ಹನೂರು: ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಬೆಳ್ಳಿ ರಥೋತ್ಸವದ ಸಮಯವನ್ನು ನಿಗದಿ ಮಾಡಲಾಗಿದ್ದು ಹರಕೆ ಹೊತ್ತ ಭಕ್ತಾದಿ ಗಳು 2,001 ರೂ. ಗಳನ್ನು ಪಾವತಿಸಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಕಾರ್ಯಾಯಿನಿ ದೇವಿ ಹೇಳಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬೆಳ್ಳಿ ರಥದ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ಬೆಳ್ಳಿ ರಥಕ್ಕೆ ಹೂ ತಳಿರು ತೋರಣ ಗಳಿಂದ ಸಿಂಗರಿಸಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ಬಳಿಕ ದೇವಾಲಯದ ಸುತ್ತಲೂ ಒಂದು ಪ್ರದಕ್ಷಿಣೆ ಹಾಕುವ ಮೂಲಕ ಬೆಳ್ಳಿ ರಥವನ್ನು ಲೋಕಾ ರ್ಪಣೆ ಗೊಳಿಸಲಾಯಿತು.
ರಥದ ವಿಶೇಷತೆಗಳು: ಶ್ರೀ ಕ್ಷೇತ್ರ ಮಲೆ ಮಹ ದೇಶ್ವರ ಬೆಟ್ಟದಲ್ಲಿ ನೂತನ ಬೆಳ್ಳಿ ರಥವನ್ನು ನಿರ್ಮಾಣ ಮಾಡಲು ಕಳೆದ 5 ವರ್ಷಗಳ ಹಿಂದೆ ಪ್ರಾಧಿಕಾರದ ಸಭೆಯಲ್ಲಿ ಅನುಮೋ ದನೆ ಪಡೆದುಕೊಂಡು ಮೊದಲಿಗೆ ತೇಗದ ಮರದ ರಥವನ್ನು 2020ರಲ್ಲಿ ಸಿದ್ಧ ಪಡಿಸಲಾಯಿತು. ಬಳಿಕ ಅಂದಾಜು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ 450 ಕೆ.ಜಿ. ಬೆಳ್ಳಿ ಬಳಕೆ ಮಾಡಿ ಈ ರಥವನ್ನು ಸಿದ್ಧಪಡಿಸಲಾಗಿದೆ.
ಈ ರಥವು 17 ಅಡಿ ಎತ್ತರವಿದ್ದು ಕಳೆದ 3 ವರ್ಷಗಳ ಕರಕುಶಲ ಕರ್ಮಿಗಳ ಅವಿತರ ಶ್ರಮದಿಂದ ಭಾನುವಾರ ಲೋಕಾರ್ಪಣೆಗೊಳಿಸಲಾಗಿದೆ. ಈ ರಥಕ್ಕೆ ಅವಶ್ಯ ವಾಗಿದ್ದ ಬೆಳ್ಳಿಯನ್ನು ಭಕ್ತಾದಿಗಳಿಂ ದಲೇ ಸಂಗ್ರಹ ಮಾಡಿದ್ದು ಬೆಂಗಳೂರು ಮೂಲಕ ಲಕ್ಷ್ಮೀಪತಿ ಎಂಬ ಭಕ್ತಾದಿಗಳು 25 ಕೆ.ಜಿ. ಬೆಳ್ಳಿಯನ್ನು ಡಿ.2ರಂದು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ್ದರು.
ಇನ್ನು ಈ ರಥಕ್ಕೆ ಮಜೂರಿ ಹಣವಾಗಿ 24 ಲಕ್ಷ ರೂ. ವೆಚ್ಚ ತಗುಲಿದ್ದು ಈ ಮಜೂರಿ ಹಣವನ್ನು ನೆರೆಯ ತಮಿಳುನಾಡು ರಾಜ್ಯದ ಮೋಹನ್ ರಾಮ್ ಶೇ.50 ಮತ್ತು ಬೆಂಗಳೂರಿನ ರಾಜಾಜಿನಗರದ ಲಿಂ. ಹುಲಿಕುಂಟೆ ಶಿವಣ್ಣ ಮತ್ತು ಸಿದ್ಧಮ್ಮ ದಂಪತಿ ಸುಪುತ್ರರಾದ ಎಸ್.ಸೋಮಶೇಖರ್ ಮತ್ತು ಸುಜಾತ ಸೋಮಶೇಖರ್ ಕುಟುಂಬಸ್ಥರು ಭರಿಸಿದ್ದಾರೆ.
ಶಾಸಕ ಎಂ.ಆರ್.ಮಂಜು ನಾಥ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭ ವಸ್ವಾಮಿ, ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಸ್ಥಳೀಯ ಮುಖಂಡರು ಹಾಗೂ ಭಕ್ತಾದಿಗಳು ಇದ್ದರು.