Advertisement
ವೈಕುಂಠ ಏಕಾದಶಿಯಂದು ದೇವರ ದರ್ಶನ ಇಲ್ಲದೆ ಭಕ್ತರು ಕಂಗಾಲಾದ್ರೆ, ಪಟ್ಟಣದ ಖಾಸಗಿ ಬಸ್ ಬಸ್ ನಿಲ್ದಾಣದ ಬಳಿ ಪಟ್ಟಣದ ಸಮಾನ ಮನಸ್ಕರರ ವೇದಿಕೆಯ ಭಕ್ತರು ಬೀದಿ ಬದಿಯ ಮರದ ಕೆಳಗೆ ಶ್ರೀರಂಗನಾಥನ ಫೋಟೋ ಇಟ್ಟು ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಿಸಿ ಕೊರೊನಾ ಮೂರನೇ ಅಲೆಯಿಂದ ರಕ್ಷಣೆ ನೀಡುವಂತೆ ಶ್ರೀರಂಗನಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
Related Articles
Advertisement
ಇನ್ನು ಈ ಪೂಜೆ ಕಾರ್ಯ ಕೈಗೊಂಡ ಪಟ್ಟಣದ ಸಮಾನ ಮನಸ್ಕರ ವೇದಿಕೆ ತಂಡದ ಸದಸ್ಯ ಮಾದೇಶ್ ಮಾತನಾಡಿ ಈ ಬಾರಿ ಕೊರೊನಾದಿಂದ ವೈಕುಂಠ ಏಕಾದಶಿಯಂದು ನಮ್ಮ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ಬಂದ್ ಆಗಿದೆ.ಇದ್ರಿಂದ ಭಕ್ತರಿಗೆ ನಿರಾಶೆಯಾಗಿದೆ.ಆ ಕಾರಣಕ್ಕೆ ನಾವು ಈ ಸ್ಥಳದಲ್ಲಿ ದೇವರ ಪೋಟೋ ಇಟ್ಟು ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಸ್ತಿದ್ದು, ಕೊರೊನಾ ಮೂರನೇ ಅಲೆಯಿಂದ ಶ್ರೀರಂಗನಾಥ ಎಲ್ಲರ ರಕ್ಷಣೆ ಮಾಡಿಲಿ ಎಂದು ಪ್ರಾರ್ಥನೆ ಮಾಡಿಕೊಂಡಿರುವುದಾಗಿ ಮಾದೇಶ್ ತಿಳಿಸಿದರು.
ಈ ವಿಶೇಷ ಪೂಜೆ ಯಲ್ಲಿ ಸಮಾನ ಮನಸ್ಕರ ತಂಡದ ಸದಸ್ಯರ ಶ್ರೀಕಂಠಯ್ಯ, ಚಂದ್ರಶೇಖರ್, ಮಾದೇಶ್, ರಾಜಣ್ಣ, ಸುರೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.