Advertisement

ಅದಮಾರು ಮಠದಲ್ಲಿ  ಶ್ರೀ ರಾಮ ನವಮಿ ಉತ್ಸವ ಆಚರಣೆ

05:07 PM Mar 26, 2018 | |

ಮುಂಬಯಿ: ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ 22ನೇ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವನ್ನು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಮಾ. 25 ರಂದು ಆಚರಿಸಲಾಯಿತು.

Advertisement

ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಪೂಜೆ ನೆರವೇರಿಸಿ ವಿಧಿವತ್ತಾಗಿ ವಾರ್ಷಿಕ ರಾಮನವಮಿಯನ್ನು ಆಚರಿಸಿ, ಆಶೀರ್ವಚನ ನೀಡಿ, ವಿಶೇಷ ಮಂತ್ರೋಪದೇಶಗೈದು, ಬರುವ ವರ್ಷ ರಾಮ ನವಮಿ ಉತ್ಸವದ ಶುಭವಸರದ ಒಂದು ದಿವಸದಲ್ಲಿ ಈ ಮಂತ್ರವನ್ನು ಭಗವಂತನಿಗೆ ಯಜ್ಞ  ಮೂಲಕ ಅರ್ಪಿಸಬೇಕು. ಶ್ರೀ ರಾಮ ನವಮಿಯು ಹೇಮಲಂಬಿನಾಮ ಸಂವತ್ಸರದಲ್ಲಿ ಬರುವಂತಹ ಒಂದು ದೊಡ್ಡ ಆಚರಣೆ. ಗುಡಿಪಾಡ್ವದಿಂದ ರಾಮ ನವಮಿ ತನಕ ಮುಂಬಯಿಗರು ಈ ಉತ್ಸವಕ್ಕೆ ಕಳೆದ ಎಂಟು ದಿನಗಳಿಂದ ಪೂರ್ವಸಿದ್ಧತೆ ನಡೆಸಿ ಇಂದಿಲ್ಲಿ ಅದ್ದೂರಿಯಾಗಿ ಶ್ರೀ ರಾಮ ದೇವರನ್ನು ಆರಾಧಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ. ಈ ಹೊಸ ವರ್ಷದಲ್ಲಿ  ಮುಂಬಯಿಗರಿಗೆ ಆಯುರಾರೋಗ್ಯ ಭರಿತ ನೆಮ್ಮದಿಯ ಬಾಳನ್ನು ಶ್ರೀ ರಾಮನು ಪ್ರಾಪ್ತಿಸಲಿ ಎಂದು ಅನುಗ್ರಹಿಸಿ ಶುಭಹಾರೈಸಿದರು.

ರಾಮ ನವಮಿ ನಿಮಿತ್ತ ದಿನಪೂರ್ತಿಯಾಗಿ ಜರಗಿದ ವಿವಿಧ  ಧಾರ್ಮಿಕ  ಕಾರ್ಯಕ್ರಮದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀನಿವಾಸ ಭಟ್‌ ಅವರಿಂದ ರಾಮಾಯಣ ಹರಿಕಥೆ, ಪಲ್ಲಕ್ಕಿ ಉತ್ಸವ, ಸುರೇಶ್‌ ಭಟ್‌ ಕುಂಟಾಡಿ ಅವರಿಂದ ಉತ್ಸಹ ಬಲಿ ನೆರವೇರಿದ ಬಳಿಕ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಗಜರಥವನ್ನೆಳೆದು ರಥೋತ್ಸವಕ್ಕೆ ಚಾಲನೆ ನೀಡಿದರು. ತದನಂತರ ರಜತ ಪಲ್ಲಕಿ ಉತ್ಸವ, ಸ್ವಾಮೀಜಿ ಅವರಿಂದ ವಿಶೇಷ ಪ್ರವಚನ, ರಾತ್ರಿ ಮಹಾಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾರೊRàಪ್‌ ಕನ್ನಡಿಗರ ಬಳಗ ಮತ್ತು ವಿಠಲ ಭಜನ ಮಂಡಳಿಗಳಿಂದ ಹರಿ ಭಜನೆ ಹಾಗೂ ವಾಗೆªàವಿ ಭಜನಾ ಮಂಡಳಿ ದೇವರ ನಾಮ ಪಠನಗೈದರು.  ದಿನೇಶ್‌ ವಿನೋದ್‌ ಕೋಟ್ಯಾನ್‌ ಬಳಗದಿಂದ  ಸ್ಯಾಕೊÕಫೋನ್‌ ವಾದನ ನಡೆಯಿತು. ಅಮಿತಾ ಕಲಾ ಮಂದಿರ ಮೀರಾರೊಡ್‌ ತಂಡ ಮತ್ತು ಅರ್ಪಿತಾ ಪೂಜಾರಿ ಇವರಿಂದ ಭರತನಾಟ್ಯ ಹಾಗೂ ನಾಗೇಶ್‌ ಮೀರಾರೋಡ್‌ ತಂಡದಿಂದ  ಲವ-ಕುಶ ಯಕ್ಷಗಾನ ಪ್ರದರ್ಶನಗೊಂಡಿತು.

ವಾಸುದೇವ ಉಡುಪ, ಕೃಷ್ಣರಾಜ ಉಪಾಧ್ಯಾಯ ವಾಮಂಜೂರು, ಶಂಕರ ನಾರಾಯಣ ಕಲ್ಯಾಣಿತ್ತಾಯ, ಶ್ರೀಧರ ಭಟ್‌, ಶ್ರೀಪತಿ ಭಟ್‌ ಅಂಬೋಲಿ ಸೇರಿದಂತೆ ಅನೇಕ ಪುರೋಹಿತರು, ಭಕ್ತಾಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ¾àನಾರಾಯಣ ಮುಚ್ಚಿಂತ್ತಾಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌ ವಂದಿಸಿದರು. 

Advertisement

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next