Advertisement
ಮಹಾಕಾವ್ಯ ಅಸಾಧ್ಯ ಎಂಬ ಕಾಲದಲ್ಲಿ ರಾಮಾಯಣವನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮದೇಯಾದ ವಿಭಿನ್ನ ಆಲೋಚನಾ ಲಹರಿಯಲ್ಲಿ ಪಾತ್ರಗಳನ್ನು ಹೆಣೆದು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಕುವೆಂಪು ಅವರ “ಶ್ರೀರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಐವತ್ತು ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಾಲೇ ಈ ಕುರಿತ ಅಂಚೆ ಚೀಟಿಯನ್ನು ಹೊರತಂದಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಅವರ ಕಾವ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ಜತೆಗೂಡಿ ರಂಗದ ಮೇಲೆ ತಂದಿದೆ.
Related Articles
Advertisement
ನಾಟಕ ರಚನೆ ಸವಾಲಗಿತ್ತು: ಹಳೆಗನ್ನಡ ಭಾಷೆಯಲ್ಲಿರುವ ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ರಂಗದ ಮೇಲೆ ತರುವುದೇ ಒಂದು ಸವಾಲಾಗಿತ್ತು. ಸುಮಾರು ಒಂಭತ್ತು ಸಾವಿರ ಪುಟಗಳಷ್ಟಿದ್ದ ಕಾವ್ಯವನ್ನು, 110 ಪುಟಕ್ಕೆ ಇಳಿಕೆ ಮಾಡಿಕೊಳ್ಳಲಾಗಿದೆ ಎಂದು ಸಾಗರ ಮೂಲದ ರಂಗ ನಿರ್ದೇಶಕ ಕೆ.ಜಿ.ಮಹಾಭಲೇಶ್ವರ ಹೇಳುತ್ತಾರೆ. ನಿನಾಸಂಗಾಗಿ ಹಳೆಗನ್ನಡದ ಕಾವ್ಯಗಳನ್ನು ರಂಗಸಜ್ಜಿಕೆ ಮೇಲೆ ತಂದಿದ್ದೆ. ಹೀಗಾಗಿ, ಈಗ ಕುವೆಂಪು ಅವರ ಕಾವ್ಯಕ್ಕೆ ಚ್ಯುತಿಬಾರದ ಹಾಗೆ ರಂಗದ ಮೇಲೆ ತೆರೆದಿಡುವ ಪ್ರಯತ್ನ ನಡೆದಿದೆ.
ವಿಭಿನ್ನ ಪ್ರಸಾದನ ಬಳಕೆ: ಈ ಮಹಾಕಾವ್ಯ ಆರ್ಯ ಸಂಸ್ಕೃತಿಯ ಅಯೋದ್ಯೆ, ಬಡಕಟ್ಟು ಜನಾಂಗದ ಕಿಶ್ಕಿಂಧೆ ಮತ್ತು ವೈಭವದ ಲಂಕೆಯನ್ನು ಸುತ್ತಿಬರುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ತಕ್ಕಂತೆ ರಂಗ ವಿನ್ಯಾಸ ಮಾಡಲಾಗುವುದು. ಜತಗೆ ಬಡಕಟ್ಟು ಸಂಗೀತವನ್ನು ಇಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದು ಜಗದೀಶ್ ಮನೆವಾರ್ತೆ ಮಾಹಿತಿ ನೀಡಿದರು.
“ಶ್ರೀರಾಮಾಯಣ ದರ್ಶನಂ’ಹಳೆಗನ್ನಡದಲ್ಲಿದೆ. ಹೀಗಾಗಿ, ಹಲವು ಮಂದಿಗೆ ಈ ಕಾವ್ಯದ ಸೌಂದರ್ಯ ತಿಳಿದಿಲ್ಲ. ಈ ದೃಷ್ಟಿಯಿಂದ ಈ ಕಾವ್ಯವನ್ನು ರಂಗರೂಪದಲ್ಲಿ ಹಿಡಿದಿಡಲಾಗಿದೆ. ಮುಂದಿನ ದಿನಗಳಲ್ಲಿ ನಾಟಕ ಪುಸ್ತಕ ರೂಪದಲ್ಲಿ ದಾಖಲಾಗಲಿದೆ.-ಎನ್.ಆರ್.ವಿಶುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ * ದೇವೇಶ ಸೂರಗುಪ್ಪ