Advertisement
21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಶಾಲೆಯ ತಳ ಅಂತಸ್ತಿನಲ್ಲಿ ದೇಗುಲದ ನೌಕರರ ವಾಹನ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಪ್ರಥಮ ಅಂತಸ್ತಿನಲ್ಲಿ ಅಡುಗೆ ಕೋಣೆ ಹಾಗೂ ಊಟದ ಭವನ ನಿರ್ಮಾಣವಾಗಿದೆ. ಎರಡನೇ ಅಂತಸ್ತಿನಲ್ಲಿ ಲಡ್ಡು ಪ್ರಸಾದ ತಯಾರಿಕಾ ಕೊಠಡಿ ಹಾಗೂ ಸ್ವಸಹಾಯ ಪದ್ಧತಿ ಊಟಕ್ಕೆ ವ್ಯವಸ್ಥೆ ಇದೆ. ಏಕ ಕಾಲದಲ್ಲಿ 1 ಸಾವಿರ ಭಕ್ತರಿಗೆ ಭೋಜನದ ವ್ಯವಸ್ಥೆ 75 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಬೃಹತ್ ಕಟ್ಟಡದಲ್ಲಿ ಏಕ ಕಾಲದಲ್ಲಿ 1ಸಾವಿರ ಭಕ್ತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರೊಂದಿಗೆ 1 ಸಾವಿರ ಸಂಖ್ಯೆಯ ಭಕ್ತರು ಹೊರ ಆವರಣದಲ್ಲಿ ಊಟಕ್ಕಾಗಿ ಕಾದಿರಲು ವಿಶಾಲ ಕೋಣೆಯನ್ನು ನಿರ್ಮಿಸಲಾಗಿದೆ.ಟೇಬಲ್ ವ್ಯವಸ್ಥೆ
ಈ ವರೆಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಅನ್ನ ಪ್ರಸಾದ ಸ್ವೀಕಾರಕ್ಕೆ ನೆಲದಲ್ಲಿ ಕೂರಬೇಕಿತ್ತು. ಈಗ ಎಲ್ಲರಿಗೂ ಟೇಬಲ್, ಫೈಬರ್ ಚೆಯರ್ ವ್ಯವಸ್ಥೆ ಮಾಡಲಾಗುತ್ತಿದೆ.
ಒಳ ಚರಂಡಿ, ಕುಡಿಯುವ ನೀರಿನ ಸರಬರಾಜು ಸಹಿತ ಭೋಜನ ಶಾಲೆ ನಿರ್ಮಾಣಕ್ಕೆ ತಗಲುವ ಸುಮಾರು ಒಟ್ಟು 66 ಕೋಟಿ ರೂ. ವೆಚ್ಚವನ್ನು ಕೊಲ್ಲೂರು ದೇಗುಲ ಭರಿಸುತ್ತಿದೆ. ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ತ್ವರಿತಗತಿ ಕಾಮಗಾರಿಗೆ ಮುಂದಾಗಿದ್ದಾರೆ. ಭೋಜನ ಶಾಲೆ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಅತೀ ಶೀಘ್ರ ಭಕ್ತರ ಉಪಯೋಗಕ್ಕೆ ಲಭ್ಯವಾಗಲಿದೆ.
– ಹರೀಶ ಕುಮಾರ್ ಶೆಟ್ಟಿ,ಅಧ್ಯಕ್ಷರು ಕೊಲ್ಲೂರು ದೇಗುಲ ವ್ಯವಸ್ಥಾಪನಾ ಸಮಿತಿ