Advertisement

ಮಾ.8-16 : ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ​​​​​​​

12:30 AM Mar 02, 2019 | Team Udayavani |

ಕಾಸರಗೋಡು: ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ. 8ರಿಂದ 16ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ. 19ರಿಂದ 23ರ ವರೆಗೆ ಜಾತ್ರಾ ಮಹೋತ್ಸವ ನಡೆಯುವುದು.

Advertisement

ಮಾ. 8ರಂದು ಬೆಳಗ್ಗೆ 9.30ಕ್ಕೆ ವಿಗ್ರಹ ಮೆರವಣಿಗೆ, ಸಂಜೆ 4.30ಕ್ಕೆ ಪೂಜ್ಯ ಶ್ರೀ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, 5ಕ್ಕೆ ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರಾಗತ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30ರಿಂದ ಆಚಾರ್ಯ ವರಣ, ಸಾಮೂಹಿಕ ಪ್ರಾರ್ಥನೆ, ಬಿಂಬ ಪರಿಗ್ರಹ, ಪ್ರಾಸಾದ ಪರಿಗ್ರಹ, ಪಶುದಾನ, ಪುಣ್ಯಾಹ, ಪ್ರಾಸಾದ ಶುದ್ಧಿ, ಅಂಕುರಾರ್ಪಣೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, 8.30ಕ್ಕೆ ಭಕ್ತಿಗಾನ ಮೇಳ ನಡೆಯಲಿದೆ.

ಎಲ್ಲ ದಿನಗಳಲ್ಲಿ ಮದ್ಯಾಹ್ನ 1ರಿಂದ ಮತ್ತು ರಾತ್ರಿ 8.30ರಿಂದ ಪ್ರಸಾದ ಭೋಜನ ವಿತರಣೆ ನಡೆಯಲಿದೆ.

ಮಾ.9 ರಂದು ಸಂಜೆ 5 ಕ್ಕೆ ಕೊಂಡೆವೂರಿನ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30ಕ್ಕೆ “ಕುಂಭಕರ್ಣನ್‌’ ನಾಟಕ ಪ್ರದರ್ಶನ, ಮಾ.10 ರಂದು ಸಂಜೆ 5.30ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30ಕ್ಕೆ ನಾಟ್ಯ ಸಮನ್ವಿತಂ, ಮಾ. 11ರಂದು ಸಂಜೆ 5.30ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30ಕ್ಕೆ ನೃತ್ಯ ವೈಭವ, 9ಕ್ಕೆ ಯೋಗ ಪ್ರದರ್ಶನ, 9.30 ಕ್ಕೆ ನೃತ್ಯಧಾರೆ ನಡೆಯಲಿದೆ.

ಮಾ.12 ರಂದು ಸಂಜೆ 5.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30ಕ್ಕೆ ಭಕ್ತಿ ಸಂಗೀತ ಸೌರಭ, ಮಾ.13 ರಂದು ಬೆಳಗ್ಗೆ 5 ರಿಂದ ಗಣಪತಿ ಹೋಮ, ಅಧಿವಾಸ ಉದ್ಘಾಟನೆ, 7.10ಕ್ಕೆ ಶ್ರೀ ಮಲ್ಲಿಕಾರ್ಜುನ ದೇವರ ಪುನಃಪ್ರತಿಷ್ಠೆ, ಜೀವ ಕಲಶಾಭಿಷೇಕ, ಅಷ್ಟಬಂಧ ಲೇಪನ, ಶ್ರೀ ಗಣಪತಿ, ಶ್ರೀ ಶಾಸ್ತಾವು ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಸಂಜೆ 5ಕ್ಕೆ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30ರಿಂದ ಯಕ್ಷಗಾನ ಬಯಲಾಟ, 14ರಂದು ಬೆಳಗ್ಗೆ 7.05ಕ್ಕೆ ಅಶ್ವತ್ಥ ಉಪನಯನ, ಬ್ರಹ್ಮಕಲಶ ಮಂಟಪ, ಸಂಸ್ಕಾರ, ದೊಡ್ಡ ಬಲಿಕಲ್ಲು ಪ್ರತಿಷ್ಠೆ, ಸಂಜೆ 5ಕ್ಕೆ ಒಡಿಯೂರಿನ ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿ ಅವರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ 8.30ಕ್ಕೆ ನಾಟ್ಯರಂಗ್‌ ನಡೆಯಲಿದೆ.

Advertisement

ಮಾ.15 ರಂದು ಸಂಜೆ 5.30 ಕ್ಕೆ ಆಚಾರ್ಯ ಸಂಗಮ, ರಾತ್ರಿ 8.30ರಿಂದ “ದೇಶ ಕರೆದಾಗ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. 

ಮಾ.16 ರಂದು ಬೆಳಗ್ಗೆ 5ರಿಂದ ಕವಾಟೋದ್ಘಾಟನೆ, ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ತೈಲಾಭ್ಯಂಜನ, ಉಷಃಪೂಜೆ, ಶತರುದ್ರ ಪಾರಾಯಣ, ಹರಿಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಬ್ರಹ್ಮಕಲಶಾಭಿಷೇಕ, 1.30ಕ್ಕೆ ಮಹಾಪೂಜೆ, ರಾತ್ರಿ 8ರಿಂದ ರಾತ್ರಿ ಪೂಜೆ, ಶ್ರೀ ಭೂತಬಲಿ, ನೃತ್ಯ ಬಲಿ, ರಾಜಾಂಗಣ ಪ್ರಸಾದ, ಸಂಜೆ 5 ಕ್ಕೆ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಸಮಾರೋಪ ಸಮಾರಂಭ, ರಾತ್ರಿ 8.30ರಿಂದ ಶ್ರೀ ಭೂತನಾಥಂ ನಾಟಕ ನಡೆಯಲಿದೆ ಎಂದು ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್‌, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಂ ಪ್ರಸಾದ್‌, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಪಿ. ಮುರಳೀಧರನ್‌, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಕಮಲಾಕ್ಷ, ಜೀರ್ಣೋ ದ್ಧಾರ ಸಮಿತಿ ಉಪಾಧ್ಯಕ್ಷೆ ಜಲಜಾಕ್ಷಿ ಟೀಚರ್‌, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವೆಂಕಟ್ರಮಣ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next