Advertisement
ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ಸಮಾಜದ ಬಂಧುಗಳ ಒಳಿತಿಗಾಗಿ ಮೀಸಲಾತಿ ಹೋರಾಟ ನಡೆಸುತ್ತಿದ್ದು ಇಂದಿಗೆ 201ದಿನಗಳು ಕಳೆದರೂ ಸರ್ಕಾರ ಗಮನ ಹರಿಸದೇ ಇರುವುದು ಖಂಡನೀಯ. ಶ್ರೀಗಳು ಗಾಳಿ ಮಳೆ ಚಳಿ ಎನ್ನದೆ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದು ಸರ್ಕಾರ ಸಮಾಜದ ಬೇಡಿಕೆಯನ್ನು 201 ದಿನ ಕಳೆದರೂ ಇನ್ನು ಈಡೇರಿಕೆ ಭರವಸೆ ನೀಡಿರುವುದಿಲ್ಲ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಲ್ಲಿ ಎಸ್ಸಿ/ ಎಸ್ ಟಿ ವರ್ಗಗಳಿಗೆ ಜೀವನ ಮತ್ತು ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬೇಕೆಂದು ಸಂವಿಧಾನದ ಆಶಯವಾಗಿರುತ್ತದೆ ಅದರಂತೆ ಕೇಂದ್ರ ಸರ್ಕಾರವು ಜನಗಣತಿಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಿದೆ. ಆದರೆ ರಾಜ್ಯ ಸರ್ಕಾರ ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ. ಸರ್ಕಾರ ಇತರೇ ಯಾವುದೇ ಮಠಗಳಿಗೆ ಹೆಚ್ಚಿನ ಅನುದಾನ ನೀಡಿರುವುದಿಲ್ಲ . ಇದಲ್ಲದೆ ಸರ್ಕಾರ ಎಲ್ಲಾ ರೀತಿಯ ಮೀಸಲಾತಿಯನ್ನು ಕಡಿತಗೊಳಿಸುವ ಆಲೋಚನೆಯಲ್ಲಿದೆ ಹಾಗೂ ನಿಗಮ ಮಂಡಳಿಗಳನ್ನು ತೆಗೆದುಹಾಕುವ ತೀರ್ಮಾನದಲ್ಲಿದೆ. ಆದ್ದರಿಂದ ಮೀಸಲಾತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲು ಶ್ರೀಗಳ ಜೊತೆ ತಾಲೋಕಿನ ಸಮಾಜದ ಬಂದುಗಳು ಸಹಕರಿಸಬೇಕೆಂದು ಮನವಿ ಮಾಡಿದರು.