Advertisement

‘ಶ್ರೀರಾಮ ಚರಿತ’ಕೊಂಕಣಿ ಮಹಾಕಾವ್ಯ ಲೋಕಾರ್ಪಣೆ

01:55 AM Mar 27, 2017 | Karthik A |

ಶಿರಸಿ: ಇದೇ ಪ್ರಥಮ ಬಾರಿಗೆ ರಚಿತಗೊಂಡ ಕೊಂಕಣಿ ಷಟ್ಪದಿ ಮಹಾಕಾವ್ಯ ‘ಶ್ರೀರಾಮ ಚರಿತ’ ಕೃತಿ ರವಿವಾರ ಲೋಕಾರ್ಪಣೆಗೊಂಡಿತು. ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್‌ ಅವರು ಹತ್ತು ವರ್ಷಗಳ ಅವಧಿಯಲ್ಲಿ ಭಾಮಿನಿ ಷಟ್ಪದಿಯಲ್ಲಿ ಬರೆದ ಕೃತಿಯನ್ನು ಎರಡು ಸಂಪುಟಗಳಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕೃತಿಯನ್ನು ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಸಾಹಿತ್ಯ ಪರಿಷತ್‌ ಪ್ರಕಟಿಸಿದ್ದು, ಸುಮಾರು 5,000 ಷಟ್ಪದಿಗಳಿವೆ. ಅರ್ಥ ವಿವರಣೆಯೊಂದಿಗೆ 1,500 ಪುಟಗಳ ಕೃತಿ ಇದಾಗಿದೆ.

Advertisement

ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಕೃತಿ ಬಿಡುಗಡೆಗೊಳಿಸಿದರು. ಹಾಂಗ್ಯೋ ಐಸ್‌ಕ್ರೀಂ ಸಂಸ್ಥೆ ಆಡಳಿತ ನಿರ್ದೇಶಕ ಪ್ರದೀಪ ಪೈ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣಿ ಸಮಾಜದ ಅಧ್ಯಕ್ಷ ರಾಮರಾವ ರಾಯ್ಕರ, ಎ. ಸುಬ್ಬರಾವ್‌, ಉದ್ಯಮಿ ರವೀಂದ್ರ ನಾಯಕ, ಕವಿ ವಿಶ್ವನಾಥ ಶೇಟ್‌, ಪ್ರೊ| ಕೆ.ಎ. ಭಟ್ಟ, ಶಾ.ಮಂ. ಕೃಷ್ಣರಾಯ, ಪರಿಷತ್‌ ಗೌರವಾಧ್ಯಕ್ಷ ಡಾ| ವಿ.ಎಸ್‌. ಸೋಂದೆ, ಅಧ್ಯಕ್ಷ ನಿತಿನ್‌ ಕಾಸರಕೋಡ ಇತರರು ಇದ್ದರು. ಮುಂಜಾನೆ ಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ಮಹಾಕಾವ್ಯವನ್ನು ಪೂಜಿಸಿ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಬಿಡುಗಡೆ ಸಮಾರಂಭದ ಬಳಿಕ ವಿವಿಧ ಗೋಷ್ಠಿಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ವಾಗ್ದೇವಿ ಕೊಂಕಣಿ ಮಹಿಳಾ ಯಕ್ಷಗಾನ ಮಂಡಳಿಯಿಂದ ಕೊಂಕಣಿ ಯಕ್ಷಗಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next