Advertisement

ಶ್ರೀ ಮೂಕಾಂಬಿಕಾ ಸೋಶಿಯಲ್‌ ವೆಲ್ಫೇರ್‌ ಫೌಂಡೇಷನ್‌: ಆರೋಗ್ಯ ಶಿಬಿರ

04:43 PM Jun 09, 2017 | |

ಡೊಂಬಿವಲಿ: ನಗರದಲ್ಲಿ ನೂತನವಾಗಿ ಸ್ಥಾಪನೆಗೊಂಡ ಶ್ರೀ ಮೂಕಾಂಬಿಕಾ ಸೋಶಿಯಲ್‌ ವೆಲ್ಫೇರ್‌ ಫೌಂಡೇಷನ್‌ ವತಿಯಿಂದ ಆರೋಗ್ಯ ತಪಾಸಣ ಶಿಬಿರವು ಜೂ. 4ರಂದು ನಗರದ ಪ್ರಗತಿ ಕಾಲೇಜಿನ ಎದುರುಗಡೆಯಿರುವ ದತ್ತ ನಗರ ಗಾರ್ಡನ್‌ ಸಭಾಗೃಹದಲ್ಲಿ ಜರಗಿತು.

Advertisement

ಶಿಬಿರವನ್ನು ಕಲ್ಯಾಣ್‌ ಜಿಲ್ಲಾ ಶಿವಸೇನ ಪ್ರಮುಖ ಗೋಪಾಲ ಲಾಂಡೆY ಅವರು ಉದ್ಘಾಟಿಸಿ ಮಾತನಾಡಿ, ಶಿವಸೇನ ಸೌತ್‌ ಇಂಡಿಯನ್‌ ಸೆಲ್‌ನ ಕಾರ್ಯಕರ್ತರು ಸಂಸ್ಥೆಯ ವತಿಯಿಂದ ಉತ್ತಮ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಪ್ರಸ್ತುತ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜಿಸಿದ್ದು, ಶಿಬಿರದ ಲಾಭವನ್ನು ಎಲ್ಲರೂ ಪಡೆಯಬೇಕು. ನಮ್ಮ ಆರೋಗ್ಯ ಭಾಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆರೋಗ್ಯ ಭಾಗ್ಯವಿದ್ದರೆ ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಇಂತಹ ಕಾರ್ಯಕ್ರಮಗಳಿಗೆ ಶಿವಸೇನೆಯಿಂದ ಎಲ್ಲಾ ರೀತಿಯ ಸಹಕಾರ ದೊರೆಯ
ಲಿದೆ. ಈ ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ಜರಗುವಂತಾಗಲಿ ಎಂದರು.

ಶಿವಸೇನಾ ತಾಲೂಕು ಪ್ರಮುಖರಾದ ಬಾವು ಸಾಹೇಬ್‌ ಚೌಧರಿ ಮಾತನಾಡಿ, ಶಿವಸೇನೆಯ ಸೌತ್‌ ಸೆಲ್‌ರ ಕಾರ್ಯಕರ್ತರ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಇಂತಹ ಆರೋಗ್ಯ ಶಿಬಿರಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರಿಯಾಗುತ್ತದೆ. ಈ ನೂತನ ಸಂಸ್ಥೆಯಿಂದ ಇನ್ನಷ್ಟು ಸಮಾಜಪರ ಕಾರ್ಯಗಳು ನಡೆದು ಉನ್ನತ ಮಟ್ಟಕ್ಕೆ ಏರಲಿ ಎಂದು ನುಡಿದು ಹಾರೈಸಿದರು.

ಕಾರ್ಯಕ್ರಮವನ್ನು ಗೋಪಾಲ್‌ ಲಾಂಡೆY, ಬಾವು ಸಾಹೇಬ್‌ ಚೌಧರಿ, ರಾಜೇಶ್‌ ಮೋರೆ, ವಿಶ್ವನಾಥ್‌ ರಾಣೆ, ಆನಂದ ಶೆಟ್ಟಿ ಎಕ್ಕಾರು ಹಾಗೂ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ದಿವಾಕರ ರೈ, ಬಾಬು ಮೊಗವೀರ, ಚಂದ್ರ ನಾಯ್ಕ ಮೊದಲಾದವರನ್ನು ಪುಷ್ಪಗುಚ್ಚವನ್ನಿತ್ತು ಸತ್ಕರಿಸಲಾಯಿತು. ರಾಜೇಶ್‌ ಮೋರೆ ಕಾರ್ಯಕ್ರಮ ನಿರ್ವಹಿಸಿದರು. ಸುಭಾಶ್‌ ಶೆಟ್ಟಿ ಇನ್ನಂಜೆ ವಂದಿಸಿದರು.

ವೇದಿಕೆಯಲ್ಲಿ ಶಿವಸೇನಾ ಜಿಲ್ಲಾಧ್ಯಕ್ಷ ಗೋಪಾಲ್‌ ಲಾಂಡೆY, ತಾಲೂಕು ಅಧ್ಯಕ್ಷ ಬಾವು ಸಾಹೇಬ್‌ ಚೌಧರಿ, ಸಭಾಗೃಹ ನೇತಾರ ರಾಜೇಶ್‌ ಮೋರೆ, ನಗರ ಸೇವಕ ವಿಶ್ವನಾಥ ರಾಣೆ, ಸಂಸ್ಥೆಯ ಅಧ್ಯಕ್ಷೆ ಅನುಪಮಾ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಕಾರ್ಯದರ್ಶಿ ಸುಭಾಶ್‌ ಶೆಟ್ಟಿ ಇನ್ನಂಜೆ, ಬಾಲಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಡೊಂಬಿವಲಿ ಹಾಗೂ ಆಸುಪಾಸಿನ ತುಳು-ಕನ್ನಡಿಗರು ಸೇರಿದಂತೆ ನೂರಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next