Advertisement

ಜನಮನ ರಂಜಿಸಿದ ನೃತ್ಯಾರ್ಪಣಂ 

06:00 AM Dec 21, 2018 | |

ಗುರುವು ಕಲೆಯಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡು ಪರಿಪೂರ್ಣತೆಯತ್ತ ಹೆಜ್ಜೆ ಹಾಕಿದಾಗ ಮಾತ್ರ ಶಿಷ್ಯನಲ್ಲಿ ಆ ಕಲೆಯು ಮೈತಳೆಯುವಂತೆ ಮಾಡುವ ಮೂಲಕ ಕಲಾ ಪ್ರೌಢಿಮೆಯನ್ನು ಪಡೆಯಲಿ ಸಾಧ್ಯ ಎಂಬ ಸಂದೇಶವನ್ನು ಕಲಾಸಕ್ತರಿಗೆ ನೀಡಿದವರು ವಿ| ಮಂಜುನಾಥ್‌ ಎನ್‌. ಪುತ್ತೂರು ಹಾಗೂ ದೀಪ್ತಿ ಮಂಜುನಾಥ್‌. ಇವರು ಇತೀ¤ಚೆಗೆ ತಮ್ಮ ಶ್ರೀಮಂಜುನಾಥ ನೃತ್ಯ ಕಲಾ ಶಾಲೆಯ “ನೃತ್ಯಾರ್ಪಣಂ – 2018’ನ್ನು ವಿದ್ಯಾರ್ಥಿಗಳೊಂದಿಗೆ ಯಶಸ್ವಿಯಾಗಿ ಪ್ರಸ್ತುತಪಡಿಸಿದರು.
 
ಮೊದಲಿಗೆ ಆರಭೀ ರಾಗ ಆದಿತಾಳದ ಪುಷ್ಪಾಂಜಲಿಯ ಮೂಲಕ ನಟರಾಜನಿಗೆ, ಅಷ್ಟದಿಕಾಲಕರಿಗೆ ವಂದಿಸಿದ ವಿದ್ಯಾರ್ಥಿಗಳು ನೃತ್ತ ಭಾಗದಲ್ಲಿ ಹಿಡಿತವನ್ನು ಸಾಧಿಸಿದ್ದು, ಭವಿಷ್ಯದಲ್ಲಿ ಉತ್ತಮ ಕಲಾವಿದರಾಗುವ ಎಲ್ಲಾ ಲಕ್ಷಣಗಳನ್ನೂ ತೋರಿದರು. ಕಲ್ಯಾಣಿ ರಾಗ ಆದಿತಾಳದ ಜತಿಸ್ವರದ ಲವಲವಿಕೆಯಿಂದ ಶೀಘ್ರ ಗತಿಯಲ್ಲಿ ಸುಂದರ ವಿನ್ಯಾಸಗಳಿಂದ ಕೂಡಿದ ನೃತ್ತ ಬಂಧವು ಪೇÅಕ್ಷಕರ ಮನಸೂರೆಗೊಂಡಿತು. ನಾಟೆ ರಾಗ ಆದಿತಾಳದ ಗಣೇಶ ಕೌತ್ವಂ, ಪುಟಾಣಿಗಳಿಂದ ಪ್ರದರ್ಶಿಸಲ್ಪಟ್ಟ ಶಂಕರಾಭರಣ ರಾಗ ಆದಿತಾಳದ “ಗುಮ್ಮನ ಕರೆಯದಿರೆ’ , ಶುದ್ಧ ಸಾವೇರಿ ರಾಗ ತ್ರಿಶ್ರ ನಡೆಯ “ಆಡಲು ಪೋಗೋಣ’ ನೃತ್ಯದಲ್ಲಿ ಕೃಷ್ಣನ ಬಾಲಲೀಲೆಗಳು, ಸೀತಾ ಸ್ವಯಂವರ ಸಂಚಾರಿಗಳಲ್ಲಿ ವಿದ್ಯಾರ್ಥಿಗಳು ಮನೋ ಅಭಿನಯವನ್ನು ನೀಡುವ ಮೂಲಕ ತಮ್ಮೊಳಗಿನ ಕಲಾ ಪ್ರೌಢಿಮೆಯನ್ನು ಸಾದರಪಡಿಸಿದರು. ರಾಗಮಾಲಿಕೆ ಆದಿತಾಳದ “ಜಗನೋ¾ಹನನೇ ಕೃಷ್ಣ’ದಲ್ಲಿ ತಾಯಿ ಯಶೋಧೆಗೆ ಬಾಯಲ್ಲಿ ಮೂರು ಜಗವನೇ° ತೋರಿಸಿ ತಾನಾರೆಂಬುದನ್ನು ಜಗತ್ತಿಗೇ ತಿಳಿಸಿದ ಕೃಷ್ಣನ ಅವತಾರ ಹಾಗೂ ಭಸ್ಮಾಸುರ ಮೋಹಿನಿ ಸಂಚಾರಿಗಳು ಭಕ್ತಿಯ ಪರಾಕಾಷ್ಠೆಗೇರುವಂತೆ ಮಾಡಿತು.
 
ರಾಗಮಾಲಿಕೆ ಆದಿತಾಳದ “ಶೋಕಗಳು’, ಮೋಹನ ರಾಗ ಆದಿತಾಳದ “ಮೆಲ್ಲ ಮೆಲ್ಲನೇ ಬಂದನೇ’, ಷಣ್ಮಖಪ್ರಯ ರಾಗ ಆದಿತಾಳದ “ಯಾದವ ನೀ ಬಾ’, ಹಂಸಧ್ವನಿ ರಾಗ ಆದಿತಾಳದ “ಗಜವದನಾ ಬೇಡುವೆ’, ಶುದ್ಧ ಧನ್ಯಾಸಿ ರಾಗ ಆದಿತಾಳದ “ಹಿಮಗಿರಿ ತನಯೇ’, ಸಿಂಧು ಭೈರವೀ ರಾಗ ಆದಿತಾಳದ “ಶೀÅ ಗಣೇಶ’, ಕಲ್ಯಾಣೀ ರಾಗ ಆದಿತಾಳದ “ನೃತ್ಯಧಿ ನೃತ್ಯಧಿ’ ಮುಂತಾದ ನೃತ್ಯದಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧ ಅಡವು, ಅಭಿನಯಗಳಲ್ಲಿ ಭವಿಷ್ಯದ ಉತ್ತಮ ಕಲಾವಿದರಾಗುವ ಎಲ್ಲಾ ಲಕ್ಷಣಗಳಿವೆ. 

Advertisement

ಸ್ವಾಮಿ ವಿವೇಕಾನಂದರ ಶಿಕಾಗೊ ಭಾಷಣದ 125ನೇ ವರ್ಷದ ಸವಿನೆನಪಿಗಾಗಿ “ವೀರ ಸನ್ಯಾಸಿ’ ಎಂಬ ನೃತ್ಯ ರೂಪಕವು ಪ್ರದರ್ಶಿಸಲ್ಪಟ್ಟಿತು. ಕೊನೆಯಲ್ಲಿ ನಾಟೆ ರಾಗ ಆದಿ ತಾಳದ ತಿಲ್ಲಾನವು ಮೈಅಡವುಗಳು, ಅರುಧಿಗಳು ಹಾಗೂ ರಂಗಾಕ್ರಮಣಗಳಿಂದ ಉತ್ತಮ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಒಟ್ಟಿನಲ್ಲಿ ಶ್ರದ್ಧೆ, ಶಿಸ್ತುಬದ್ಧ ಕಲಿಕೆ, ಗುರು ಶಿಷ್ಯರ ಉತ್ತಮ ಬಾಂಧವ್ಯವು ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಸಫ‌ಲವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾದರಪಡಿಸಿತು.

ಹಿಮ್ಮೇಳದಲ್ಲಿ ನಟುವಾಂಗ ಗುರುಗಳಾದ ವಿ| ಮಂಜುನಾಥ್‌ ಎನ್‌. ಪುತ್ತೂರು ಹಾಗೂ ದೀಪ್ತಿ ಮಂಜುನಾಥ್‌, ಹಾಡುಗಾರಿಕೆಯಲ್ಲಿ ವಿ| ಧನ್ಯತಾ ಪುತ್ತೂರು, ಮೃದಂಗದಲ್ಲಿ ವಿ| ಶ್ರೀಧರ್‌ ರೈ, ಕಾಸರಗೋಡು, ಕೊಳಲಿನಲ್ಲಿ ವಿ| ಸುರೇಂದ್ರ ಆಚಾರ್‌ ಕಾಸರಗೋಡು, ಕೀಬೋರ್ಡ್‌ನಲ್ಲಿ ದಿನೇಶ್‌ ರಾವ್‌ ಸುಳ್ಯ ಸಹಕರಿಸಿದರು. 

ಮಂಜುನಾಥ ನೃತ್ಯ ಕಲಾ ಶಾಲೆ ಪ್ರಸ್ತುತಿ
ಶ್ರದ್ಧೆ, ಶಿಸ್ತುಬದ್ಧ ಕಲಿಕೆ, ಗುರು ಶಿಷ್ಯರ ಉತ್ತಮ ಬಾಂಧವ್ಯವು ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಸಫ‌ಲವಾಗಿದೆ ಎಂಬುದನ್ನು ಈ ಕಾರ್ಯಕ್ರಮ ಸಾದರಪಡಿಸಿತು.

– ವೀಣಾ ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next