Advertisement

ರಾಯರ ಪವಾಡ: ಸಾಲಿಗ್ರಾಮವಾಗಿ  ಪರಿವರ್ತನೆಗೊಂಡ ಮಂತ್ರಾಕ್ಷತೆ!

06:05 AM Nov 30, 2018 | |

ಬಾಗಲಕೋಟೆ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಿಂದ ತಂದಿದ್ದ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯಗಳು ಸಾಲಿಗ್ರಾಮವಾಗಿ ಪರಿವರ್ತನೆಗೊಂಡ ಪವಾಡ ವಿದ್ಯಾಗಿರಿಯ ಪ್ರಹ್ಲಾದ ಸಿಮೀಕೇರಿ ಅವರ ನಿವಾಸದಲ್ಲಿ ನಡೆದಿದೆ.

Advertisement

ವಿದ್ಯಾಗಿರಿ 12ನೇ ಕ್ರಾಸ್‌ ನಿವಾಸಿ, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಪರಮಭಕ್ತ ಪ್ರಹ್ಲಾದ ಸಿಮೀಕೇರಿ ಅವರು ಆರು ತಿಂಗಳ ಹಿಂದೆ ಮಂತ್ರಾಲಯಕ್ಕೆ ತೆರಳಿದ್ದರು. ಆಗ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು, ಆಶೀರ್ವಾದ ರೂಪದಲ್ಲಿ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯ ನೀಡಿದ್ದರು. ಅವುಗಳನ್ನು ತಂದು ಮನೆಯ ಜಗುಲಿಯ ಮೇಲೆ ಇಟ್ಟಿದ್ದರು. ಈ ಮಂತ್ರಾಕ್ಷತೆ ಮತ್ತು ನಿರ್ಮಾಲ್ಯಗಳು 10 ಸಾಲಿಗ್ರಾಮಗಳಾಗಿ ಪರಿವರ್ತನೆಗೊಂಡಿದ್ದವು. ಆದರೆ, ಇದನ್ನು ಪ್ರಹ್ಲಾದ ಅವರು ಬಹಿರಂಗಪಡಿಸಿರಲಿಲ್ಲ. ಪುನಃ ಬುಧವಾರ ಮಂತ್ರಾಲಯಕ್ಕೆ ಹೋಗಿ ಅವುಗಳನ್ನು ಸುಬುಧೇಂದ್ರತೀರ್ಥ ಶ್ರೀಗಳಿಗೆ ತೋರಿಸಿದಾಗ ಅವು ಸಾಲಿಗ್ರಾಮಗಳಾಗಿ ಪರಿವರ್ತನೆಗೊಂಡಿರುವುದು ನಿಜ ಎಂದು ಖಚಿತಪಡಿಸಿದರು.

ಅದರಲ್ಲಿ ಐದು ಮಂತ್ರಾಲಯದ ಶ್ರೀ ಮಠದಲ್ಲಿಟ್ಟು, ಇನ್ನುಳಿದ ಐದನ್ನು ಮರಳಿ ತಮ್ಮ ನಿವಾಸಕ್ಕೆ ತಂದು, ಗುರುವಾರ ಈ ವಿಷಯ ಬಹಿರಂಗಪಡಿಸಿದ್ದಾರೆ. ಬ್ರಾಹ್ಮಣ ಸಂಪ್ರದಾಯದಲ್ಲಿ ಪವಿತ್ರವಾದ ಸ್ಥಾನವನ್ನು ಈ ಸಾಲಿಗ್ರಾಮಗಳು ಪಡೆದಿವೆ. ದೇವರ ಸ್ವರೂಪ ಎಂಬ ನಂಬಿಕೆಯೂ ಭಕ್ತರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next