Advertisement

ವಿಗ್ರಹ ಮೆರವಣಿಗೆ,ಹೊರೆಕಾಣಿಕೆ ಶೋಭಾಯಾತ್ರೆ

12:30 AM Mar 09, 2019 | |

ಕಾಸರಗೋಡು: ನಗರದ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾ. 16ರ ವರೆಗೆ ನಡೆಯುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಮಾ. 8ರಂದು ಬೆಳಗ್ಗೆ ಕಡಪ್ಪುರ ಶ್ರೀ ಕುರುಂಬಾ ಭಗವತಿ ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ಗಣಪತಿ, ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ನೂರಾರು ಮಂದಿ ಭಾಗವಹಿಸಿದ ಮೆರವಣಿಗೆಯೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತರಲಾಯಿತು.

Advertisement

ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಕೇಳುಗುಡ್ಡೆ ಶ್ರೀ ಅಯ್ಯಪ್ಪ ಮಂದಿರದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ ಶೋಭಾಯಾತ್ರೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ|ಅನಂತ ಕಾಮತ್‌, ಕಾರ್ಯದರ್ಶಿ ನ್ಯಾಯವಾದಿ ಮುರಳೀಧರನ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಿ.ವಿ. ಪೊದುವಾಳ್‌, ಕಾರ್ಯದರ್ಶಿ ಕಮಲಾಕ್ಷ, ಜಗನ್ನಾಥ ಮೈತ್ರೇಯಿ ಗುರುಕುಲ, ವೆಂಕಟ್ರಮಣ ಹೊಳ್ಳ, ರಾಂಪ್ರಸಾದ್‌, ಸವಿತಾ ಟೀಚರ್‌, ಮೀರಾ ಕಾಮತ್‌, ಸಂಧ್ಯಾ ಶೆಟ್ಟಿ ಮೊದಲಾದವರು ನೇತೃತ್ವ ವಹಿಸಿದರು.

ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಮಾ. 8ರಂದು ಸಂಜೆ ಪೂಜ್ಯ ಶ್ರೀ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
 
ಆ ಬಳಿಕ ರಾತ್ರಿ ಆಚಾರ್ಯ ವರಣ, ಸಾಮೂಹಿಕ ಪ್ರಾರ್ಥನೆ, ಬಿಂಬ ಪರಿಗ್ರಹ, ಪ್ರಾಸಾದ ಪರಿಗ್ರಹ, ಪಶುದಾನ ಪುಣ್ಯಾಹ, ಪ್ರಾಸಾದ ಶುದ್ಧಿ, ಅಂಕುರಾರ್ಪಣೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಜರಗಿತು.ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕಲೈಮಣಿಶ್ರೀ ವೀರಮಣಿ ರಾಜು ಮತ್ತು ಭಕ್ತಿ ಗಂಧರ್ವ ಅಭಿಷೇಕ್‌ ರಾಜು ಬಳಗ ಚೆನ್ನೈ ಅವರಿಂದ ಭಕ್ತಿ ಗಾನಮೇಳ ಜರಗಿತು.

ಇಂದಿನ ಕಾರ್ಯಕ್ರಮ  
ಮಾ. 9ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, ಬಿಂಬ ಶುದ್ಧಿ, ಕಲಶ ಪೂಜೆ, ಬಿಂಬ ಶುದ್ಧಿ  ಕಲಶಾಭಿಷೇಕ  (ಚತುಃ ಶುದ್ಧಿ,   ಪಂಚಕ, ಧಾರೆ), ಪ್ರೋಕ್ತ ಹೋಮ, ಪ್ರಾಯಶ್ಚಿತ್ತ‌ ಹೋಮ, ಹೋಮ ಕಲಶಾಭಿಷೇಕ, 1.30ಕ್ಕೆ  ಮಧ್ಯಾಹ್ನ  ಪೂಜೆ, ರಾತ್ರಿ 7ರಿಂದ ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ, ರಾತ್ರಿ ಪೂಜೆ, ಬೆಳಗ್ಗೆ 8ರಿಂದ 10ರ ವರೆಗೆ ವಿವಿಧ ಭಜನಾ ಸಂಸ್ಥೆ ಗಳಿಂದ ಭಜನೆ, 11ಕ್ಕೆ     ಶಾಸ್ತಿÅàಯ ಸಂಗೀತ, 12ಕ್ಕೆ ಹರಿಕಥೆ, ಸಂಜೆ 5ಕ್ಕೆ ಕೊಂಡೆವೂರಿನ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೂರ್ಣ ಕುಂಭ ಸ್ವಾಗತ, 5.30 ಧಾರ್ಮಿಕ ಸಭೆ ನಡೆಯಲಿದೆ.   ರಾತ್ರಿ 8.30ರಿಂದ ಅಕ್ಷಯಶ್ರೀ ತಿರುವ ನಂತಪುರ ಸಾದರ ಪಡಿಸುವ “ಕುಂಭಕರ್ಣನ್‌’ ನಾಟಕ ಪ್ರದರ್ಶನಗೊಳ್ಳಲಿದೆ.

Advertisement

ಚಿತ್ರ : ಗೋಕುಲ್‌ ಝೂಮ್‌

Advertisement

Udayavani is now on Telegram. Click here to join our channel and stay updated with the latest news.

Next