Advertisement

Wadi: ಶ್ರೀರಾಮ ಮೂರ್ತಿ ಮೆರವಣಿಗೆಗೆ ಪೊಲೀಸರಿಂದ ಅಡ್ಡಿ- ಮೂರ್ತಿ ಹೊತ್ತು ಸಾಗಿದ ರಾಮ ಭಕ್ತರು

06:03 PM Jan 22, 2024 | Team Udayavani |

ವಾಡಿ: ರಾಮ ಮುರ್ತಿ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದ ಕಾರಣ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮೂರ್ತಿಯನ್ನು ಹೊತ್ತು ಸಾಗಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

Advertisement

ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ನಿಮಿತ್ತ ವಾಡಿಯಲ್ಲಿ ಸೋಮವಾರ ಶೋಭಾ ಯಾತ್ರೆ ಏರ್ಪಡಿಸಲಾಗಿತ್ತು. ಸೇವಾಲಾಲ ಮಂದಿರದಿಂದ ಶ್ರಿಲಕ್ಷ್ಮೀನಾರಾಯಣ ಮಂದಿರ ವರೆಗೆ ರಾಮನ ಮೂರ್ತಿ ಮೆರವಣಿಗೆ ನಡೆಸಲು ಬಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಇದಕ್ಕಾಗಿ 15 ಅಡಿ ಎತ್ತರದ ರಾಮ ಮೂರ್ತಿ ತರಿಸಿಕೊಂಡಿದ್ದರು. ಆದರೆ ಪೊಲೀಸರು ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದರು. ದೇವಸ್ಥಾನದಲ್ಲಿ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಸಮ್ಮತಿ ಸೂಚಿಸಲಾಗಿತ್ತು. ಪೊಲೀಸರ ವಿರುದ್ಧ ಸಿಡಿದೆದ್ದ ಹಿಂದೂ ಕಾರ್ಯಕರ್ತರು, ರಾಮನ ಮೂರ್ತಿ ಹೊತ್ತು ಸಾಗಲು ಮುಂದಾದರು. ಈ ವೇಳೆ ಸಾವಿರಾರು ಜನ ಜಯಘೋಷಗಳನ್ನು ಮೊಳಗಿಸಿ ಜನರಲ್ಲಿ ಚೈತನ್ಯ ತುಂಬಿದರು. ಪೊಲೀಸರು ಮಾತ್ರ ವಾಹನ ಅಡ್ಡ ನಿಲ್ಲಿಸಿ ಮುರ್ತಿ ಮೆರವಣಿಗೆಗೆ ಅಡ್ಡಿಪಡಿಸಿದರು. ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂಬ ಕಾಳಜಿ ಪೊಲೀಸರದ್ದಾದರೆ, ರಾಮ ಉತ್ಸವ ನಮ್ಮ ಸ್ವಾಭಿಮಾನ ಎಂಬುದು ಹಿಂದೂ ಕಾರ್ಯಕರ್ತರ ವಾದವಾಗಿ ಜಟಾಪಟಿ ನಡೆಯಿತು.

ಒಟ್ಟಾರೆ ವಾಡಿಯಲ್ಲಿ ರಾಮ ಭಕ್ತರ ಉತ್ಸವಕ್ಕೆ ಕಾನೂನು ಅಡ್ಡಿಯಾಗಿದ್ದು, ರಾಮ ಮೂರ್ತಿ ಅಡ್ಡ ಮಲಗಿಸಿ ಮುಂದೆ ಸಾಗಿಸುವ ಪ್ರಯತ್ನ ವಿಫಲವಾಯಿತು. ಪೊಲೀಸರು ರಾಮ ಉತ್ಸವಕ್ಕೆ ಅವಕಾಶ ಏಕೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದರಿಂದ ಹೆಚ್ಚುವರಿ ಪೊಲೀಸ್ ಅಧಿಕ್ಷಕ ನಾಗೇಶ ಐತಾಳ, ಡಿವೈಎಸ್ಪಿ ಶೀಲವಂತ ಹೊಸಮನಿ, ಸಿಪಿಐ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ ಬಂದೋಬಸ್ತ್ ಒದಗಿಸಿದ್ದರು. ಸದ್ಯ ವಾಡಿಯಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next