Advertisement

ಕೊಲ್ಲೂರು ಮೂಕಾಂಬಿಕೆ ಸಾನ್ನಿಧ್ಯದಲ್ಲಿ ಭಕ್ತ ಸಾಗರ!

01:12 AM Mar 07, 2022 | Team Udayavani |

ಕೊಲ್ಲೂರು: ವಾರಾಂತ್ಯ ರಜೆ ಹಾಗೂ ರಾಜ್ಯದ ಗಡಿಗಳಲ್ಲಿ ಕೊರೊನಾ ನಿರ್ಬಂಧಗಳು ತೆರವಾಗಿರುವ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.

Advertisement

ಮಾ. 5 ಮತ್ತು 6ರಂದು ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಯಾತ್ರಾರ್ಥಿಗಳು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮುಂಜಾನೆಯಿಂದ ರಾತ್ರಿ ತನಕ ನೆರೆದ ಭಕ್ತರಿಗೆ ಅನಾಯಾಸ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಭಕ್ತರ ಸರದಿ ಸಾಲು ಮುಖ್ಯ ರಸ್ತೆಯನ್ನು ದಾಟಿ ಮುಂದುವರಿದಿದ್ದು, ಹಲವಾರು ತಿಂಗಳ ಅನಂತರದ ಕ್ಷೇತ್ರದಲ್ಲಿ ಇಷ್ಟು ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದೆ.

ವಸತಿ ಗೃಹಗಳು ಭರ್ತಿ
ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಗಡಿಪ್ರದೇಶಗಳಲ್ಲಿ ನಿರ್ಬಂಧಗಳು ತೆರವಾಗಿ ವಾಹನಗಳಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿ ರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷ ದಿಂದೀಚೆಗೆ ಕ್ಷೇತ್ರ ದರ್ಶನಕ್ಕೆ ತೆರಳಲಾಗದೇ ಚಡಪಡಿಸುತ್ತಿದ್ದ ಹೊರರಾಜ್ಯಗಳ ಭಕ್ತರು ಇಲ್ಲಿಗೆ ಆಗಮಿಸಿದ್ದರು. ದೇಗುಲದ ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು. ಅಂಗಡಿಗಳಲ್ಲಿ ಖರೀದಿಗಾಗಿ ಭಕ್ತರು ಮುಗಿಬೀಳುತ್ತಿರುವುದು ಕಂಡುಬಂತು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next