ತುಮಕೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸುವ ಬಜೆಟ್‌ನಲ್ಲಿ ಭಕ್ತರ ಪಾಲಿನ ನಡೆದಾಡುವ ದೇವರು ಕರ್ನಾಟಕ ರತ್ನ, ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ವಿಶೇಷ ಯೋಜನೆ ಘೋಷಿ ಸುತ್ತಾರೆ ಎನ್ನುವ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಇತ್ತು. ಆದರೆ, ಬಜೆಟ್‌ನಲ್ಲಿ ಅವರ ಹೆಸರಿನಲ್ಲಿ ಯಾವುದೇ ರೀತಿಯ ಯೋಜನೆ ಘೋಷಣೆ ಮಾಡದೇ ಇರುವುದು ಭಕ್ತರಲ್ಲಿ, ಸಾರ್ವಜನಿಕರಿಗೆ ನಿರಾಶೆಯಾಗಿದೆ.
5 ಕೋಟಿ ಅನುದಾನ ಸಮಾಧಾನ ತಂದಿದೆ: ಸಿದ್ಧಗಂಗಾ ಶ್ರೀಗಳ ಹುಟ್ಟೂರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ವಿಶ್ವ ದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂ ಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.ಗಳ ಅನುದಾನ ಘೋಷಿಸಿರುವುದು ಮತ್ತು ಸಿದ್ಧಗಂಗಾ ಮಠದ ಪ್ರಾರ್ಥನಾ ಮಂದಿರಕ್ಕೆ 5 ಕೋಟಿ ರೂ. ಅನುದಾನ ನೀಡಿರುವುದು ಜಿಲ್ಲೆಯ ಜನರಲ್ಲಿ ಸಮಾಧಾನ ತಂದಿದೆ.
ಸಿದ್ಧ ಗಂಗಾ ಶ್ರೀಗಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಶ್ರೀಗಳ ಹೆಸರಿನಲ್ಲಿ ಬಜೆಟ್‌ನಲ್ಲಿ ಯಾವುದಾದರೂ ಯೋಜನೆ ಮಾಡಬೇಕು. ಅವರ ಹೆಸರು ಶಾಶ್ವತವಾಗಿ ಇರುವಂತೆ ಮಾಡಬೇಕೆನ್ನುವ ಒತ್ತಾಯ ಭಕ್ತರಲ್ಲಿ ಇತ್ತು. ಮುಖ್ಯ ಮಂತ್ರಿ, ಡಿಸಿಎಂ, ಗೃಹ ಸಚಿವರು ಸೇರಿದಂತೆ ಅನೇಕ ಜನಪ್ರನಿಧಿಗಳು ಶ್ರೀಗಳ ಹೆಸರಿನಲ್ಲಿ ಯಾವುದಾದರೂ ಯೋಜನೆ ರೂಪಿಸ ಬೇಕು ಎನ್ನುವುದು ಆಶಯವಾಗಿತ್ತು. ಆದರೆ, ಈಡೇರಲಿಲ್ಲ.
ಸ್ಮರಣೆ ಮಾತ್ರ: ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಸ್ವಾಮೀಜಿ ಯವರ ಹೆಸರಿನಲ್ಲಿ ಯಾವುದಾದರೂ ಒಂದು ಯೋಜನೆ ಪ್ರಕಟಿಸಬಹುದು ಎಂದು ಅಪೇಕ್ಷೆಯನ್ನು ಭಕ್ತರು ಹೊಂದಿ ದ್ದರು. ಆದರೆ, ಮುಖ್ಯಮಂತ್ರಿ ಯವರು ಬಜೆಟ್ ಪ್ರಾರಂಭ ಮಾಡಿದ ಸ್ವಲ್ಪ ಹೊತ್ತಿ ನಲ್ಲಿ ಸಿದ್ಧಗಂಗಾ ಶ್ರೀಗಳು ಮಾಡಿರುವ ಅನ್ನದಾಸೋಹ ಮತ್ತು ಶಿಕ್ಷಣ ದಾಸೋಹ ಸ್ಮರಿಸಿದರು.
ಆದರೆ, ಯಾವುದೇ ಯೋಜನೆ ಘೋಷಣೆ ಮಾಡಿಲಿಲ್ಲ. ವೀರಾಪುರವನ್ನು ದತ್ತು ಪಡೆದು ಅಭಿವೃದ್ಧಿಗಾಗಿ 25 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಅದೇ ರೀತಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಿರ್ಮಾಣ ಮಾಡುತ್ತಿರುವ ಪ್ರಾರ್ಥನಾ ಮಂದಿರಕ್ಕೆ ಐದು ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದಾರೆ. ಆದರೆ, ಭಕ್ತರಿಗೆ ಅವರ ಹೆಸರು ವಿಶ್ವಮಟ್ಟದಲ್ಲಿ ಸದಾ ಇರುವಂಥ ಯೋಜನೆ ರೂಪಿಸಬೇಕೆನ್ನು ವುದು ಒತ್ತಾಯವಾಗಿದೆ.