Advertisement
ಮೂಡಬಿದ್ರೆ ಶ್ರೀ ಮಣಿಕಂಠ ಕ್ಷೇತ್ರದ ರಮೇಶ್ ಶಾಂತಿ ಗುರುಸ್ವಾಮಿ ಮತ್ತು ಶಿವಾನಂದ ಶಾಂತಿ ಗುರುಸ್ವವಾಮಿ ಅವರ ದಿವ್ಯಹಸ್ತದಿಂದ ಮುಂಜಾನೆ 6.30 ರಿಂದ ಗಣಹೋಮ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಮಹಾ ಮಂಗಳಾರತಿಯು ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿಯ ಬಲಭಾಗದಲ್ಲಿ ವಿನಾಯಕ ಹಾಗೂ ಹೂವಿನ ತೂಗುಯ್ನಾಲೆಯಲ್ಲಿ ಅಲಂಕರಿಸಲ್ಪಟ್ಟ ಭ್ರಮರಾಂಬಿಕೆ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಅಲಂಕೃತ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು. ಪೂರ್ವಾಹ್ನ 9 ರಿಂದ ಗಾಯನ ಪನ್ವೇಲ್ ಸುರೇಶ್ ಶೆಟ್ಟಿ ಮತ್ತು ಬಳಗದವರಿಂದ ಭಕ್ತಿ ಸಂಗೀತ ಭಜನ ಕಾರ್ಯಕ್ರಮ ನಡೆಯಿತು.
ವಾಗಿದೆ. ಧಾರ್ಮಿಕ ಚಿಂತನೆಯನ್ನು ಬೆಳೆಸು
ತ್ತಿರುವ ಸಮಿತಿಯ ಈ ಕಾರ್ಯಕ್ರಮವು ಮುಂದೆ
ಇನ್ನಷ್ಟು ವಿಶೇಷವಾಗಿ ಮೂಡಿ ಬಂದು ಭಕ್ತಾದಿ
ಗಳಿಗೆ ಅಯ್ಯಪ್ಪ ಸ್ವಾಮಿಯ ಅನುಗ್ರಹ ಲಭಿಸುವಂ
ತಾಗಲಿ ಎಂದು ನುಡಿದು ಶುಭ ಹಾರೈಸಿದರು. ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ, ಹಿಂದೆ ಬೆರಳೆಣಿಕೆಯ ಸ್ವಾಮಿಗಳಿಂದ ಕಂಡು ಬರುತ್ತಿದ್ದ ಈ ಧಾರ್ಮಿಕ ಉತ್ಸವವು ಇಂದು ನೂರಾರು ಸ್ವಾಮಿಗಳಿಂದ ಕಂಗೊಳಿಸುತ್ತಿದೆ. ಸಮಿತಿಯು 16 ವರ್ಷಗಳಿಂದ ಮಹಾಪೂಜೆಯನ್ನು ಆಚರಿಸುತ್ತಿರುವುದು ಅಭಿಮಾನ ಸಂಗತಿಯಾಗಿದೆ. ಪ್ರತೀ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದಿಂದ ವಸಾಯಿಯ ವಿಶಾಲ ಸಾಯಿನಗರ ಗ್ರೌಂಡ್‌ನಲ್ಲಿ ಆಚರಿಸುತ್ತಿದ್ದೇವೆ. ಪರಿಸರದ ಹೊಟೇಲ್ ಉದ್ಯಮಿಗಳ ಹಾಗೂ ಸಂಘ-ಸಂಸ್ಥೆಗಳ ಕೊಡುಗೆ ಈ ಕಾರ್ಯಕ್ರಮದಲ್ಲಿ ವಿಶೇಷತೆಯಾಗಿದೆ. ದೇವರ ಅನುಗ್ರಹ, ಆಶೀರ್ವಾದ ಭಕ್ತರ ಮೇಲೆ ಸದಾಯಿರಲಿ ಎಂದು ಆಶಿಸಿದರು.
Related Articles
Advertisement
ಸ್ಥಳೀಯ ಸಮಾಜ ಸೇವಕ ನಾಗರಾಜ ಶೆಟ್ಟಿ, ಅಶೋಕ್ ಶೆಟ್ಟಿ, ದೇವೇಂದ್ರ ಬುನ್ನನ್ ಹಾಗೂ ಸ್ಥಳೀಯ ವಿವಿಧ ಸಂಘ-ಸಂಸೆœಗಳ ಪದಾಧಿಕಾರಿಗಳು, ಸದಸ್ಯ, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಮೋಹನ್‌ದಾಸ್ ಎಂ. ಡಿ. ಮತ್ತು ಚಂದ್ರಶೇಖರ ಬಂಗೇರ ಅವರು ದೇವರ ಮಂಟಪವನ್ನು ಅಲಂಕರಿಸಿದ್ದು, ಭಕ್ತಾದಿಗಳನ್ನು ಆಕರ್ಷಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಪ್ರತೀ ವರ್ಷ ಜರಗುತ್ತಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಸಾಯಿ ಪರಿಸರದ ಭಕ್ತರ ಸಹಕಾರ, ಕೊಡುಗೆ ಅಪಾರವಾಗಿದೆ. ಹೊಟೇಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಸಂಘ -ಸಂಸ್ಥೆಗಳ ಸಹಕಾರವನ್ನು ಮರೆಯುವಂತಿಲ್ಲ. ಎಲ್ಲರ ಒಮ್ಮತದ ಕೊಡುಗೆಯಿಂದ ಈ ಧಾರ್ಮಿಕ ಕಾ ರ್ಯಕ್ರಮವು ಶ್ರೀ ಅಯ್ಯಪ್ಪ ಸ್ವಾಮಿ ನೆಲೆಯಲ್ಲಿ ಸಂಭ್ರಮಿಸುವಂತಾಗಿದೆ. ಸಮಿತಿಯ ಗುರುಸ್ವಾಮಿಗಳ ಒಗ್ಗಟ್ಟು ಕೂಡಾ ಈ ಯಶಸ್ಸಿಗೆ ಕಾರಣವಾಗಿದೆ. ಭವಿಷ್ಯದಲ್ಲೂ ನಾವೆ ಲ್ಲರೂ ಒಂದಾಗಿ ಈ ಧಾರ್ಮಿಕ ಉತ್ಸವ ವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿ ಸೋಣ. ಅದಕ್ಕಾಗಿ ಭಕ್ತಾದಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಯಶೋಧರ ವಿ. ಕೋಟ್ಯಾನ್ ಅಧ್ಯಕ್ಷ ಶ್ರೀ ಮಣಿಕಂಠ ಸೇವಾಸಮಿತಿ ವಸಾಯಿ.
ಚಿತ್ರ-ವರದಿ: ರಮೇಶ್ ಉದ್ಯಾವರ