ಈ ವಿಶೇಷ ಪೂಜೆ ಯಲ್ಲಿ ಸಮಾನ ಮನಸ್ಕರ ತಂಡದ ಸದಸ್ಯರ ಶ್ರೀಕಂಠಯ್ಯ, ಚಂದ್ರಶೇಖರ್, ಮಾದೇಶ್, ರಾಜಣ್ಣ, ಸುರೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next