Advertisement

ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ; ರೆಡ್ಡಿ ಹೊಸಪಕ್ಷಕ್ಕೆ ರಾಮುಲು ಪ್ರತಿಕ್ರಿಯೆ

04:00 PM Dec 25, 2022 | Team Udayavani |

ಬಳ್ಳಾರಿ: “ನಾನು ಪಕ್ಷದ ಶಿಸ್ತಿನ ಸಿಪಾಯಿ. ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ”. ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸಚಿವ ಶ್ರೀರಾಮುಲು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಜನಾರ್ದನ ರೆಡ್ಡಿ ಬುದ್ಧಿವಂತರು. ಎಲ್ಲವನ್ನೂ ತಿಳಿದವರು. ಅನುಭವವಿದ್ದ ವ್ಯಕ್ತಿ. ನನ್ನ ಪ್ರಾಣ ಸ್ನೇಹಿತನಾಗಿ ಜನಾರ್ದನ ರೆಡ್ಡಿ ಬಿಜೆಪಿ‌ಗೆ ದೊಡ್ಡ ಶಕ್ತಿಯಾಗಿದ್ದರು. ಜನಾರ್ದನ ರೆಡ್ಡಿಗೂ ಕೂಡ ಪಕ್ಷವು ಶಕ್ತಿಯಾಗಿ ನಿಂತಿತ್ತು. ಅವರು ವೈಯಕ್ತಿಕವಾಗಿ‌ ಪಕ್ಷ ಮಾಡಿದ್ದಾರೆ. ಬಿಜೆಪಿ ಪಕ್ಷ ಅವರನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ಅವರು ಪಕ್ಷವನ್ನು ಯಾವತ್ತು ಬಿಟ್ಟು ಕೊಟ್ಟಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ನಾನು. ಕಾಲ ಬಂದಾಗ ಎಲ್ಲವುದಕ್ಕೂ ಉತ್ತರ ಕೊಡುತ್ತೇನೆ ಎಂದರು.

ಅವರೊಬ್ಬ ಅನುಭವ ಕಾಜಕಾರಣಿ, ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈವರೆಗೆ ರೆಡ್ಡಿಯವರ ಜೊತೆಗೆ ಬಂಡೆಯಾಗಿ ನಿಂತಿದ್ದೆ ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ. ಈ ಸಂದರ್ಭದಲ್ಲಿ ಸಿದ್ಧಾಂತ ಬೇರೆ ಇದ್ದಾಗ ಹೇಗೆ ಮನವೊಲಿಸುವುದಕ್ಕೆ ಆಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಮನವೊಲಿಸುವ ಕೆಲಸ ಮುಗಿದಿದೆ ಎಂದರು.

ಇದನ್ನೂ ಓದಿ:ಬಿಜೆಪಿ ಜತೆಗಿನ ಸಂಬಂಧ ಮುಗಿಯಿತು, ಮುಂದಿನ ಚುನಾವಣೆಯಲ್ಲೇ ಸ್ಪರ್ಧೆ ಮಾಡ್ತೇನೆ: ಗುಡುಗಿದ ರೆಡ್ಡಿ

ಹೊಸ ಪಕ್ಷ ಒಳೆಯದು, ಕೆಟ್ಟದು ಎಂಬ ವಿಶ್ಲೇಷಣೆ ಮಾಡುವುದಿಲ್ಲ. ಈ ಬಗ್ಗೆ ಚರ್ಚೆ ಮಾಡಲು ನನಗೆ ಇಷ್ಟವಿಲ್ಲ. ಜನಾರ್ದನ ರೆಡ್ಡಿ ಒಳ್ಳೆಯದನ್ನೇ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದರು.

Advertisement

ಕಾರ್ಯಕರ್ತರು ಇಬ್ಭಾಗವಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮುಲು, ಕಾರ್ಯಕರ್ತರು ನಮ್ಮ ಜೊತೆಯಿದ್ದಾರೆ. ‌ಇದರಲ್ಲಿ ಯಾವುದೇ ಗೊಂದಲ ಆಗುವುದಿಲ್ಲ ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷ, ಪಕ್ಷಕ್ಕೆ ಹಿನ್ನಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ. ರಾಜಕಾರಣ ಮತ್ತು ಸ್ನೇಹ ಬೇರೆ ಬೇರೆ.‌ ಸ್ನೇಹಿತರಾಗಿ ನಾವು ಮುಂದುವರೆಯತ್ತೇವೆ. ರೆಡ್ಡಿಯವರೊಂದಿಗೆ ನಮ್ಮ ಎಲ್ಲಾ ನಾಯಕರು, ಎಲ್ಲಾ ಸಂದರ್ಭದಲ್ಲಿ ನಿಂತಿದ್ದರು. ಆದರೆ ಅವರೀಗ ಬೇರೆ ಪಕ್ಷ ಮಾಡಿದ್ದಾರೆ ಈ ಬಗ್ಗೆ ಹೆಚ್ಚೇನು ಹೇಳಲಾಗದು ಎಂದು ಶ್ರೀರಾಮುಲು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next